ಕಲ್ಯಾಣ ಕರ್ನಾಟಕ ಸ್ವಾತಂತ್ರ‍್ಯದ ಒಂದು ನೋಟ

ಕಲ್ಯಾಣ ಕರ್ನಾಟಕ  ಸ್ವಾತಂತ್ರ‍್ಯದ ಒಂದು ನೋಟ

ಕಲ್ಯಾಣ ಕರ್ನಾಟಕಕದ ಸ್ವಾತಂತ್ರ‍್ಯ ಒಂದು ನೋಟ 

 ಕಲ್ಯಾಣ ಕರ್ನಾಟಕ ಸ್ವಾತಂತ್ರ‍್ಯ ದಿನಾಚರಣೆ ಸೆಪ್ಟೆಂಬರ್ ೧೭ ಭಾರತಕ್ಕೆ ಸ್ವಾತಂತ್ರ‍್ಯ ದೊರೆತಾಗ ಕಲ್ಯಾಣ ಕರ್ನಾಟಕ ಭಾಗ ಇನ್ನೂ ನಿಜಾಮನ ಆಳ್ವಿಕೆಯಲ್ಲಿತ್ತು.

ಭಾರತಕ್ಕೆ ಸ್ವಾತಂತ್ರ‍್ಯ ದೊರೆತಿದ್ದು ಆಗಸ್ಟ್ ೧೫, ೧೯೪೭; ಆದರೆ ಕಲ್ಯಾಣ ಕರ್ನಾಟಕಕ್ಕೆ ಸ್ವಾತಂತ್ರ‍್ಯ ಸಿಕ್ಕಿದ್ದು ಸೆಪ್ಟೆಂಬರ್ ೧೭, ೧೯೪೮ರಲ್ಲಿ ಆಗ ಕಲ್ಯಾಣ ಕರ್ನಾಟಕ ರಜಾಕರ ಕಪಿಮುಷ್ಠಿಯಲ್ಲಿತ್ತು. ಅತ್ಯಾಚಾರ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವನ್ನು ಕಲ್ಯಾಣ ಕರ್ನಾಟಕದ ಜನರು ಅನುಭವಿಸಿದ್ದಾರೆ. ಎಂದು ಭಾರತೀಯ ಜನತಾ ಪಕ್ಷದ ವೈದ್ಯಕೀಯ ಪ್ರಕೋಷ್ಠ ರಾಜ್ಯ ಸದಸ್ಯರು, ಬಿಜೆಪಿ ರಾಜ್ಯ ಮಾಧ್ಯಮ ಪ್ಯಾನೆಲಿಸ್ಟ್ನ್ ಡಾ. ಸುಧಾ ಆರ್ ಹಾಲಕಾಯಿ ಹೇಳಿದ್ದಾರೆ.

ಸರ್ದಾರ್ ವಲ್ಲಭ ಭಾಯ್ ಪಟೇಲರ ನೇತೃತ್ವದಲ್ಲಿ ಮಿಲಿಟರಿ ಕಾರ್ಯಾಚರಣೆಯ ಮೂಲಕ ರಜಾಕರ ದಬ್ಬಾಳಿಕೆಯನ್ನು ಅಂತ್ಯಗೊಳಿಸಲಾಯಿತು. ಹೈದರಾಬಾದ್ ಪ್ರಾಂತ್ಯವನ್ನು ಭಾರತದೊಳಗೆ ವಿಲೀಗೊಳಿಸಲಾಯಿತು. ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗ ರಜಾಕರ ದಬ್ಬಾಳಿಕೆಯ ಪ್ರಭಾವದಿಂದ ಅಭಿವೃದ್ಧಿ ಸಾಧ್ಯವಾಗಿಲ್ಲ ಎನ್ನುವ ಎಲ್ಲ ಕಾಲಕ್ಕೂ ಅನ್ವಯಿಸುವಂತಿಲ್ಲ. ಸ್ವಾತಂತ್ರ‍್ಯ ದೊರೆತು ೫೦ ವರ್ಷಗಳ ಕಾಲ ಕಾಂಗ್ರೆಸ್ ಸರಕಾರಗಳು ಆಳ್ವಿಕೆ ನಡೆಸಿದರೂ ಈ ಭಾಗದ ಪರಿಸ್ಥಿತಿ ಬದಲಾಗಲಿಲ್ಲ.

೨೦೧೯ರಲ್ಲಿ ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟರೂ ಇಲ್ಲಿನ ಅಭಿವೃದ್ಧಿಗೆ ಆದ್ಯತೆ ಸಿಕ್ಕಿಲ್ಲ. ೧೫ನೇ ಹಣಕಾಸು ಯೋಝನೆಯಲ್ಲಿ ಎನ್‌ಕೆ ಸಿಂಗ್ ಅವರು- ಈ ಭಾಗದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದಿದ್ದರು. ಅರವಿಂದ್ ಪಾಣ ಗ್ರಾಹಿ ವರದಿ ಕೂಡ ಅದನ್ನೇ ಹೇಳಿತ್ತು. ನಂಜುಂಡಪ್ಪ ವರದಿಯಲ್ಲಿ ೩೯ ತಾಲೂಕುಗಳು ಅತಿ ಹಿಂದುಳಿದ ಪ್ರದೇಶಗಳೆಂದು ಹೇಳಲಾಗಿದೆ. ಇವುಗಳ ಪೈಕಿ ೨೧ ತಾಲೂಕುಗಳು ಕಲ್ಯಾಣ ಕರ್ನಾಟಕದಲ್ಲೇ ಇವೆ. ಮೈಸೂರು ಕರ್ನಾಟಕಕ್ಕೆ ಹೋಲಿಸಿದರೆ ಇಲ್ಲಿನ ಅಭಿವೃದ್ಧಿ ಏನೂ ಅಲ್ಲ. ಲೋಕಸಭೆ ಚುನಾವಣೆ ವೇಳೆ ಎನ್‌ಡಿಟಿವಿ ಚರ್ಚೆಯ ವೇಳೆ, ಈ ಪ್ರಶ್ನೆ ಬಂದಿತ್ತು. ಕಲ್ಯಾಣ ಕರ್ನಾಟದಕ ತೋಘರಿಘೆ ಭೀಮಾ ಬ್ರಾಂಡ್ , ಕಮಲಾಪುರ ಕೆಂಪು ಬಾಳೆಹಣ್ಣು ಘೇ ಜಿಎ ಟ್ಯಾಗ್ ಕೊಟ್ಟಿದರೂ ಅದನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಂದೇಒಯಲ್ಲಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಸಿಮೆಂಟ್ ಫ್ಯಾಕ್ಟರಿ ಬಿಟ್ಟರೆ ಬೇರೆ ಯಾವುದೂ ಕೈಗಾರಿಕೆಗಳಿಲ್ಲ. ಬಹಳ ಬಿಸಿಲಿನ ಪ್ರದೇಶವಿದರು ಸೋಲಾರ್ ಪ್ಲಾಂಟ್ ಮಾಡಲಿಲ್ಲ .

ಕೋವಿಡ್ ೨ ಮತ್ತು ೩ ಅಲೆಯ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಶನ್ ಮತ್ತು ರಾಮಕೃಷ್ಣ ಆಶ್ರಮದ ಸಹಯೋಗದಲ್ಲಿ ಬಹಳಷ್ಟು ಸೇವಾ ಕಾರ್ಯಗಳು ನಮ್ಮಿಂದ ಮಾಡಲಾಗಿಥೂ. ಒಬ್ಬರು ಸಣ್ಣದಾಗಿ ಮುತುವರ್ಜಿ ವಹಿಸಿದರೂ ದೊಡ್ಡ ಬದಲಾವಣೆ ಮಾಡಲು ಸಾಧ್ಯ. ಹಾಗಿರುವಾಗ ಸರಕಾರ ಯಾಕೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಆಸಕ್ತಿ ತೋರಿಲ್ಲ? ಸಾವಿರಾರು ಕೋಟಿ ರೂ.,ಗಳ ಅನುದಾನವಿದ್ದರೂ ಯಾಕೆ ಅಭಿವೃದ್ಧಿ ಆಗ್ತಾ ಇಲ್ಲ? ಶಿಕ್ಷಣ ಕ್ಷೇತ್ರವನ್ನು ತೆಗೆದುಕೊಂಡರೆ, ಕಲ್ಯಾಣ ಕರ್ನಾಟಕ (ಕಲಬುರಗಿ ಜಿಲ್ಲೆ-೨೮ನೇ ಸ್ಥಾನದಲ್ಲಿತ್ತು. ಈಗ ೩೪ನೇ ಸ್ಥಾನಕ್ಕೆ ಬಂದಿದೆ) ಬಹಳ ಹಿಂದುಳಿದೆ. ಅಪರಾಧ ಪ್ರಕರಣಗಳು ಮಿತಿಮೀರಿವೆ. ನಮ್ಮ ಕಲ್ಯಾಣ ಕರ್ನಾಟಕಕ್ಕೆ ಅಭಿವೃದ್ಧಿಯ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ವಿದ್ಯಾಭ್ಯಾಸ, ಆರೋಗ್ಯ, ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕು.

ಈ ಭಾಗದಲ್ಲಿ ಭೀಮಾ ನದಿಯಿದೆ. ಪ್ರವಾಸೊದ್ಯಮ ಆಗಲಿ, ನೀರಾವರಿ ವಿಚಾರದಲ್ಲಾಗಲಿ ಭೀಮಾ ನದಿ ಕೇಂದ್ರಿತ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದ್ದರೂ ಅದು ಆಗಿಲ್ಲ. ಯಾಕೆ ಈ ಭಾಗವನ್ನು ಕಾಯಂ ಆಗಿ ಹಿಂದುಳಿದ ಭಾಗವೆಂದೇ ಬಿಂಬಿಸಬೇಕು? ಅಭಿವೃದ್ಧಿ ಮಾಡಿ ಮುಂದುವರಿದ ಭಾಗವಾಗಿ ಏಕೆ ಬೆಳೆಸಬಾರದು? ಎಲ್ಲರೂ ಒಗ್ಗಟ್ಟಾಗಿ ನಿಂತು ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿ ಮಾಡಿ ತೋರಿಸಬೇಕು. ಕೌಶಲ್ಯಾಭಿವೃದ್ಧಿ ಆಗಬೇಕು. ಸಣ್ಣ ಸಣ್ಣ ಹೆಜ್ಜೆಗಳೇ ಮುಂದೆ ದೊಡ್ಡ ಬದಲಾವಣೆಗೆ ನಾಂದಿಯಾಗ್ತವೆ. ಎಂದು ಡಾ. ಸುಧಾ ಆರ್ ಹಾಲಕಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.