ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಿ : ಆಂಜನೇಯ ಕಟ್ಟಿಮನಿ ರಾಂಪುರ ಕೆ
ಯಾದಗಿರಿ ಜಿಲ್ಲಾ ವರದಿಗಾರರು : ಶರಣಪ್ಪ ಸಾವೂರ
ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಿ : ಆಂಜನೇಯ ಕಟ್ಟಿಮನಿ ರಾಂಪುರ ಕೆ
ಯಾದಗಿರಿ ಬಂಗಾಳಕೊಳ್ಳಿಯಲ್ಲಿ ವಾಯುಭಾರ ಕುಸಿತದಿಂದ ಉತ್ತರ ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯಿಂದ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು,ರಾಯಚೂರು,ಬಳ್ಳಾರಿ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿಯಲ್ಲಿ ಸೆಪ್ಟೆಂಬರ್ 1 ರಿಂದ 2 ರ ವರೆಗೆ ಆರೆಂಜ್ ಅಲರ್ಟ್ ಘೋಷಣೆಯಾಗಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಸೆಪ್ಟೆಂಬರ್ 15 ವರೆಗೆ ವಾಡಿಕೆ ಗಿಂತ ಅಧಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚಿ ನೀಡಿದೆ.
ಯಾದಗಿರಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದೆ. ಕೂಡಲೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಗುರುಮಠಕಲ್ ಸೈದಾಪುರ ಬ್ಲಾಕ್ ಕಾಂಗ್ರೇಸ್ ಸೇವಾದಳ ಸಮಿತಿ ಅದ್ಯಕ್ಷರು ಆಂಜನೇಯ ಕಟ್ಟಿಮನಿ ರಾಂಪುರ ಮನವಿ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಅಗಸ್ಟ್ 30 ರಿಂದ ಸೆಪ್ಟೆಂಬರ್ 9 ರವರೆಗೆ ಧಾರಾಕಾರ ಮಳೆ ಸುರಿದು ಬೆಳೆಗಳಾದ ಹತ್ತಿ, ತೊಗರಿ, ಉದ್ದು, ಹೆಸರು, ಸೂರ್ಯಕಾಂತಿ, ಸುಮಾರು 30 % ರಿಂದ 40 % ರವರೆಗೆ ಬೆಳೆ ಹಾನಿಯಾಗಿದೆ. ಈ ಭಾಗದ ಹಲವಾರು ರೈತರು ಬೆಳೆ ವಿಮೆ ಮಾಡ್ಸಿಲ್ಲ, ರೈತರು ಲಗೋಡಿಗೆ ಸಾಲ ಮಾಡಿ ಬೀಜ ಖರೀದಿಸಿ , ಬಿತ್ತನೆ ಮಾಡಿ, ದುಬಾರಿ ಬೆಲೆಯ ರಸಗೊಬ್ಬರ ಹಾಕಿ, ಔಷದಗಳನ್ನು ಸಿಂಪಡಿಸಿ, ರೈತರು ಕಷ್ಟಪಟ್ಟು ಬೆಳೆದು ಬೆಳೆ ಹಾಳಾಗುತ್ತಿರುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆ ನಷ್ಟ ನೋಡಿ ಕಂಗಾಲಾಗಿದ್ದಾರೆ, ರೈತರು ನಷ್ಟದಿಂದಾಗಿ ಆತ್ಮಹತ್ಯಾ ಮಾಡುವ ಪರಿಸ್ಥಿತಿ ಉಂಟಾಗಿದೆ. ಕೂಡಲೇ ರಾಜ್ಯ ಸರಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಯಾದಗಿರಿ ಜಿಲ್ಲೆಯ ಕಂದಾಯ, ಕೃಷಿ ಇಲಾಖೆಗೆ ತಕ್ಷಣ ಬೆಳೆ ಹನಿ ಪರಿಶೀಲನೆಗೆ ಸೂಕ್ತ ನಿರ್ದೇಶನ ನೀಡಿ, ಬೆಳೆ ನಷ್ಟ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಮನವಿ.