ಪುಟ್ಟರಾಜ ಗವಾಯಿಗಳು ಅಂದರ ಬಾಳಿನ ಆಶಾಕಿರಣ
ಪುಟ್ಟರಾಜ ಗವಾಯಿಗಳು ಅಂದರ ಬಾಳಿನ ಆಶಾಕಿರಣ
ಕಲಬುರಗಿ: ಅಂದ ಅನಾಥ ಬಾಳಿನ ಆಶಾಕಿರಣ ಪೂಜ್ಯ ಶ್ರೀ ಡಾ.ಪಂ. ಪುಟ್ಟರಾಜ ಗವಾಯಿಗಳು ಎಂದು ಸಿದ್ದೇಶ್ವರ ಶಾಸ್ತ್ರಿಗಳು ಹೇಳಿದರು.
ನಗರದ ವಿಜಯನಗರ ಕಾಲೋನಿಯ ಅನ್ನಪೂರ್ಣ ಸಂಗೀತ ಶಾಲೆ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ. 14ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಗುರುಗಳ ಭಾವ ಚಿತ್ರಕ್ಕೆ ಪುಷ್ಪಾರ್ಪಣೆಗೈದು ಮಾತನಾಡಿದ ಯುವ ವಾಗ್ಮಿಗಳು ಪುಟ್ಟರಾಜ ಗವಾಯಿ ಶಿಷ್ಯರಾದ ಶ್ರೀ ಬಂಡಯ್ಯ ಸ್ವಾಮೀಜಿ ಸಂಸ್ಥಾನ ಹಿರೇಮಠ ಸುಂಟನೂರ ಶರಣರ ವಚನ ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ ಎಂದು ಬರೆದಿದ್ದಾರೆ ಆದರೆ ಪುಟ್ಟರಾಜ ಗುರುಗಳು ಇಲ್ಲಿಯೂ ಸಲ್ಲದವರನ್ನು ಅಲ್ಲಿಯೂ ಸಲ್ಲದವರನ್ನು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಲಹಿ ಎಲ್ಲಿಯು ಸಲ್ಲದವರನ್ನ ಜಗತ್ತಿನಲ್ಲಿ ಸಲುವಾಗಿ ಮಾಡಿದ್ದಾರೆ ಜಾತಿ ಮತ ಮೇಲು ಕೀಲುಗಳಿಲ್ಲದೆ ಸರ್ವ ಜನಾಂಗದ ಶಾಂತಿಯ ತೋಟ ಎಂದು ಸಂಗೀತ. ಸಾಹಿತ್ಯ .ನಾಟಕ ಶಿಕ್ಷಣದ ಜೊತೆಗೆ ಲಕ್ಷಾಂತರ ಮಕ್ಕಳಿಗೆ ಸಂಸ್ಕಾರ ನೀಡುವ ಮಹಾನ ಸಂತರು ಎಂದರು ನಾಡಿ ಜ್ಯೋತಿಷ್ಯ ವಿದ್ವಾಂಮಣಿಗಳಾದ ಶ್ರೀ ಸಿದ್ದೇಶ್ವರ ಶಾಸ್ತ್ರಿಗಳು ಮಾತನಾಡಿ ಪುಟ್ಟರಾಜ ಗವಾಯಿಗಳು ನಮ ನಮ್ಮ ಭಾರತ ದೇಶದ ಅಗ್ರಗಣ್ಯ ಮಾನ್ಯರು ಇವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ಕೊಡಬೇಕು ಎಂದು ಆಗ್ರಹಿಸಿದರು