ಶಾಲಾ ವಿಧ್ಯಾರ್ಥಿಗಳ ದುರ್ಮರಣ: ಮನಸ್ಸಿಗೆ ನೋವು ತಂದಿದೆ: ಗೋಕುಲ
ಶಾಲಾ ವಿಧ್ಯಾರ್ಥಿಗಳ ದುರ್ಮರಣ: ಮನಸ್ಸಿಗೆ ನೋವು ತಂದಿದೆ: ಗೋಕುಲ
ಕಲಬುರಗಿ: ರಾಯಚೂರ ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಹತ್ತಿರ ಶಾಲೆಯ ವಿದ್ಯಾರ್ಥಿಗಳು ತುಂಬಿರುವ ಬಸ್ಸು ಹಾಗೂ ಸರ್ಕಾರಿ ಬಸ್ಸು ಗಳ ಮಧ್ಯೆ ಮುಖಮುಖಿ ನಡೆದ ಅಪಘಾತಕಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು ಮನಸ್ಸಿಗೆ ಬಹಳ ನೋವು ತಂದಿದೆ ಎಂದು ಡಿ.ಎಮ್.ಎಸ್ ಎಸ್.ಸಂಘಟನೆಯ ನಗರಘಟಕದ ಉಪಾಧ್ಯಕ್ಷ ಶಿವುಕುಮಾರ ಗೋಕುಲ ತಿಳಿಸಿದ್ದಾರೆ.
ಇನ್ನುಳಿದ ವಿದ್ಯಾರ್ಥಿಗಳು ಗಾಯಗೊಂಡು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಉತ್ತಮ ಚಿಕಿತ್ಸೆ ಸೂಕ್ತ ಕ್ರಮ ಕೈಗೊಳ್ಳಬೇಕು. ಗಾಯಗೊಂಡ ಮಕ್ಕಳ ಯೋಗಕ್ಷೇಮ ತಾಲೂಕ ಶಿಕ್ಷಣಾಧಿಕಾರಿಗಳು, ಜಿಲ್ಲಾ ಉಪ ನಿರ್ದೇಶಕರು ಆಸ್ಪತ್ರೆಗೆ ಭೇಟಿಕೊಟ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವೈದ್ಯಕೀಯ ಸಂಪೂರ್ಣ ಹಣ ಪಾವತಿ ಮಾಡಬೇಕು. ಮಕ್ಕಳಿಗೆ ಧೈರ್ಯ ತುಂಬಬೇಕು ಈ ಘಟನೆಯಲ್ಲಿ ಸಾವಿಗೀಡಾದ ಮಕ್ಕಳ ಪಾಲಕರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಪರಮಾತ್ಮ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.ಖಾಸಗಿ ಶಾಲೆಗಳ ಸಿಬ್ಬಂದಿಗಳು ತಮ್ಮ ಶಾಲಾ ಬಸ್ಸಗಳ ಜೊತೆಗೆ ಮಕ್ಕಳನ್ನು ನೋಡಬೇಕೆಂಬುವುದು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಡ್ರೈವರ್ ಗಳನ್ನು ಇಡುವಾಗ ಉತ್ತಮ ಅನುಭವಿ ಡ್ರೈವರ್ ಗಳನ್ನು ಇಡಬೇಕು ಎಂದು ಅವರು ಆಗ್ರಹಿಸಿದ್ದಾರೆ.