ಕನಕದಾಸರ ಜಯಂತಿ ಒಂದೇ ವರ್ಗಕ್ಕೆ ಸೀಮಿತವಾಗಬಾರದು: ರಮೇಶ್.
ಕನಕದಾಸರ ಜಯಂತಿ ಒಂದೇ ವರ್ಗಕ್ಕೆ ಸೀಮಿತವಾಗಬಾರದು: ರಮೇಶ್.
ಹುಮನಾಬಾದ್: ಕನಕದಾಸರು ಸಮಾಜದಲ್ಲಿ ಸಮನತೆಯಾಗಿ ಕೀರ್ತಿನೆಗಳ ಮೂಲಕ ಜನಸಾಮಾನ್ಯರಾಡುವ ಭಾಷೆಯಲ್ಲಿಯೇ ತಿಳಿಹೇಳಿ ಸಮಾಜ ಸುಧಾಕರಾಗಿದ್ಧಾರೆ , ಕನಕದಾಸರ ಜಯಂತಿ ಒಂದು ವರ್ಗಕ್ಕೆ ಸೀಮಿತವಾಗಬಾರದು ಎಲ್ಲಾ ವರ್ಗದವರು ಆಚರಿಸಬೇಕು ಎಂದು ರಮೇಶ್ ಪಟ್ಟಣದ ಹುಮನಾಬಾದ್ ಡಿಪೋ ಘಟಕ ಆವರಣದಲ್ಲಿ ಕನಕದಾಸರ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತ ನುಡಿದರು,
ಎಲ್ಲರಿಗೂ ಸಮಾ ಪಾಲು ಸಮ ಬಾಳು ಎಂದು ಸಂದೇಶವನ್ನು ಕೊಟ್ಟಿದ್ದಾರೆ ಇಂಥ ಮಹನೀಯರ ಜಯಂತಿಯನ್ನು ಇಡೀ ರಾಜ್ಯದಲ್ಲಿ ಹಾಗೂ ಹಳ್ಳಿ ಹಳ್ಳಿಗಳಲ್ಲಿ ಆಚರಣೆ ಮಾಡುತ್ತಿದ್ದಾರೆ ಅಂತಹ ದಾರ್ಶನಿಕರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು, ಕನಕದಾಸರು ಕೀರ್ತನೆಗಳು ಹಾಡುಗಳು ಹಾಗು ಸಂದೇಶಗಳು ಮೂಲಕ ಶಾಶ್ವತವಾಗಿ ನಮ್ಮೊಂದಿಗೆ ಇದ್ದಾರೆ, ಜೀವನ ಕೊನೆ ಉಸಿರುವರೆಗೂ ಸಂಗೀತ, ಸಾಹಿತ್ಯ ದಾಸರಾದರು, ತತ್ವಶಾಸ್ತ್ರದ ದೊಂದಿಗೆ ಸಂಗೀತ ಮತ್ತು ಸಾಹಿತ್ಯವನ್ನು ರಚಿಸಲು ತಮ್ಮ ಜೀವನವನ್ನು ಮುಡುಪಾಗಿಟ್ಟವರು, ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಅತ್ಯಂತ ಸರಳವಾದ ಭಾಷೆಯಲ್ಲಿ ಕೃತಿಗಳನ್ನು ರಚಿಸಿ ಕರ್ನಾಟಕ ಸಂಗೀತ ಅತ್ಯುತ್ತ ಕೊಡುಗೆ ನೀಡಿದ್ದಾರೆ , , 16ನೇ ಶತಮಾನದಲ್ಲಿ ಜಾತಿ ಪದ್ಧತಿಯನ್ನು ಹೋಗಲಾಡಿಸಲು ಹೋರಾಡಿದರು ಕುಲಕುಲ ಕುಲವೆಂದು ಹೊಡೆದಾಡಬೇಡಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಎನ್ನುವ ಅದ್ಭುತ ಸಂದೇಶವನ್ನು ನೀಡಿದರು, ಆತ್ಮ ಯಾವ ಕುಲ ಎಂದು ಕುಲದ ಮೂಲವನ್ನು ಪ್ರಶ್ನಿಸಿ ಆತ್ಮವಿಮರ್ಶೆಗೆ ಪ್ರೇರೆಪೀಸಿದರು , ಈ ಸಂದರ್ಭದಲ್ಲಿ ಕಾರ್ತಿಕ್ ಸ್ವಾಮಿ, ಗುಂಡಪ್ಪ ನಾಗಪ್ಪ, ಸತೀಶ್ ಕೈಲಾಸ್, ರಾಜಕುಮಾರ್ ಸಂಜು ರೆಡ್ಡಿ, ಗುಂಡಪ್ಪ, ದೇವೇಂದ್ರ ಸಂಜು ಕುಮಾರ್ ಹಾಗೂ ಬಸ್ ಕಂಡಕ್ಟರ್ ಹಾಗೂ ಚಾಲಕರು , ಸಿಬ್ಬಂದಿ ವರ್ಗವರು ಅನೇಕರಿದ್ದರು, ಈ ಕಾರ್ಯಕ್ರಮದ ಆರಂಭದಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಕೊಡೋರಿಗಿಟ್ಟು ಮೆರೆವಣಿಗೆಯಲ್ಲಿ ಡೋಳುಕುಣಿತೊಂದಿಗೆ ಬಸ್ ಚಾಲಕರು , ಕಂಡಕ್ಟರ ಗಳು, ಸಿಬ್ಬಂದಿ ವರ್ಗವವರು, ಹೆಜ್ಜೆ ಮೇಲೆ ಹೆಜ್ಜೆ ಹಾಕುವುದೊಂದಿಗೆ ಕುಣಿದು ಕುಪ್ಪಳಿಸಿದರು,