ರೇಷನ್ ಕಾರ್ಡಿನಲ್ಲಿ ಗೊಂದಲ: ಎಸಯುಸಿಐ ಪ್ರತಿಭಟನೆ.

ರೇಷನ್ ಕಾರ್ಡಿನಲ್ಲಿ ಗೊಂದಲ: ಎಸಯುಸಿಐ ಪ್ರತಿಭಟನೆ.

ರೇಷನ್ ಕಾರ್ಡಿನಲ್ಲಿ ಗೊಂದಲ: ಎಸಯುಸಿಐ ಪ್ರತಿಭಟನೆ.

ಶಹಾಬಾದ್: ವಾರ್ಷಿಕ ಆದಾಯ ಕೇವಲ ಒಂದು ಲಕ್ಷ 20 ಸಾವಿರ ರೂಪಾಯಿಗಳನ್ನು ಆದಾಯ ಹೊಂದಿರುವುದನ್ನು ಶ್ರೀಮಂತರ ಎಂದು ಪರಿಗಣಿಸಿ ಪಡಿತರ ಚೀಟಿಯನ್ನು ಶಾಶ್ವತವಾಗಿ ರದ್ದುಗೊಳಿಸುವ ಸರ್ಕಾರದ ಹೊನ್ನಾರದ ವಿರುದ್ಧ ಜನರು ಪ್ರಬಲ ಹೋರಾಟ ಬೆಳೆಸಬೇಕು ಎಂದು ಎಸ್ ಯು ಸಿ ಐ (ಸಿ) ಪಕ್ಷದ ಕಾರ್ಯದರ್ಶಿ ಗಣಪತರಾವ ಕೆ.ಮಾನೆ ಹೇಳಿದರು.

ಸೋಷಿಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಸೋಮವಾರ ಬಸವೇಶ್ವರ ವೃತ್ತದಲ್ಲಿ ರೇಷನ್ ಕಾರ್ಡಿನಲ್ಲಿ ಉಂಟಾದ ಗೊಂದಲ ಸೃಷ್ಟಿಸಿದ ಸರ್ಕಾರದ ನೀತಿಯ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಅಗತ್ಯವಿರುವ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿ, ಜನರ ಬದುಕನ್ನು ದುಸ್ತರ ಮಾಡುತ್ತಿರುವುದು ಒಂದು ಕಡೆ ಆದರೆ, ಮತ್ತೊಂದು ಕಡೆ ಪಡಿತರ ಚೀಟಿಯಲ್ಲಿ ಗೊಂದಲವನ್ನು ಸೃಷ್ಟಿಸಿ ನಕಲಿ ರೇಷನ್ ಕಾರ್ಡ್ ಹಿಡಿಯುವ ನೆಪದಲ್ಲಿ ಜನರಲ್ಲಿ ಆತಂಕ ಸೃಷ್ಟಿಸಿರುವುದು ಸರಿಯಲ್ಲ. ಅವೈಜ್ಞಾನಿಕ ಆದಾಯ ಮಿತಿಯನ್ನು ಹಾಕಿರುವುದು ಜನ ವಿರುದ್ಧವಾಗಿದೆ, ಸರ್ಕಾರದ ಈ ನಡೆಯು ಅಮಾನವೀಯವಾಗಿದ್ದು, ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಸದಸ್ಯರಾದ ರಾಘವೇಂದ್ರ ಎಂ.ಜಿ ಮಾತನಾಡಿ ರೇಷನ್ ಕಾರ್ಡಿನ ಗೊಂದಲವನ್ನು ಆದಷ್ಟು ಬೇಗ ಪರಿಹರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರೇಡ್ 2 ತಹಸಿಲ್ದಾರ್ ಗುರುರಾಜ ಸಂಗಾವಿ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಗನ್ನಾಥ ಎಸ್. ಹೆಚ್, ಭಾಗಣ್ಣಾ ಬುಕ್ಕ, ಗುಂಡಮ್ಮ ಮಡಿವಾಳ, ರಾಜೇಂದ್ರ ಅತನೂರ, ಸಿದ್ದು ಚೌಧರಿ, ರಘು ಪವಾರ, ರಮೇಶ ದೇವಕರ, ನೀಲಕಂಠ ಹುಲಿ, ಅಜಯ, ಬಾಬು ಪವಾರ, ಮಹಾದೇವಿ ಮಾನೆ, ಅಂಬಿಕಾ ಗುರಜಾಲಕರ, ರಾಧಿಕಾ ಚೌಧರಿ, ಶಾಮ ಪವರ, ಆನಂದ, ಶ್ರೀನಿವಾಸ್ ದಂಡಗುಲ್ಕರ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.