"ನಮ್ಮ ಶೌಚಾಲಯ-ನಮ್ಮ ಗೌರವ, ಅಂದದ ಶೌಚಾಲಯ ಆನಂದದ ಜೀವನ" ಅಭಿಯಾನ
"ನಮ್ಮ ಶೌಚಾಲಯ-ನಮ್ಮ ಗೌರವ, ಅಂದದ ಶೌಚಾಲಯ ಆನಂದದ ಜೀವನ" ಅಭಿಯಾನ
ಶೌಚಾಲಯ ಸಮರ್ಪಕ ಬಳಕೆಗಾಗಿ ಅಭಿಯಾನ ಯಶಸ್ವಿಗೊಳಿಸಿ: ಪಿಡಿಓ ಬಾಷಾ
ಕಮಲನಗರ: ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಿರ್ಮಿಸಿಕೊಂಡ ಶೌಚಾಲಯಗಳನ್ನು ಜನರು ಬಳಕೆ ಮಾಡದೆ ಇದ್ದಲ್ಲಿ, ಮನೆ ಮನೆಗೆ ಭೇಟಿನೀಡಿ ಅದರ ಮಹತ್ವ ಹಾಗೂ ಉದ್ದೇಶ ತಿಳಿಸುತ್ತ ಶೌಚಾಲಯ ಬಳಕೆ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ಗ್ರಾಮ ಪಿಡಿಓ ಹೇಳಿದರು.
ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ಅಂಗವಾಗಿ ನಮ್ಮ "ಶೌಚಾಲಯ-ನಮ್ಮ ಗೌರವ ಎಂಬ ಶಿರ್ಷಿಕೆ ಹಾಗೂ ಅಂದದ ಶೌಚಾಲಯ ಆನಂದದ ಜೀವನ" ಎಂಬ ಅಭಿಯಾನದ ನಿಮಿತ್ಯ ಕಮಲನಗರ ತಾಲೂಕಿನ ಬೆಳಕೋಣಿ ಗ್ರಾಮ ಪಂಚಾಯತ್ ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿ, ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ, ನೈರ್ಮಲ್ಯ, ಶುಚಿತ್ವ, ಕುರಿತು ಡಿ.೧೨ ವರೆಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ಗ್ರಾಮದ ಮನೆಗಳಲ್ಲಿ ವೈಯಕ್ತಿಕ ಹಾಗೂ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ನಿರ್ಮಿಸಿಕೊಂಡ ಸಮುದಾಯ ಶೌಚಾಲಯ ಬಳಕೆ ಮಾಡದೆ ಇದ್ದಲ್ಲಿ ಗ್ರಾಮಸ್ಥರಿಗೆ ಭೇಟಿನೀಡಿ ಶೌಚಾಲಯ ಬಳಸುವಂತೆ ಪ್ರೇರಣೆ ನೀಡಬೇಕು.
ಸ್ವಚ್ಛ ಭಾರತ ವಾಹನಕ್ಕೆ ಹಾಗೂ ಚಾಲನೆ ಮಾಡುವ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಇನ್ಸೂರೇಷನ್ ಮತ್ತು ವಿಮೆ ಮಾಡಿಸಿಕೊಳ್ಳಬೇಕು ಎಂದು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಕವಿತಾ ಬಿರಾದರ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಿ ಇ ಓ ಸ್ವಾಮಿ, ಕಾರ್ಯದರ್ಶಿ, ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರಾದ ಸವಿತಾ ನಾಗೇಶ್ ,ರಾಜೀವ್ ಗಾಂಧಿ ಸಂಯೋಜಕರಾದ ಸಂಪತ್ ನೀತಿ, ಆಯೋಗದ ಸಂಯೋಜಕರಾದ ಅಮರ್ ಕೋಟೆ, ಸ್ವ ಸಹಾಯ ಸಂಘದ ಮಹಿಳೆಯರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಇದ್ದರು.
---------