ಶ್ರೀ ಹಿಂಗುಲಾಕಬಿಕಾ ಆಯುರ್ವೇದಿಕ್ ಮೆಡಿಕಲ್ ಕಾಲೇಜ್‌ನಲ್ಲಿ ದತ್ತಿ ಉಪನ್ಯಾಸ ಮತ್ತು ಪುಸ್ತಕ ಬಿಡುಗಡೆ
ಶ್ರೀ ಹಿಂಗುಲಾಕಬಿಕಾ ಆಯುರ್ವೇದಿಕ್ ಮೆಡಿಕಲ್ ಕಾಲೇಜ್‌ನಲ್ಲಿ ದತ್ತಿ ಉಪನ್ಯಾಸ ಮತ್ತು ಪುಸ್ತಕ ಬಿಡುಗಡೆ
ಕಲಬುರಗಿ: ಸೇಡಂ ರಸ್ತೆಯಲ್ಲಿರುವ ಶ್ರೀ ಹಿಂಗುಲಾಂಬಿಕಾ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದಿವಂಗತ ಡಾ. ನಾಗರೆಡ್ಡಿ ಪಾಟೀಲ್ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮೈಂಡ್ ಡಾಕ್ಟರ್ಸ್ ಮೈಂಡ್ ಎಂಬ ಪುಸ್ತಕವನ್ನು ಖ್ಯಾತ ಮನೋವಿಜ್ಞಾನಿ, ಪದ್ಮಶ್ರೀ ಡಾ.ಸಿ.ಆರ್. ಚಂದ್ರಶೇಖರ್ ಬಿಡುಗಡೆಗೋಳಿಸಿದರು.
ಡಾ. ಸಿಆರ್ ಚಂದ್ರಶೇಖರ್ ಅವರು ಮಾತನಾಡಿ ಆಧುನಿಕ ಜೀವನ ಶೈಲಿ ಮಾನಸಿಕ ಒತ್ತಡ ಅನಾರೋಗ್ಯಕರ ಆಹಾರ ಇತ್ಯಾದಿಗಳ ಕಾರಣದಿಂದ ಹದಿಯೇ ಹರೆಯದವರಲ್ಲಿ ಹೃದಯ ಅಪಘಾತ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತಿದೆ ಹಾಗೂ ವ್ಯಾಯಾಮ ಚಿತ್ರಕಲೆ ನೃತ್ಯ ಸಂಗೀತದಂತಹ ಒಳ್ಳೆಯ ಹವ್ಯಾಸಗಳು ಹಾಗೂ ಸಕಾರಾತ್ಮಕ ವಿಚಾರಗಳು ಸಕಾಲ ನಿದ್ರೆ ಉತ್ತಮ ಆಹಾರ ಸಮಾಜದಲ್ಲಿ ಬೆರೆಯುವುದು ಇತ್ಯಾದಿಗಳು ಹದಿಹರೆಯದವರಲ್ಲಿ ಸಂಪೂರ್ಣ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಸಹಾಯಕವಾಗುತ್ತದೆ ಎಂದು ತಿಳಿಸಿದರು. ಈ ಕಾರ್ಯಕ್ರಮವು ಫೇಸ್ ಬುಕ್ ನಲ್ಲಿಯೂ ಕೂಡ ಉಪಲಬ್ಧವಿದ್ದು ಕಲ್ಯಾಣ ಕರ್ನಾಟಕದ ಅನೇಕ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸವನ್ನು ಆಲಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಲ್ಲಮ ಪ್ರಭು ಗುಡ್ಡ, ಡಾ. ನಾಗಿ ರೆಡ್ಡಿ ಪಾಟೀಲ್ ಅವರ ಸುಪು ತ್ರೀ, ಡಾ. ಸೀಮಾ ಸೋಮಶೇಖರ್ ರೆಡ್ಡಿ, ಡಾ.ಸುಹರಣಿ, ಡಾ. ವೀಣಾ, ಕಾಲೇಜಿನ ಆಸ್ಪತ್ರೆಯ ಅಧ್ಯಕ್ಷಕಿ ಡಾ. ವಿಜಯಲಕ್ಷ್ಮಿ, ನಿರ್ದೇಶಕಿ ಡಾ. ಇಂದಿರಾ ಶಕ್ತಿ ಲೋಯ, ಕಾಲೇಜಿನ ಅಧ್ಯಕ್ಷ ಸುರೇಶ್ ಬುಲ್‌ಬುಲೆ, ಕಾರ್ಯದರ್ಶಿ ನರೇಶ್ ತಾಂಬಳೆ ತಾಂಬಳೆ ಸೇರಿದಂತೆ ಆಯುರ್ವೇದಿಕ ವೈದ್ಯಕೀಯ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.