ಅಂಬಿಗರ ಚೌಡಯ್ಯನವರ ವಿಚಾರ ದಾರೆಗಳನ್ನು ಇಂದಿನ ಯುವ ಸಮುದಾಯ ಅರಿತುಕೊಳ್ಳಬೇಕಿದೆ. ಶಿವಪುತ್ರ ಗೋಗಿ

ಅಂಬಿಗರ ಚೌಡಯ್ಯನವರ ವಿಚಾರ ದಾರೆಗಳನ್ನು ಇಂದಿನ ಯುವ ಸಮುದಾಯ ಅರಿತುಕೊಳ್ಳಬೇಕಿದೆ. ಶಿವಪುತ್ರ ಗೋಗಿ

ಅಂಬಿಗರ ಚೌಡಯ್ಯನವರ ವಿಚಾರ ದಾರೆಗಳನ್ನು ಇಂದಿನ ಯುವ ಸಮುದಾಯ ಅರಿತುಕೊಳ್ಳಬೇಕಿದೆ. ಶಿವಪುತ್ರ ಗೋಗಿ

 ಬೀಳವಾರ ಗ್ರಾಮ ಪಂಚಾಯತಿಯಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೆಯ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮನಗೌಡ ಗ್ರಾಮ ಪಂಚಾಯತ್ ಅಧ್ಯಕ್ಷರು ಗೊಲ್ಲಾಳಪ ಹಾಗೂ 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಗ್ರಾಮ ಘಟಕ ಅಧ್ಯಕ್ಷರು ಮರೆಪ್ಪ ಅವರು ಭಾಗವಹಿಸಿದ್ದರು ಅದೇ ರೀತಿಯಾಗಿ ತಾಲ್ಲೂಕಿನ ಕಾಂಗ್ರೆಸ್ ಮುಕಂಡರು ಲಾಲ್ ಪಟೇಲ್ ಯೆರಗಲ್ಲ ಹಾಗೂ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಮಹ್ಮದ್ ಯೂನಸ ಹಾಗೂ ಬಿಲ್ ಕಲೆಕ್ಟರ ಬಸನ್ನಗೌಡ ಮಾರಾಡಗಿ ಕಾರ್ಯದರ್ಶಿ ಸದಾನಂದ್ ಪಾಟೀಲ್ ಗ್ರಾಮ ಪಂಚಾಯತ್ ಸದಸ್ಯ ಬಬ್ರುವಾಹನ ದಂಡಗುಲಕರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಹಾಗೂ ಇ ಕಾರ್ಯಕ್ರಮದಲ್ಲಿ ಅಂಬಿಗರ ಚೌಢಯ್ಯ ಸೇವಾ ಸಮಿತಿ ಹೋರಾಟಗಾರ ಶಿವಪುತ್ರ ಗೋಗಿ ಅವರು ಕಾರ್ಯಕ್ರಮದ ಕುರಿತು ಸವಿಸ್ತಾರವಾಗಿ ಮಾತನಾಡಿದರು 12ನೇ ಶತಮಾನದ ಶರಣ ಸಂತರಲ್ಲಿ ಕ್ರಾಂತಿಕಾರಿ ಶರಣರು ನಿಜ ಶರಣರೆಂದು ಕ್ಯಾತಿ ಹೊಂದಿದ ಅಂಬಿಗರ ಚೌಡಯ್ಯನವರು ತಮ್ಮ ವಚನ ಸಾಹಿತ್ಯಗಳ ಮೂಲಕ ಸಮಾಜದಲ್ಲಿನ್ನ ಅಸ್ಪೃಶ್ಯತೆ ಹಾಗೂ ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಅಂದಿನ ಸಮಾಜಕ್ಕೆ ವಚನಗಳ ಮೂಲಕ ಜನರಲ್ಲಿ ವೈಚಾರಿಕ ಸಾಮಾಜಿಕ ಜನಜಾಗೃತಿ ಮೂಡಿಸಿದರು ಶರಣರಲ್ಲಿ ನಿಜಶರಣರೆಂದು ಖ್ಯಾತಿ ಪಡೆದವರು ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಸೇವಾ ಸಮಿತಿ ಹೋರಾಟಗಾರರು ಶಿವಪುತ್ರ ಗೋಗಿ ಬೀಳವಾರ ಅವರು ಮಾತನಾಡಿದರು ನಾವೆಲ್ಲರೂ ನಿಜವಾಗಲೂ ಶರಣರ ಸಂಥರ ಅನುಯಾಯಿಗಳಾಗಿದ್ದರೆ ಅವರ ಆಚಾರ ಮತ್ತು ವಿಚಾರ ಮಾರ್ಗವನ್ನು ಅನುಸರಿಸಬೇಕು ಕೇವಲ ಒಂದು ದಿನ ಅವರ ಫೋಟೋ ಮೂರ್ತಿಗೆ ಹಾರ ಹಾಕಿ ಫೋಟೋ ತೆಗೆದುಕೊಂಡು ಫೇಸ್ಬುಕ್ ವಾಟ್ಸಾಪ್ ಇನ್ಸ್ಟಾಗ್ರಾಮ್ ಗಳಿಗೆ ಶೇರ್ ಮಾಡಿದರೆ ನಾವು ಅವರ ಅನುಯಾಯಿಗಳಾಗುವುದಿಲ್ಲ. ನಿಜಶರಣ ಅಂಬಿಗರ ಚೌಡಯ್ಯನವರು ಧರ್ಮಕ್ಕಾಗಿ ಅಥವಾ ಜಾತಿಗಾಗಿ ಹೋರಾಡಿ ಎಂದು ಹೇಳಿಲ್ಲ ಬದಲಿಗೆ ಎಲ್ಲಾ ಧರ್ಮಗಳನ್ನು ಗೌರವಿಸಿ ನಿಮ್ಮ ಧರ್ಮವನ್ನು ಆರಾಧಿಸಿ ಎಂದು ಅಂದಿನ ಸಂತರು ಶರಣರು ಹೇಳಿ ಹೋಗಿದ್ದಾರೆ ಇಂತಹ ಶರಣರ ಸಂತರ ಜನ್ಮ ತಾಳಿದ ನಾಡಿನಲ್ಲಿ ನಾವು ನೀವು ಹುಟ್ಟಿರುವುದು ನಮ್ಮ ಪುಣ್ಯವೆಂದು ಈ ಸಂದರ್ಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಗುಣಗಾನವನ್ನು ಮಾಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಗ್ರಾಮದ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು  

ವರದಿ ಜೇಟ್ಟೆಪ್ಪ ಎಸ್ ಪೂಜಾರಿ