ಫೆ ೦೯ಕ್ಕೆ ಪಟ್ಟದ್ದೇವರ ಮೂರ್ತಿ ಅನಾವರಣ,ಪೂರ್ವ ಭಾವಿ ಸಭೆ

ಫೆ ೦೯ಕ್ಕೆ ಪಟ್ಟದ್ದೇವರ ಮೂರ್ತಿ ಅನಾವರಣ,ಪೂರ್ವ ಭಾವಿ ಸಭೆ

ಫೆ ೦೯ಕ್ಕೆ ಪಟ್ಟದ್ದೇವರ ಮೂರ್ತಿ ಅನಾವರಣ,ಪೂರ್ವ ಭಾವಿ ಸಭೆ*

ಕಮಲನಗರ :ತಾಲೂಕಿನ ನೀಲಾಂಬಿಕಾ ಆಶ್ರಮ ಖೇಡ ಸಂಗಮದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.

 ಡಾ. ಚನ್ನಬಸವ ಪಟ್ಟದ್ದೇವರ ಮೂರ್ತಿ ಅನಾವರಣ ಬೆಳ್ಳಿ ಹಬ್ಬ ಮತ್ತು ದಿವ್ಯಾಂಗ ದೀಪ್ತಿ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮಗಳು ನಡೆಸಲಾಗುತ್ತದೆ ಎಂದು ಭಾಲ್ಕಿ ಹಿರೇಮಠದ ಪೀಠಾಧಿಕಾರಿ ಗುರುಬಸವ ಪಟ್ಟದ್ದೇವರು ನುಡಿದರು.

ಪಟ್ಟದ್ದೇವರು ಶೈಕ್ಷಣಿಕವಾಗಿ ಮತ್ತು ಧಾರ್ಮಿಕವಾಗಿ ಸಾಮಾಜಿಕವಾಗಿ ಕೈಗೊಂಡ ಕಾರ್ಯಗಳು ಅವಿಸ್ಮರಣೆಯಾಗಿವೆ. ಈ ಗಡಿ ಭಾಗದಲ್ಲಿ ಮೊಟ್ಟ ಮೊದಲು ಶಿಕ್ಷಣದ ವ್ಯವಸ್ಥೆಯನ್ನು ಈ ನೆಲೆಯಿಂದಲೇ ಪ್ರಾರಂಭ ಯಾಗಿದ್ದು ನಮಗೆ ಹೆಮ್ಮೆ ಅನಿಸುತ್ತದೆ ಎಂದು ಅಪರೂಪದ ಮಠಾಧೀಶರಲ್ಲಿ ಒಬ್ಬರು ಎಂದರು.

ದಿವ್ಯ ಸನ್ನಿಧಾನ ವಹಿಸಿರುವ ನಾಡೋಜ ಬಸವಲಿಂಗ ಪಟ್ಟದ್ದೇವರು ಈ ನೆಲವು ಬೆವರು ಸುರಿಸಿ ಶ್ರಮವಹಿಸಿ ಶ್ರಮ ಜೀವಿಗಳಾದ ಡಾ ಚನ್ನಬಸವ ಪಟ್ಟದ್ದೇವರ ಸ್ಥಳವು ಇದಾಗಿದೆ. ಅವರ ಬದುಕಿನ ಇತಿಹಾಸದಲ್ಲಿ ಕಾಯಕ ಭೂಮಿಯೇ ಈ ನೆಲ ಆಗಿರುವುದು ಎಂದು ನುಡಿಯುತ್ತಾ ,ಮುಂದಿನ ತಿಂಗಳು 9ರಂದು ರವಿವಾರ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದರು.

 ಈ ಕುರಿತು ಕಾರ್ಯಕ್ರಮದ ಸಮಿತಿ ರಚಿಸಿ ಭವ್ಯ ಮತ್ತು ದಿವ್ಯವಾಗಿ ಕಾರ್ಯಕ್ರಮಗಳು ನಡೆಯಬೇಕು ಅವುಗಳಲ್ಲವೂ ವೇಳಾಪಟ್ಟಿಯಂತೆ ಸಿದ್ದುಪಡಿಸಿಕೊಂಡು ಮುನ್ನುಗ್ಗಬೇಕೆಂದು ಸಲಹೆ ಸೂಚನೆಗಳೊಂದಿಗೆ ಮಾತನಾಡಲಾಗಿತ್ತು.

ಲಿಂ. ಡಾ. ಚನ್ನಬಸವಪಟ್ಟದ್ದೇವರ ಜನ್ಮಭೂಮಿ ಗಡಿಭಾಗದಲ್ಲಿ ಕನ್ನಡ ಭಾಷೆ ಜನ ಮತ್ತು ನೆಲದ ಸೌರಕ್ಷಣೆಗಾಗಿ ಹೋರಾಡಿದ ಅಪ್ಪ ಅನುಯಾಯಿಗಳು ಶೈಕ್ಷಣಿಕ ಹರಿಕಾರರಾಗಿ ಸಾಮಾಜಿಕ ಧಾರ್ಮಿಕ ನಮ್ಮೆಲ್ಲರಿಗೂ ಆದರ್ಶವಾಗಿದಾರೆ ಎಂದು ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷರಾಗಿ ವರ್ಷ ತಾಯಿ ಓಂಪ್ರಕಾಶ್ ಬಿರಾದಾರ ಅವರನ್ನು ಸರ್ವ ಸಮ್ಮತ ಆಯ್ಕೆ ಮಾಡಲಾಗಿದೆ. ಮೆರವಣಿಗೆ, ಪ್ರಚಾರ, ಪ್ರಸಾದ ಅತಿಥಿಗಳಿಗೆ ಸ್ವಾಗತ ಮತ್ತು ಮೆರವಣಿಗೆ ಸಮಿತಿಗಳನ್ನು ಶೀಘ್ರದಲ್ಲಿ ರಚಿಸಲಾಗುತ್ತದೆ. ಈ ಸಮಾರಂಭದಲ್ಲಿ 15ಕೂ ಹೆಚ್ಚು ಕೃತಿಗಳನ್ನು ಲೋಕಾರ್ಪಣೆಮಾಡಲಾಗುತ್ತದೆ. ಕಾರ್ಯಕ್ರಮದ ಯಶಸ್ವಿಗೆ ಭಕ್ತರು ತನು-ಮನ ಮತ್ತು ಧನದಿಂದ ಸಹಾಯ ನೀಡಿ ಸಹಕರಿಸಬೇಕೆಂದು ಎಂದರು.

 ಶಿವಲಿಂಗ ದಾನ, ವೈಜಿನಾಥ ರಾಜಗೀರೆ, ಗಜಾನಂದ ದಾನ, ಓಂಕಾರ್ ಬಿರಾದರ್ , ಶಿವಗಂಗಾ ಹಳಕಾಯಿ, ಸುತ್ತಮುತ್ತಲ ಗ್ರಾಮಸ್ಥರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಜವಾಬ್ದಾರಿ ವಹಿಸಿಕೊಂಡು ದೀಪ ಉಜ್ವಲಿಸಿದರು.

 ವಿಶೇಷ ರೀತಿಯಲ್ಲಿ ಈ ಕಾರ್ಯಕ್ರಮವು ಜಾತ್ರೆ ರೀತಿಯಲ್ಲಿಯೇ ಕಾರ್ಯಕ್ರಮಗಳು ನಡೆಸಲಾಗುವದು ಎಂದು ನೇರೆದ ಭಕ್ತರು ತಮ್ಮ ತಮ್ಮ ಅಭಿಪ್ರಾಯಗಳನ್ನು ವಿಶ್ವಾಸ ವ್ಯಕ್ತಪಡಿಸಿದ್ದರು.

 ಮಹಾದೇವಮ್ಮ ತಾಯಿಯವರ ದಿವ್ಯ ಸಮ್ಮುಖದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 109 ಗ್ರಾಮಗಳ ಶರಣರಿಗೆ ಸನ್ಮಾನ, ವಿಚಾರಗೋಷ್ಠಿ ಸಾಂಸ್ಕೃತಿಕಕಾರ್ಯಕ್ರಮಗಳು ನಡೆಯಲಿವೆ, ಪೂಜ್ಯರ ಆಶೀರ್ವಾದ ಮತ್ತು ಭಕ್ತರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಗೊಳಲಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಸುತ್ತಲಿನ ಬಸವ ಭಕ್ತರು ಭಾಗಿಯಾಗಿದ್ದರು. 

ಓಂಕಾರ್ ಬಿರಾದರ್ ಸೆಟ್ಟಗಾರ, ಚನ್ನಬಸವ ಘಾಳೆ,ಪ್ರಭುರಾವಕಳಸೆ,ನೀಲಕಂಠ ಬೀರಾದಾರ,ಶಿವಗಂಗಾ ಹಳಕಾಯ್ಯಿ, ಶರಣಮ್ಮ, ನೀಲಾಂಬಿಕ ಪಾಟೀಲ್, ಶಿವಲಿಂಗಪ್ಪ ದಾನಾ,ವೀರೇಂದ್ರ ದಾನಾ, ವಿಶ್ವನಾಥ ಬೀರಾದಾರ,ಅನೀಲಹೊಳಸಮುದ್ರೆ,ಅನೇಕರು ಉಪಸ್ಥಿತರಿದ್ದರು 

 ಸಂಜಿಕುಮಾರ್ ಜುಮ್ಮಾ ಪ್ರಾಸ್ತಾಮಿಕವಾಗಿ ಮಾತನಾಡಿದರು. ಕಾರ್ಯಕ್ರಮವು ಅಚ್ಚುಕಟ್ಟಾಗಿ ಸಂಜು ಕುಮಾರ್ ಮೆಂಗಾ ನಿರೂಪಣೆ ಮಾಡಿದರು.