ಪರಿಪೂರ್ಣ ವೆಂಬ ವ್ಯಸನ.
ಪರಿಪೂರ್ಣ ವೆಂಬ ವ್ಯಸನ.
ಪರಿಪೂರ್ಣತೆಯ ಸೋಗು ಒಮ್ಮೊಮ್ಮೆ
ರೇಜಿಗೆ ಮೂಡಿಸುವದು..
ಯಾಕಾಗಿ , ಯಾರಿಗಾಗಿ.
ಒಳ್ಳೆಯ ಹೆಂಡತಿ , ಒಳ್ಳೆಯ ತಾಯಿ , ಒಳ್ಳೆಯ ಗೃಹಿಣಿ.
ಒಳ್ಳೆತನದ ಗೀಳು ಅಂಟಿದೆಯೇ ನನಗೆ..!
ಕಳಚಿದರೆ ಸಮಾಜದ ಭಯ.
ನನಗೂ ಕಿರೀಟದ ವ್ಯಸನ.
ಮಾಡಬೇಕೊಮ್ಮೆ ಸೀಮೊಲಂಘನ
ಸೀಮಾತೀತ ಲೋಕದೊಳು ಲೀನವಾಗಬೇಕು.
ಅಲ್ಲೊಂದು ಶೂನ್ಯ.
ನನ್ನದೇ ಏಕಾಂತ.
ವೈನಿನೊಂದಿಗಿನ ಸಂಜೆಗಳು.
ಮೋಹಗಳಿಲ್ಲದ ಕ್ಷಣಗಳು. ಅಲ್ಲಿ
ನಾನು , ಕೇವಲ ನನ್ನೊಂದಿಗೆ ನಾನು.
ದಿಗ್ಗನೆ ಎಚ್ಚರ.ದುಗುಡ.
ಎನೆಲ್ಲ ಕಳೆದುಕೊಂಡ ತಳಮಳ
ಮತ್ತದೆ ಸಂಸಾರದ ಮೋಹ
ಬಾವಿಯೊಳಗಿನ ಕಪ್ಪೆಯಂತೆ.
ಇಲ್ಲಿ ದೂರುಗಳು ನಿರರ್ಥಕ.
ನನ್ನ ಹಿಡಿದಿಟ್ಟವರಾರು..!
ನಾನೆ ಹಿಡಿಯಲ್ಪಡಿಸಿಕೊಂಡವಳು.
ನನ್ನದು ಎಂಬ ಅಹಂ ನಡಿಯಲ್ಲಿ
ಬಿಟ್ಟರೆ , ನನ್ನ ಅಸ್ಥಿತ್ವಕ್ಕೆ ಬೆಲೆ ..!
ಗುಟ್ಟು ಬಲ್ಲ ಜಾಣೆ.
ಇಲ್ಲಿ ನಾನಾರೆಂದು ಮರೆತು ಬದುಕಿದರೆ ಶಾಂತಿ
ಮೋಹಗಳ ಮುಷ್ಟಿ ತುಸು ಸಡಿಲಿಸಿದರೆ ನಿರಾಳ
ಎಲ್ಲವೂ ನನ್ನದೆ ಎಂಬ ಭಾವ ಬಿಟ್ಟರೆ ಸುಖ
ನಾನು ಬರಿದೆ ಹೇಳುವೆ.
ನಾನೂ ಇವೆಲ್ಲವುಗಳ ಮೋಹಕ್ಕೊಳಪಟ್ಟವಳು
ಇವಳು , ಅವಳು , ಎಲ್ಲರೂ .
ಎಲ್ಲರೂ ಪರಿಪೂರ್ಣ ತೆಯ ಪ್ರಯತ್ನ ದಲ್ಲಿರುವವರೆ.
ನಾನು , ನನ್ನ ಮುಂದಿನ ತಲೆಮಾರು..
ಜ್ಯೋತಿ , ಡಿ .ಬೊಮ್ಮಾ.
ಕವಿತೆಯ ಸಾರ
ಇಲ್ಲಿ ಯಾರು ಪರಿಪೂರ್ಣರಲ್ಲ. ಎಲ್ಲರೂ ಪರಿಪೂರ್ಣ ಆಗಬೇಕೆನ್ನುವ ಹಂಬಲದವರೇ ಹೀಗಾಗಿ ಪರಿಪೂರ್ಣತೆಗಾಗಿ ಸಾಗುವ ದಾರಿಯ ನೋಟವೇ ವ್ಯಸನ ಈ ಕವಿತೆಯ ಒಳಾರ್ಥ ಮೇಲ್ನೋಟಕ್ಕೆ ತೋರುತ್ತದೆ .ಕಲ್ಯಾಣ ಕಹಳೆ ಪತ್ರಿಕೆ ಅನಿಸಿಕೆ