ಮಂಡ್ಯದಲ್ಲಿ ಹಿಂಸಾಚರ 46 ಮಂದಿ ಬಂಧಿಸಿದ ಪೊಲೀಸರು

ಮಂಡ್ಯ: ನಗರದ ನಾಗಮಂಗಲದಲ್ಲಿ ಗಣೇಶ ಮೂರ್ತಿ ಮೆರವಣಿಗೆ ಸಮಯದಲ್ಲಿ ಗುಂಪು ಘರ್ಷಣೆ ನಡೆದಿದೆ ಈ ಸಂದರ್ಭದಲ್ಲಿ 46 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಗುಂಪಿನ ನಡುವೆ ಕಲ್ಲು ತೂರಾಟವೇಳೆ ಪೊಲೀಸರಿಗೆ ಮತ್ತು ಕೆಲವು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಸದ್ಯ ಬಿಗಿವಿನ ವಾತಾವರಣ ಇದೆ.
ಸೆಪ್ಟೆಂಬರ್ 14 ರವರೆಗೆ 144 ಕಲಂ ಜಾರಿಗೊಳಿಸಲಾಗಿದ್ದು. ಪರಿಸ್ಥಿತಿ ಹತೋಟಿಗೆ ತರಲು ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಎಂದು ತಿಳಿದುಬಂದಿದೆ.
ಬುಧವಾರ ನಡೆದ ಘಟನೆ ಸಂಭಂದಿಸಿದಂತೆ 46 ಜನರನ್ನು ಬಂಧಿಸಲಾಗಿದೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪಿಟಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಬದರಿಕೊಪ್ಪಲು ಗ್ರಾಮದ ಜನರು ಬುಧವಾರ ಗಣೇಶ ಮೂರ್ತಿ ಮೆರವಣಿಗೆ ಪೂಜಾ ಸ್ಥಳಕ್ಕೆ ತಲುಪಿದಾಗ 2 ಗುಂಪಿನವರು ಮಾತಿಗೆ ಮಾತು ಬೆಳೆಸಿ ಕಲ್ಲು ತೂರಾಡಿ ,ಕೆಲವು ಕಿಡಿಗೇಡಿಗಳಿಂದ ಅಂಗಡಿಗಳನ್ನು ದ್ವಂಶಗೊಳಿಸಿ , ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ಹೇಳಿದರು.
ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮೆರವಣಿಗೆ ನಡೆಸಿದ ಯುವಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು