ತೋನಸನಹಳ್ಳಿ : ಇಂದು ಡಾ. ಬಿಆರ್ ಅಂಬೇಡ್ಕರ್ ರವರ ಪ್ರತಿಮೆ ಅನಾವರಣ

ತೋನಸನಹಳ್ಳಿ : ಇಂದು ಡಾ. ಬಿಆರ್ ಅಂಬೇಡ್ಕರ್ ರವರ ಪ್ರತಿಮೆ ಅನಾವರಣ

ತೋನಸನಹಳ್ಳಿ : ಇಂದು ಡಾ. ಬಿಆರ್ ಅಂಬೇಡ್ಕರ್ ರವರ ಪ್ರತಿಮೆ ಅನಾವರಣ 

ನಾಗರಾಜ್ ದಂಡಾವತಿ ವರದಿ ಕಲ್ಯಾಣ ಕಹಳೆ ಪತ್ರಿಕೆ 

ಶಹಾಬಾದ : - ತಾಲ್ಲೂಕಿನ ತೋನಸನಹಳ್ಳಿ (ಎಸ) ಗ್ರಾಮದಲ್ಲಿ ಇಂದು ಬುಧವಾರ ಡಿ.31 ರಂದು ಬೆಳಿಗ್ಗೆ 11 ಗಂಟೆಗೆ ಡಾ.ಬಿಆರ ಅಂಬೇಡ್ಕ‌ರ್ ರವರ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ತೋನಸನಹಳ್ಳಿ ಗ್ರಾಮದ ಗ್ರಾಮಸ್ಥರು ತಿಳಿಸಿದರು.

ತಾಲ್ಲೂಕ ಪತ್ರಕರ್ತರ ಜೊತೆ ಮಾತನಾಡಿದ ಗ್ರಾಮಸ್ಥರು, ಅಣದೂರಿನ ಬೌದ್ಧ ವಿಹಾರದ ವರಜ್ಯೋತಿ ಭಂತೆಜೀ, ಅಲ್ಲಮಪ್ರಭು ಸಂಸ್ಥಾನದ ಪೂಜ್ಯರಾದ ಡಾ.ಮಲ್ಲಣಪ್ಪ ಮಹಾಸ್ವಾಮಿಗಳು, ಸಂಗಮೇಶ್ವರ ಸಂಸ್ಥಾನದ ಪೂಜ್ಯರಾದ ಚರಂತೇಶ್ವರ ಶಿವಾಚಾರ್ಯರು, ಪೂಜ್ಯ ಕೋತ್ತಲಪ್ಪ ಮುತ್ಯಾ ರವರು ದಿವ್ಯಾ ಸಾನಿಧ್ಯ ವಹಿಸಿಕೊಳ್ಳುವರು.

ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಬಿವೃದ್ದಿ ಪಂಚಾಯತರಾಜ, ಐಟಿಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಯವರು ಸಭೆಯ ಉಧ್ಘಾಟನೆ ಮಾಡಲಿದ್ದಾರೆ.

ಡಾ. ಬಿಆರ ಅಂಬೇಡ್ಕರ್ ರವರ ಪ್ರತಿಮೆಯನ್ನು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ರವರು ಅನಾವರಣ ಗೊಳಿಸಲಿದ್ದಾರೆ.

ದಸಂಸ ರಾಜ್ಯ ಸಂ ಸಂಚಾಲಕ ಮರಿಯಪ್ಪ ಹಳ್ಳಿ ಯವರು ಪಂಚಶೀಲ ಧ್ವಜ ಹಾಗೂ ಧಮ್ಮಚಕ್ರ ಧ್ವಜವನ್ನು ಕಾಡಾ ಅಧ್ಯಕ್ಷ ಡಾ ಎಂ ಎ ರಶೀದ ರವರು ಧ್ವಜಾರೋಹಣ ನೆರವೇರಿಸಲಿದ್ದಾರೆ.

ಪ್ರತಿಮೆ ಉಧ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಮುತ್ತಮ್ಮ ಮರತೂರ ರವರು ವಹಿಸಿ ಕೊಳ್ಳಲಿದ್ದಾರೆ ಹಾಗೆ ಜಿಲ್ಲೆಯ, ತಾಲ್ಲೂಕಿನ ವಿವಿಧ ಪಕ್ಷಗಳ ಮತ್ತು ಧರ್ಮಗಳ ಮುಖಂಡರು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದು ತೋನಸನಹಳ್ಳಿ(ಎಸ) ಗ್ರಾಮಸ್ಥರು ತಿಳಿಸಿದರು.

ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದ್ದು ಊಟದ ವ್ಯವಸ್ಥೆ ಮಾಡಲಾಗಿದೆ. 

ತಾಲ್ಲೂಕಿನ ಅಂಬೇಡ್ಕರ್ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.