ಹಸಿದವನಿಗಷ್ಟೇ ಗೊತ್ತು ತುತ್ತಿನ ಮಹತ್ವ"-ಡಾ. ಪಾರ್ವತಿ ಹರ್ಷ ಭೀಮಳ್ಳಿ

ಹಸಿದವನಿಗಷ್ಟೇ  ಗೊತ್ತು ತುತ್ತಿನ ಮಹತ್ವ"-ಡಾ. ಪಾರ್ವತಿ ಹರ್ಷ ಭೀಮಳ್ಳಿ

ವಿಶ್ವ ಆಹಾರ ದಿನ

"ಹಸಿದವನಿಗಷ್ಟೇ ಗೊತ್ತು ತುತ್ತಿನ ಮಹತ್ವ"

ಹಸಿವು ಜಗತ್ತಿನ ಪರಮ ವೈರಿ, ಹಸಿವು ನಿವಾರಣೆ ಆಗಬೇಕು ಅಂದರೆ ಆಹಾರ ಬೇಕು. ಆಹಾರದ ನಮ್ಮೆಲರ ಪಾಲಿನ ಅಮೃತ ಎಂದರೂ ತಪ್ಪಾಗಲಿಕಿಲ್ಲ, ಏಕೆಂದರೆ ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ಜೀವದಾನ ನೀಡುವುದು "ಆಹಾರ". ಆಹಾರ ಇಲ್ಲ ಎಂದರೆ ಭೂಮಿ ಮೇಲೆ ಜೀವಿಗಳು ಬದುಕಲು ಸಾಧ್ಯವೇ ಆಗುತ್ತಿರಲಿಲ್ಲ. ಹಸಿದುಕೊಂಡವನಿಗಷ್ಟೇ, ಆಹಾರದ ಮಹತ್ವ, ಮೌಲ್ಯ ತಿಳಿಯುವುದು. ಹಾಗಾಗಿ ಹಸಿವಿನ ಮಹತ್ವ, ಅಗತ್ಯ ಜಾಗತಿಕ ಮಟ್ಟದಲ್ಲಿ ಹಸಿವಿನ ಸಮಸ್ಯೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಆಹಾರದಿನವನ್ನು ಆಚರಿಸಲಾಗುತ್ತದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಸ್ಥಾಪನೆಯ ವಾರ್ಷಿಕೋತ್ಸವವನ್ನು ಗುರುತಿಸಲು ಪ್ರತಿ ವರ್ಷ ಅಕ್ಟೋಬರ್ ೧೬ ರಂದು ವಿಶ್ವ ಆಹಾರ ದಿನವೆಂದು ಆಚರಿಸಲಾಗುತ್ತದೆ. ಈ ಅಂತರಾಷ್ಟ್ರಿಯ ದಿನವು ಆಹಾರ ಭದ್ರತೆ ಮತ್ತು ಪೋಷಣೆಯ ಮಹತ್ವವನ್ನು ಎತ್ತಿತೋರಿಸುತ್ತದೆ. ಹಸಿವನ್ನು ಕೊನೆಗೊಳಿಸಲು ಮತ್ತು ಎಲ್ಲರಿಗು ಸುರಕ್ಷಿತ ಪೌಷ್ಟಿಕ ಆಹಾರದ ಪ್ರವೇಶವನ್ನು ಖಚಿತ ಪಡಿಸಿಕೊಳ್ಳುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಹೇಳುತ್ತದೆ. ಹಸಿವು, ಅಪೌಷ್ಟಿಕತೆ ಮತ್ತು ಆಹಾರ ವ್ಯರ್ಥದಂಥಹ ಜಾಗತಿಕ ಸವಾಲುಗಳು ಮುಂದುವರಿಯದಂತೆ ಆರೋಗ್ಯಕರ ಹಸಿವು ಮುಕ್ತ ಜಗತ್ತಿಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಪರಿಹಾರಗಳ್ಳನ್ನು ಉತ್ತೇಜಿಸುವಲ್ಲಿ, ವಿಶ್ವ ಆಹಾರ ದಿನವು ವ್ಯಕ್ತಿಗಳನ್ನು, ಶಾಲೆಗಳನ್ನು, ಸಮುದಾಯಗಳನ್ನು ಮತ್ತು ಸರ್ಕಾರ ಗಳನ್ನು ಒಂದು ಗೂಡಿಸುತ್ತದೆ.

 2025 ರ ವಿಶ್ವ ಆಹಾರ ದಿನದ ಧೇಯ್ಯ ವಾಕ್ಯ (ಥೀಮ್) "ಉತ್ತಮ ಆಹಾರ ಉತ್ತಮ ಭವಿಷ್ಯಕ್ಕಾಗಿ ಕೈಜೋಡಿಸಿ" ಎಂದು ಸುಸ್ಥಿರ ಮತ್ತು ಆಹಾರ ಸುರಕ್ಷಿತ ಭವಿಷ್ಯವನ್ನು ಸೃಷ್ಟಿಸಲು ಜಾಗತಿಕ ಸಹಯೋಗಕ್ಕೆ ಕರೆನೀಡುತ್ತದೆ. ಆಹಾರ ಮತ್ತು ಕೃಷಿ ಸಂಸ್ಥೆಯ (FAO) 80 ನೇ ವಾರ್ಷಿಕೋತ್ಸವದೊಂದಿಗೆ ಹೊಂದಿಕೆ ಯಾಗುವ ಈ ವಿಷಯವು ಕೃಷಿ ಆಹಾರ ವ್ಯವಸ್ಥೆ ಗಳ್ಳನ್ನು ಪರಿವರ್ತಿಸಲು ಮತ್ತು ಶಾಂತಿಯುತ, ಸಮೃದ್ಧ ಜಗತ್ತನ್ನು ಸಾದಿಸಲು ತೆಲೆಮಾರುಗಳು, ವಲಯಗಳು ಮತ್ತು ಸಮುದಾಯಗಳಾದ್ಯಂತ ಪಾಲುದಾರಿಕೆಗಳ ಮಹತ್ವ ವನ್ನು ಎತ್ತಿ ಹೇಳುತ್ತದೆ. ಇದಲ್ಲದೆ ಈ ಥೀಮ್ ನಾಲ್ಕು ಪ್ರಮುಖ ಆಧಾರ ಸ್ತಂಭಗಳ ಕಡೆಗೆ ಕೆಲಸ ಮಾಡಲು ಜಾಗತಿಕ ಸಹಯೋಗಕ್ಕೆ ಒತ್ತು ನೀಡುತ್ತದೆ. ಉತ್ತಮ ಉತ್ಪಾದನೆ, ಉತ್ತಮ ಪೋಷಣೆ, ಉತ್ತಮ ಪರಿಸರ ಮತ್ತು ಉತ್ತಮ ಜೀವನದ ಬಗ್ಗೆ ಹೇಳುತ್ತದೆ. ಉತ್ತಮ ಆಹಾರ ವ್ಯವಸ್ಥೆಗಳ ನಿರ್ಮಾಣದಲ್ಲಿ ಎಲ್ಲರ ಪಾತ್ರವಿದೆ. ಹಸಿವು ಆಹಾರದ ಅಸಮತೋಲನ ಮತ್ತು ಆಹಾರ ವ್ಯರ್ಥವನ್ನು ನಿವಾರಿಸಲು ಜಾಗತಿಕ ಸಹಕಾರ ಅಗತ್ಯವಾಗಿದೆ.

ಡಾ. ಪಾರ್ವತಿ ಹರ್ಷ ಭೀಮಳ್ಳಿ

ಆಹಾರ ತಜ್ಞರು   ,ಹೈ.ಕ.ಶಿ.ಸಂಸ್ಥೆಯ (ರಿ.)  ,ಸಂಗಮೇಶ್ವರ ಭೋದನಾ ಆಸ್ಪತ್ರೆ  ಕಲಬುರಗಿ