ಬೇಟಿ ಬಚಾವೊ ಬೇಟಿ ಪಡಾವೋ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೆ ಕಾರ್ಯರೂಪಕ್ಕೆ ತರಲಿ. ಸಿದ್ದಲಿಂಗ ಮಾಹೊರ್ ಸರ್ಕಾರಕ್ಕೆ ಆಗ್ರಹ...
ಬೇಟಿ ಬಚಾವೊ ಬೇಟಿ ಪಡಾವೋ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೆ ಕಾರ್ಯರೂಪಕ್ಕೆ ತರಲಿ. ಸಿದ್ದಲಿಂಗ ಮಾಹೊರ್ ಸರ್ಕಾರಕ್ಕೆ ಆಗ್ರಹ...
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಟ್ಟು ಅತ್ಯಾಚಾರಿಗಳು ರಾಜ ರೋಷವಾಗಿ ವಿಕೃತಿ ಮೆರೆಯುತ್ತಿರುವುದು ನಾಚಿಕೆಗೇಡಿತನದ ಸಂಗತಿಯಾಗಿದ್ದು ಕರ್ನಾಟಕ ರಾಜ್ಯದ ಒಂದಲ್ಲ ಒಂದು ಭಾಗದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹಾಗೂ ಅಮಾನುಷವಾದ ಕೊಲೆಯಂಥಹ ಪ್ರಕರಣಗಳು ಇತ್ತೀಚಿನ ದಿನಮಾನಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜೇವರ್ಗಿ ತಾಲೂಕ ಜೇನ್ನ ಶೀಟೊರಿಯೋ ಕರಾಟಿ ಅಸೋಸಿಯೇಷನ್ ಸಹ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗ ಮಾಹೋರಕರ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ರಾಜ್ಯ ಸರ್ಕಾರವು ಹೆಣ್ಣು ಮಕ್ಕಳ ಸುರಕ್ಷತೆಗೋಸ್ಕರ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯ ಕಾಯ್ದೆಯನ್ನು ಜಾರಿಗೆ ತರಬೇಕು ಅದೇ ರೀತಿಯಾಗಿ ರಾಜ್ಯದ ಪ್ರತಿಯೊಂದು ಪ್ರಾಥಮಿಕ ಮಾಧ್ಯಮಿಕ ಪ್ರೌಢಶಾಲೆಗಳಲ್ಲಿ ಪದವಿ ಪೂರ್ವ ಕಾಲೇಜು ಹಾಗೂ ಪದವಿಪೂರ್ವ ಮಹಾವಿದ್ಯಾಲಯ ಗಳಲ್ಲಿ ಮತ್ತು ವಸತಿ ನಿಲಯಗಳಲ್ಲಿ ವಸತಿ ಶಾಲೆಗಳಲ್ಲಿ ಕರಾಟೆ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಇದರಿಂದ ಪ್ರತಿಯೊಂದು ಹೆಣ್ಣು ಮಗು ಅತ್ಯಾಚಾರಿ ಯೊಂದಿಗೆ ಕಾದಾಟ ನಡೆಸುದಲ್ಲದೆ ತಮ್ಮ ಮಾನ ಪ್ರಾಣ ಕಾಪಾಡಿಕೊಳ್ಳುವಂತ ಶಕ್ತಿ ಬರುವುದು ಕರಾಟೆ ಮಾರ್ಷಲ್ ಆರ್ಟ್ಸ್ ಎನ್ನುವ ವಿದ್ಯೆಯಿಂದ್ ಮಾತ್ರ ರಾಜ್ಯದ ಪ್ರತಿಯೊಬ್ಬ ಪಾಲಕರು ತಮ್ಮ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಕರಾಟೆ ಕಲಿಸಬೇಕೆಂದು ಸಲಹೆ ನೀಡಿದ್ದಾರೆ ಅದೇ ರೀತಿಯಾಗಿ ಪ್ರತಿಯೊಬ್ಬ ಪಾಲಕರು ಕರಾಟೆ ಕಲೆಯನ್ನು ಶಾಲಾ ಕಾಲೇಜುಗಳಲ್ಲಿ ಕಲಿಸುವಂತೆ ಪ್ರತಿಯೊಬ್ಬ ಪಾಲಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಈ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ ಅದೇ ರೀತಿಯಾಗಿ ಕೆಲಸಕ್ಕೆ ಬಾರದ ಯೋಜನೆಗಳು ಜಾರಿಗೆ ತರುವ ಮುನ್ನ ಇಂತಹ ಕ್ರಾಂತಿಕಾರಕ ಯೋಜನೆಯನ್ನು ಜಾರಿಗೆ ತಂದರೆ ರಾಜ್ಯದ ಪ್ರತಿಯೊಂದು ಶಾಲೆಯ ಹೆಣ್ಣು ಮಕ್ಕಳು ಜಾನ್ಸಿ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಬೆಳವಡಿ ಮಲಮರಂತೆ ಪ್ರತಿಯೊಬ್ಬ ಹೆಣ್ಣುಮಕ್ಕಳು ಅತ್ಯಾಚಾರಿಗಳ ವಿರುದ್ಧ ಹೋರಾಟ ಮಾಡುವುದಕ್ಕೆ ಆತ್ಮಸ್ಥೈರ್ಯ ಬರುತ್ತದೆ ಅತ್ಯಾಚಾರಿಗಳಿಗೆ ಮಟ್ಟ ಹಾಕಲು ಇದೊಂದೇ ದಾರಿ ಆದಕಾರಣ ಕೂಡಲೇ ಈ ಹಿಂದೆ ಸ್ಥಗಿತಗೊಂಡ ಓಬವ್ವ ಸ್ವಯಂ ರಕ್ಷಣಾ ತರಬೇತಿ ಶಿಬಿರದ ಯೋಜನೆಯನ್ನು ಕೂಡಲೇ ಸರ್ಕಾರ ಕಾರ್ಯರೂಪಕ್ಕೆ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಜೇವರ್ಗಿ ತಾಲೂಕ ಖ್ಯಾತ ಸಂಗೀತ ಶಿಕ್ಷಕರು ಹಂಸವಾಹಿನಿ ಸಂಸ್ಥೆಯ ನಿರ್ಮಾಪಕರು ಜೇವರ್ಗಿ ತಾಲೂಕ ಜೆನ್ನ ಶೀಟೊರಿಯೋ ಕರಾಟೆ ಸಂಸ್ಥೆಯ ಸಹ ಸಂಘಟನಾ ಕಾರ್ಯದರ್ಶಿಯಾದ ಸೇನಸೈ ಸಿದ್ದಲಿಂಗ ಮಾಹೋರಕರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ
ವರದಿ ಜೆಟ್ಟಪ ಎಸ್ ಪೂಜಾರಿ