ಎಚ್ ಕೆ ಇ ಸಂಸ್ಥೆಯ ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ 13,14 ಸೆಪ್ಟೆಂಬರ್ 2024 ರಂದು 2 ದಿನಗಳ ವಿಚಾರ ಸಂಕಿರಣ
ಎಚ್ ಕೆ ಇ ಸಂಸ್ಥೆಯ ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ 13,14 ಸೆಪ್ಟೆಂಬರ್ 2024 ರಂದು 2 ದಿನಗಳ ವಿಚಾರ ಸಂಕಿರಣ
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನಲ್ಲಿ ದಿನಾಂಕ 13,14 ಸೆಪ್ಟೆಂಬರ್ 2024 ರಂದು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಲ್ಲಿ ಪರಿವರ್ತಕ ಮತ್ತು ಹೊಂದಿಕೊಳ್ಳುವ ತಂತ್ರಜ್ಞಾನಗಳ ಕುರಿತು ಎರಡು ದಿನಗಳ ಕಾಲ ಪ್ರಾಧ್ಯಾಪಕರಿಗೆ ಕೌಶಲ್ಯ ತರಬೇತಿ ಹಾಗೂ ವಿಚಾರ ಸಂಕಿರಣ ನಡೆಯಲಿದೆ.
ಈ ಎರಡುದಿನಗಳ ವಿಚಾರ ಸಂಕಿರಣದಲ್ಲಿ ಹರಿಯಾಣದ ಕೇಂದ್ರೀಯ ವಿಶ್ವವಿದ್ಯಾಲಯದ ಟ್ರೇನಿಂಗ್ ಮತ್ತು ಪ್ಲೇಸ್ಮೆಂಟ್ ನಿರ್ದೇಶಕರಾದ ಡಾ ಆಕಾಶ ಸಕ್ಸೇನಾ ಭಾಗವಹಿಸಲಿದ್ದಾರೆ.ಈ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ ನಮೋಶಿ ಹಾಗೂ ಉಪಾಧ್ಯಕ್ಷರಾದ ಶ್ರೀ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿಗಳಾದ ಶ್ರೀ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಹಾಗೂ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಲೇಜಿನ ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್ ಉಪ ಪ್ರಾಚಾರ್ಯರಾದ ಡಾ ಎಸ್ ಆರ್ ಹೊಟ್ಟಿ,ಡಾ ಭಾರತಿ ಹರಸೂರ, ಇಲೆಕ್ಟ್ರೀಕ್ ಮತ್ತು ಇಲೇಕ್ಟ್ರಾನಿಕ್ಸ ವಿಭಾಗದ ಮುಖ್ಯಸ್ಥರಾದ ಪ್ರೊ ಮೃತ್ಯುಂಜಯ ಆಸ್ಪಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಧ್ಯಮ ಸಂಯೋಜಕ ಶ್ರೀ ಐ ಕೆ ಪಾಟೀಲ್ ತಿಳಿಸಿದರು