ಕಲಬುರಗಿ ಜಿಲ್ಲೆಯ ಅಭಿವೃದ್ದಿಗಾಗಿ ಸಿಎಂಗೆ ಒತ್ತಾಯ

ಕಲಬುರಗಿ ಜಿಲ್ಲೆಯ ಅಭಿವೃದ್ದಿಗಾಗಿ ಸಿಎಂಗೆ ಒತ್ತಾಯ

ಕಲಬುರಗಿ ಜಿಲ್ಲೆಯ ಅಭಿವೃದ್ದಿಗಾಗಿ ಸಿಎಂಗೆ ಒತ್ತಾಯ

ಕಲಬುರಗಿ: ಜಿಲ್ಲೆಯು ತುಂಬಾ ಹಿಂದುಳಿದ ಪ್ರದೇಶವಾಗಿದ್ದು,ಇದಕ್ಕೆ ಈಗಾಗಲೇ 371 (ಜೆ) ಅಡಿಯಲ್ಲಿ ಮಾನ್ಯತೆ ನೀಡಿದ್ದು ಆದರೆ ಅಭಿವೃದ್ಧಿ ಕಾರ್ಯ ಮಾತ್ರ ಶೂನ್ಯವಾಗುತ್ತಿವೆ.ಈ ನಮ್ಮ ಜಿಲ್ಲೆಯ ಪ್ರಮುಖ ನಗರ, ಹಳ್ಳಿಗಳಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಸಂಚಾರಕ್ಕಾಗಿ ತುಂಬಾ ಪರದಾಡುತ್ತಿದ್ದಾರೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಆನಂದ ತೆಗನೂರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡರು. 

        ಅಲ್ಲದೆ ರೈತರ ಜಮೀನುಗಳಿಗೆ ಹೋಗಿ ಬರುವುದಕ್ಕೆ ಸೂಕ್ತ ಕಲವರ್ಟಗಳು ಅಳವಡಿಸದೆ ಹಳ್ಳ ಕೊಳ್ಳ ಬಂದು ಸಂಪೂರ್ಣ ಜಮೀನುಗಳು ಹಾಳಾಗಿ ಹೋಗುತ್ತಿವೆ. ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಇದರಿಂದ ರೈತರ ಬೆಳಗಳ ಬೆಳವಣಿಗೆ ಕುಂಠಿತವಾಗುತ್ತಿವೆ. ಭಾರಿ ಮಳೆ ಬಂದರೆ ರೈತರು ಜಮೀನುಗಳಿ ಹೋಗಿ ಬರುವುದಕ್ಕೆ ರಸ್ತೆ ಸಂಪರ್ಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಪ್ರಮುಖ ನಗರಗಳಲ್ಲಿ ಸಹ ಪ್ರತಿಯೊಂದ ಒಣಿಯ ಬೀದಿಗಳ್ಳಲಿ ಒಂದಿಲ್ಲೊಂದು ನೆಪ ಮಾಡಿ ರಸ್ತೆಗಳು ಅಗೆದು ಹಾಗೇನೆ ಬಿಟ್ಟು ದೊಡ್ಡ ದೊಡ್ಡ ತಗ್ಗುಗಳೂ ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಉದಾಹರಣೆ ಕಲಬುರಗಿ ನಗರದ ಹೃದಯ ಭಾಗವಾಗಿರುವ ಸುಪರ ಮಾರ್ಕೆಟ ಗಂಜ ನಗರೇಶ್ವರದಿಂದ ಜಗತ್ ವೃತ್ತದ ವರೆಗೆ ಹೋಗಬೇಕಾದರೆ ಅಲ್ಲ ಅಲ್ಲಲಿ ರಸ್ತೆ ಅಗೆದಿರುವುದು ತುಂಬಾ ಎದು ಕಾಣುತ್ತಿದೆ. ಹಾಗೂ ದಿನೇ ದಿನೇ ಬೆಳೆಯುತ್ತಿರುವ ಕಲುಬರಗಿ ನಗರದಲ್ಲಿ ವಾಹನಗಳ ಓಡಾಟ ಸಾರ್ವಜನಿಕ ಓಡಾಟ ಹೆಚ್ಚಾಗಿ, ಜನಸಂದಣಿ (ಟ್ರಾಫಿಕ್ ಜಾಮ) ಹೆಚ್ಚಾಗಿ ಆಗುತ್ತಿದ್ದು, ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಆದರೆ ನಮ್ಮ ಜಿಲ್ಲೆಯ ಅಧಿಕಾರಿಗಳು ಮಾತ್ರ ಇತ್ತ ಕಡೆ ಯಾವುದೇ ಗಮನ ಹರಿಸುತ್ತಿಲ್ಲ, ಅಭಿವೃದ್ಧಿ ಕಾರ್ಯ ಕುಂಠಿತವಾಗುತ್ತಿದೆ. ಇದಕ್ಕೆ ಜಿಲ್ಲೆಯ ಅಧಿಕಾರಿಗಳು, ಜಿಲ್ಲಾಢಳಿತ ಪ್ರಮುಖ ಕಾರಣವಾಗಿದೆ. ಕಾರಣ ತಾವುಗಳು ಇದೇ ಸೆಪ್ಟೆಂಬರ -17 ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗೆ ಆಗಮಿಸುತ್ತಿರುವುದಕ್ಕೆ ಸ್ವಾಗತ್ತಿಸುತ್ತಾ, ತಾವು ನಮ್ಮ ಭಾಗದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸಿ ಕೂಡಲೇ ಈ ಕಾರ್ಯಗಳು ನೇರವೇರಿಸಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.