ಗೌರವ ಡಾಕ್ಟರೇಟ್ ಪುರಸ್ಕೃತ ಕೆ.ಜಿ.ಶರಣಪ್ಪ ಗದಲೇಗಾಂವ ಅವರಿಗೆ ಬೇಲೂರ ಸರ್ವೋದಯ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ

ಗೌರವ ಡಾಕ್ಟರೇಟ್ ಪುರಸ್ಕೃತ ಕೆ.ಜಿ.ಶರಣಪ್ಪ ಗದಲೇಗಾಂವ ಅವರಿಗೆ ಬೇಲೂರ ಸರ್ವೋದಯ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ
ಬಸವಕಲ್ಯಾಣ ತಾಲೂಕಿನ ಬೇಲೂರು ಗ್ರಾಮದಲ್ಲಿ ಜರುಗಿದ ಉರಿಲಿಂಗ ಪೆದ್ದಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಪ್ರಥಮ ಸರ್ವೊದಯ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ಕೆ.ಜಿ.ಶರಣಪ್ಪ ಗದಲೇಗಾಂವ ಅವರಿಗೆ ಶ್ರೀಮಠದ ಪೀಠಾಧಿಪತಿ ಪಂಚಾಕ್ಷರಿ ಸ್ವಾಮಿಗಳು ಸನ್ಮಾನಿಸಿ ಗೌರವಿಸಿದರು.
ಹಾರಕೂಡ ಸುಕ್ಷೇತ್ರದ ಡಾ. ಷ.ಬ್ರ.ಚನ್ನವೀರ ಶಿವಾಚಾರ್ಯರ ಸರ್ವಾಧ್ಯಕ್ಷತೆಯಲ್ಲಿ ಜರುಗಿದ ಸಮ್ಮೇಳನದಲ್ಲಿ ಬೀದರ ನೂತನ ಸಂಸದ ಸಾಗರ ಖಂಡ್ರೆ, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಶಿಂಗ ಕೊಪ್ಪಳದ ಸಾಹಿತಿಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರ, ಹಣಮಂತರಾವ ದೊಡಮನಿ ಕಲಬುರ್ಗಿ,
ಬಸವಕಲ್ಯಾಣ ಹರಳಯ್ಯ ಪೀಠ ಮತ್ತು ವಚನ ಸಾಹಿತ್ಯದ ಡಾ. ಗಂಗಾಂಬಿಕಾ ಪಾಟೀಲ, ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟ, ಉರಿಲಿಂಗಪೆದ್ದಿ ಕೋಡ್ಲಾದ ಜ್ಞಾನಪ್ರಕಾಶ ಸ್ವಾಮಿಗಳು, ಉದ್ಯಮಿ ಮಲ್ಲಿಕಾರ್ಜುನ ಗುಂಗೆ ಸೇರಿ ಈ ಸಂದರ್ಭದಲ್ಲಿ ಸಾಹಿತಿ ಡಾ. ಗವಿಸಿದ್ಧಪ್ಪ ಪಾಟೀಲ ಉಪಸ್ಥಿತರಿದ್ದರು.