ಮನಸ್ಸನ್ನು ಪ್ರಶಾಂತವಾಗಿ ಇಡುವುದೆ ಆನಂದಮಯಾ ಜೀವನದ ಮೂಲ: ಬಿ.ಕೆ. ವೀಣಾ

ಮನಸ್ಸನ್ನು ಪ್ರಶಾಂತವಾಗಿ ಇಡುವುದೆ ಆನಂದಮಯಾ ಜೀವನದ ಮೂಲ: ಬಿ.ಕೆ. ವೀಣಾ

ಮನಸ್ಸನ್ನು ಪ್ರಶಾಂತವಾಗಿ ಇಡುವುದೆ ಆನಂದಮಯಾ ಜೀವನದ ಮೂಲ: ಬಿ.ಕೆ. ವೀಣಾ

ಕಮಲನಗರ:ಮನಸ್ಸನ್ನು ಪ್ರಶಾಂತವಾಗಿ ಇಡುವುದೆ ಆನಂದಮಯಾ ಜೀವನದ ನಿಜವಾದ ಮೂಲ, ಜೀವನದ ಚಿಕ್ಕ ಪುಟ್ಟ ವಿಚಾರಗಳಿಗೆ ಮತ್ತು ಇತರರು ಜೀವನ ನೋಡಿ ನಮ್ಮ ಮನಸ್ಸನ್ನು ವಿಚಾಲಿತ ವಾಗದಂತೆ ಮಾಡಬಾರದು ಎಂದು ಬಿ. ಕೆ. ವೀಣಾ ಬಹನಜಿ ನುಡಿದರು.

ಪಟ್ಟಣದ ಶರಣಬಸಪ್ಪ ಪಬ್ಲಿಕ ಶಾಲೆಯಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶಾಖೆ ಕಮಲನಗರ ವತಿಯಿಂದ ಆಯೋಜಿಸಿದ "ಶರಣರು ಕಂಡ ಶಿವ" ಮೂರನೇ ದಿವಸದ ರಾಜಯೋಗ ಶಿಬಿರ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು.

ಸ್ವಾರ್ಥಕ್ಕಾಗಿ ಬದುಕ್ಕುವುದು ಬಿಟ್ಟು ಪರಮಾತ್ಮನ ಧ್ಯಾನವನ್ನು ಮಾಡಿ ತಮ್ಮ ಜೀವನ ಸಾರ್ಥಕತೆ ಚಿಂತನೆ ಮಾಡಿದಾಗ, ಮನಸು ಹಗುರವಾಗಿ ಮನಸಿನಲ್ಲಿ ಒಂದು ಸಕಾರಾತ್ಮ ಶಕ್ತಿ ಉತ್ಪತ್ತಿಯಾಗುತ್ತದೆ ಇದರಿಂದ ಮನಸು ಆನಂದ ವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕಿನ ಪತ್ರಕರ್ತರನ್ನು ಮುಖ್ಯ ಅತಿಥಿಗಾಗಿ ಕರೆಯಲಾಗಿತ್ತು. 12 ಜ್ಯೋತಿರ್ಲಿಂಗ ಒಂದು ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಿ ಎಲ್ಲರ ದರ್ಶನ ಭಾಗ್ಯ ನೀಡಿದರು. ಅತಿಥಿಗಳು ಮೊದಲಿಗೆ ಎಲ್ಲಾ ಜ್ಯೋತಿರ್ಲಿಂಗಗಳಿಗೆ ಹೂವಿನ ಹಾರಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಿ.ಕೆ. ಸುಮಂಗಲಾ,

ಬಿ. ಕೆ. ಜಯಶ್ರೀ ಬೆಹನಜಿಯರು, ತಾಲೂಕಿನ ಪತ್ರಕರ್ತರಾದ ಡಾ. ಎಸ್. ಎಸ್. ಮೈನಾಳೆ, ಭಾವುರಾವ ಹೇಡೆ, ಸಿ. ಎಮ್ ಗಳಿಗೆ, ಮನೋಜ ಹಿರೇಮಠ, ರಾಜಶೇಖರ ಅಜ್ಜಾ,ಪರಮೇಶ ರಾಂಪುರೆ, ಸಂಗಮೇಶ್ವರ ಮುರ್ಕೆ, ಶಿವಕುಮಾರ ಏಕಲಾರೆ, ಮೊಯಿನ ಸೇರಿದಂತೆ ಇನ್ನಿತರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು.

ಬಿ. ಕೆ. ಲಕ್ಷ್ಮಿ ಬೆಹನಜೀ ಸ್ವಾಗತಿಸಿ, ವಂದಿಸಿದರು.