ಇಂದಿನ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೆತರ ಚಟುವಟಿಕೆ ಅನಿವಾರ್ಯ. - ಸೇಡಂ ಶ್ರೀಗಳು.

ಇಂದಿನ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೆತರ ಚಟುವಟಿಕೆ ಅನಿವಾರ್ಯ. -	ಸೇಡಂ ಶ್ರೀಗಳು.

ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ೨೬ನೇ ವಾರ್ಷಿಕೋತ್ಸವ ಹಾಗು ಗಣೇಶ ಉತ್ಸವಾ ೨೦೨೪ರ 

ಇಂದಿನ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೆತರ ಚಟುವಟಿಕೆ ಅನಿವಾರ್ಯ.

- ಸೇಡಂ ಶ್ರೀಗಳು. 

ಇಂದಿನ ದಿನಮಾನಗಳಲ್ಲಿ ಮಕ್ಕಳು ಪಠ್ಯದ ವಿಧ್ಯಾಭ್ಯಾಸ ಚೆನ್ನಾಗಿ ಮಾಡುತ್ತಿದ್ದಾರೆ ಆದರೆ ಈ ಸಣ್ಣ ಮಕ್ಕಳಿಗೆ ದೈಹಿಕವಾಗಿ ಎಷ್ಟು ಸದ್ರಡವಾಗಿ ಬೆಳೆಯಬೇಕು ಅಷ್ಟು ಬೆಳೆಯುತ್ತಿಲ್ಲ ಕಾರಣ ಮೈದಾನದಲ್ಲಿ ಆಡುವದಕ್ಕಿಂತ ಫೋನಿನಲ್ಲಿ ನೋಡುವುದು ಮತ್ತು ಗೇಮ್ ಆಡುತ್ತಿರುವ ಮಕ್ಕಳಿಗೆ ಬುದ್ದಿಮಟ್ಟ ಹೆಚ್ಚಾಗುತಿರುವುದರಲ್ಲಿ ಸಂದೇಹವಿಲ್ಲ ಆದರೆ ದೈಹಿಕವಾಗಿ ಬೆಳೆದೆಇರುವುದು ವಿಷಾದನೆಯ ಯನ್ನುತ್ತ ಇಲ್ಲಿ ವಿಧ್ಯಾನಗರದ ವಿಧ್ಯವಂತ ಯುವಕರು ಈ ರೀತಿ ಸಂಸ್ಕ್ರತಿಕ ಮತ್ತು ಕ್ರೀಡೆ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಮುಂದಾಗಿರುವುದು ಸಂತೋಷದಾಯಕ ಜೊತೆಗೆ ಮಕ್ಕಳಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುತ್ತಿರುವ ವಿಧ್ಯಾನಗರದ ಪಾಲಕರ ಪಾತ್ರ ಮೆಚ್ಚುವಂತಹದು ಎಂದು ಸೇಡಂನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು ಮಾತನಾಡಿದ್ದಾರೆ.

ದಿನಾಂಕ: ೧೧-೦೯-೨೦೨೪ ಕಲಬುರಗಿ ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಲ್ಲಿರುವ ವಿಧ್ಯಾನಗರ ಕಾಲೋನಿಯ ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ೨೬ನೇ ವಾರ್ಷಿಕೋತ್ಸವ ಹಾಗೂ ೫ ದಿನದ ಗಣೇಶ ಉತ್ಸವ ೨೦೨೪ರ ನಿಮಿತ್ಯ ಹಮ್ಮಿಕೊಂಡ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸುತ್ತ ಅನೇಕ ಹಬ್ಬ ಹರಿದಿನಗಳ ಕುರಿತು ಆಧ್ಯಾತ್ಮಿಕ ವಿಚಾರಗಳು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡುತ್ತ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಸ್ಪರ್ಧೆಗಳಲ್ಲಿ ಈ ವರ್ಷ ನೀರಿಕ್ಷೆ ಮೀರಿ ಅಂದರೆ ೧೧೫ಕ್ಕಿಂತ ಹೆಚ್ಚು ಮಕ್ಕಳು ಓಟ, ಕ್ರೀಕೆಟ, ಸೈಕ್ಲಿಂಗ, ಹಗ್ಗದಾಟ, ನೃತ್ಯ ವಚನ ಪಠಣ, ಗಾಯನ, ಕಥೆ, ಹೀಗೆ ೨೫ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ೭೫ ಮಕ್ಕಳು ಹಾಗು ಮಹಿಳೆಯರಿಗು ಪ್ರಥಮ, ದ್ವಿತಿಯ,ಹಾಗೂ ತ್ರುತಿಯ ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು ಮಕ್ಕಳಿಗೆ ಪೂಜ್ಯರಿಂದ ಆಶೀರ್ವಾದಿಸಲಾಯಿತು. 

ಪ್ರಾರಂಭದಲ್ಲಿ ಶ್ರೀನಿಧಿ ಕೋಳಕೂರ ಭರತನಾಟ್ಯ ಮಾಡಿದರು, ಪೂರ್ವಿ ರ‍್ಯಾಕಾ ಪ್ರಥನೆ ಗೀತೆ ಹಾಡಿದರು ಕರಣ ಅಂದೋಲ ಸ್ವಾಗತಿಸಿದರು ಗುರುರಾಜ ಮುಗಳಿ ನಿರೂಪಣೆ ಮಾಡಿದರು, ಸಂತೋಷ ನಿಂಬೂರ ವಂದಿಸಿದರು, ಸಂಗಮೇಶ ಹೆಬ್ಬಾಳ ಪ್ರಶಸ್ತಿ ಪಟ್ಟಿ ಪ್ರಕಟಿಸಿದರು ಶಶಿಧರ ಪ್ಯಾಟಿ, ಸಂಜು ತಂಬಾಕೆ, ಶ್ರೀವತ್ಸ ಸಂಗೋಳಗೆ, ಕ್ರುತಿಕಾ ಹೆಬ್ಬಾಳ, ಸೃಜನಾ ಅವಂಟೆ, ಪ್ರೀಯಾ ನಾಗಶೆಟ್ಟಿ, ಪದ್ಮಾ ಆಂದೋಲಾ ಕಾರ್ಯಕ್ರಮದ ನಿರ್ವಹಣೆ ಮಾಡಿದರು ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೆ ಸ್ವರಾಂಜಲಿ ಮೆಲೋಡಿಸ್ ಸಂಗೀತಾ ಕಲವಿದರಾದ ಸಿದ್ದರಾಮ ಹಂಚಿನಾಳ, ಸುಜಾತ ಸ್ವಾಮಿ ಹಾಗೂ ಅರುಣ ತೆಗೆನೂರ ಅವರಿಂದ ಸಂಗೀತಾ ಕಾರ್ಯಕ್ರಮ ಜರುಗಿತು ಕೊನೆಯಲ್ಲಿ ಶ್ರೀ ಶರಣಬಸವೇಶ್ವರ ಕೆರೆಯಲ್ಲಿ ಗಣೇಶ ವಿಸರ್ಜಿಸಲಾಯಿತು ಎಂದು ಸಂಘದ ಅಧ್ಯಕ್ಷ ಶಿವರಾವ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.