ಕೋಲಿ ಸಮುದಾಯದ ಭಾಗ್ಯಶ್ರೀ ಮೇಲಿನ ಅತ್ಯಾಚಾರ, ಕೊಲೆ : ಡಾ ಅಂಬಾರಾಯ ಅಷ್ಠಗಿ ಖಂಡನೆ

ಕೋಲಿ ಸಮುದಾಯದ ಭಾಗ್ಯಶ್ರೀ ಮೇಲಿನ ಅತ್ಯಾಚಾರ, ಕೊಲೆ : ಡಾ ಅಂಬಾರಾಯ ಅಷ್ಠಗಿ ಖಂಡನೆ
ಕಲಬುರಗಿ : ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಗುಂಡೂರು ಗ್ರಾಮದ ಕೋಲಿ ಸಮುದಾಯದ ಭಾಗ್ಯಶ್ರೀ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಡಾ. ಅಂಬಾರಾಯ ಅಷ್ಠಗಿ ತೀವ್ರವಾಗಿ ಖಂಡಿಸಿದ್ದಾರೆ.
ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗುಂಡೂರು ಗ್ರಾಮದ ಟೋಕ್ರೆ ಕೋಲಿ ಸಮಾಜದ ಸಹೋದರಿ ಭಾಗ್ಯಶ್ರೀ (18) ಅವರನ್ನು ಕೆಲವು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರವೇಸಗಿ ಭೀಕರವಾಗಿ ಕೊಲೆ ಮಾಡಿದ್ದಾರೆ.
ರಾಜ್ಯದಲ್ಲಿ ಮಹಿಳೆಯರ ಮೇಲೆ ಕೊಲೆ ಸುಲಿಗೆ, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದು, ಸರ್ಕಾರದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಡಾ ಅಂಬಾರಾಯ ಅಷ್ಠಗಿ ಟೀಕಿಸಿದ್ದಾರೆ.
ಸರ್ಕಾರಗಳು ಪದೇ ಪದೇ ಇಂತಹ ಘಟನೆಗಳು ನಡೆದರು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸದೆ ನಿರ್ಲಕ್ಷ ತೋರುತ್ತಿರುವದು ಸರಿಯಲ್ಲ, ರಾಜ್ಯದಲ್ಲಿ ಈ ಹಿಂದೆ
ಅಂಜಲಿ ಮತ್ತು ನೇಹಾ ಮೇಲೆ ನಡೆದ ಅಮಾನವಿಯ ಘಟನೆಗಳಾದ ಮೇಲೆ ಸರ್ಕಾರ ಎಚ್ಚೆತ್ತು ಕೊಳ್ಳಬೇಕಿತ್ತು ಆದರೆ ಸರ್ಕಾರ ಮಾತ್ರ ಚಿರ ನಿದ್ರೆಯಲ್ಲಿದ್ದು ಜನರೇ ಎಚ್ಚರಿಸುವಂತೆ ಆಗಿದೆ, ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತಿದ್ದರು ಸರ್ಕಾರ ಮಾತ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.
ಆರೋಪಿಗಳು ಯಾರೇ ಆಗಿರಲಿ,ತಡ ಮಾಡದೇ ಕಾನೂನು ಕ್ರಮ ಜರುಗಿಸಬೇಕು. ದೌರ್ಜನ್ಯವೆಸಗಿದ ಕಾಮುಕರನ್ನು ಬಂಧಿಸಿ ಮತ್ತೆ ಇಂತಹ ಘಟನೆಗಳು ಮಾರುಕಳಿಸದಂತೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಡಾ ಅಂಬಾರಾಯ ಅಷ್ಠಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
[ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಭಾಗ್ಯಶ್ರೀ ಕುಟುಂಬಕ್ಕೆ ಸರಕಾರಿ ನೌಕರಿ ಹಾಗೂ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ]
ಡಾ. ಅಂಬಾರಾಯ ಅಷ್ಠಗಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ