ತಾಲೂಕ ೧೦ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಆಮಂತ್ರಣ ಪತ್ರಿಕೆಯಲ್ಲಿ ಎಡವಟ್ಟು ಮಾಡಿಕೊಂಡಿತ್ತು ಕಸಪ ಆಕ್ರೋಶದ ಹಿನ್ನಲೆಯಲ್ಲಿ ಮಾಡಿದ್ದ ತಪ್ಪು ಅರಿವುವಾಗಿ ಸರಿಪಡಿಸಿಕೊಂಡಿತ್ತು ಕಸಪ ತಂಡ

ತಾಲೂಕ ೧೦ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಆಮಂತ್ರಣ ಪತ್ರಿಕೆಯಲ್ಲಿ ಎಡವಟ್ಟು ಮಾಡಿಕೊಂಡಿತ್ತು ಕಸಪ  ಆಕ್ರೋಶದ ಹಿನ್ನಲೆಯಲ್ಲಿ ಮಾಡಿದ್ದ ತಪ್ಪು ಅರಿವುವಾಗಿ ಸರಿಪಡಿಸಿಕೊಂಡಿತ್ತು ಕಸಪ ತಂಡ

ತಾಲೂಕ ೧೦ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಆಮಂತ್ರಣ ಪತ್ರಿಕೆಯಲ್ಲಿ ಎಡವಟ್ಟು ಮಾಡಿಕೊಂಡಿತ್ತು ಕಸಪ 

ಆಕ್ರೋಶದ ಹಿನ್ನಲೆಯಲ್ಲಿ ಮಾಡಿದ್ದ ತಪ್ಪು ಅರಿವುವಾಗಿ ಸರಿಪಡಿಸಿಕೊಂಡಿತ್ತು ಕಸಪ ತಂಡ 

ಸುದ್ದಿ : ಚಿಂಚೋಳಿ ನವಂಬರ್ 8 ರಂದು ಪಟ್ಟಣದ ಹಾರಕೂಡ ಶ್ರೀ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುವ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ೧೦ನೇ ನುಡಿ ಜಾತ್ರೆಯ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರದಂತೆ ಹೆಸರುಗಳು ಮುದ್ರಿಸದೆ ಆಮಂತ್ರಣ ಪತ್ರಿಕೆ ಬಿಡುಗಡೆಗೋಳಿಸಿ ಎಡವಟ್ಟು ಮಾಡಿಕೊಂಡಿತ್ತು ತಾಲೂಕ ಕಸಪ ಮತ್ತು ಸ್ವಾಗತ ಸಮಿತಿ ತಂಡ. ತಾಲೂಕು ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆಯ ಮುಖ್ಯ ಕಾರ್ಯಕ್ರಮದ ವೇದಿಕೆಗೆ ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ್ ಮತ್ತು ಮುಖ್ಯದ್ವಾರಕ್ಕೆ ಮಾಜಿ ಸಚಿವ ದಿವಂಗತ ವೈಜಿನಾಥ ಪಾಟೀಲ್ ಅವರ ಹೆಸರುಗಳನ್ನು ಇಟ್ಟು ಬಿಡುಗಡೆಗೊಳಿಸಿದ ಆಮಂತ್ರಣ ಪತ್ರಿಕೆಯಲ್ಲಿ ಸೂಚಿಸಲಾಗಿತ್ತು. 

ಆದರೆ ಚಿಂಚೋಳಿ ತಾಲೂಕಿನವರೇ ಆದ ಮಾಜಿ ಸಚಿವ ದಿವಂಗತ ದೇವೀಂದ್ರಪ್ಪ ಘಾಳಪ್ಪ ಜಮಾದಾರ ಹಲಚೇರಿ ಅವರು ೧೯೭೨ ರಿಂದ ೧೯೮೭ರವರೆಗೆ ಶಾಸಕರಾಗಿ ಆಯ್ಕೆಗೊಂಡು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಸಂಪುಟದಲ್ಲಿ ಮೂರು ಬಾರಿ ಸಚಿವರಾಗಿ ಚಿಂಚೋಳಿ ಮತಕ್ಷೇತ್ರಕ್ಕೆ ಅಭಿವೃದ್ಧಿ ಸೇವೆಯನ್ನು ಸಲ್ಲಿಸಿದವರ ಹೆಸರನ್ನು ೧೦ ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ನುಡಿ ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ಸ್ಮರಿಸದೆ ಕಸಪ ತಂಡ ಕೈ ಬಿಡಲಾಗಿತ್ತು. ಇಷ್ಟೇ ಅಲ್ಲದೇ, ಶಿಷ್ಟಚಾರದ ನಿಯಮ ಪ್ರಕಾರ ರಾಜ್ಯಸಾಭಾ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ. ಖರ್ಗೆ, ಸಚಿವ ಡಾ. ಶರಣಪ್ರಕಾಶ ಪಾಟೀಲ್, ಕಲಬುರಗಿ ಸಂಸದ ರಾಧಾಕೃಷ್ಣ ದೊಡಮ್ಮನಿ ಅವರುಗಳ ಹೆಸರುಗಳನ್ನು ಬಿಡುಗಡೆಗೊಳಿಸಿದ ಆಮಂತ್ರಣ ಪತ್ರಿಕೆಯಲ್ಲಿ ಕೈ ಬಿಡಲಾಗಿತ್ತು. ಇದನ್ನು ಕಂಡಿದ್ದ ದೇವೀಂದ್ರಪ್ಪ ಜಮಾದಾರ ಅವರ ಅಭಿಮಾನಿಗಳು ಮತ್ತು ಸಮುದಾಯದವರು ತಾಲೂಕ ಕಸಪ ತಂಡಕ್ಕೆ ತರಾಟೆಗೆ ತೆಗೆದುಕೊಂಡು ಆಕ್ರೋಶವನ್ನು ಹೊರಹಾಕಿದರ ಬೆನ್ನಲೇ ಎಚ್ಚತು ಕೊಂಡು ಈ ಮೊದಲು ಬಿಡುಗಡೆಗೊಳಿಸಿದ ಆಮಂತ್ರಣ ಪತ್ರಿಕೆಯನ್ನು ರದ್ದುಪಡಿಸಿ, ಕೈ ಬಿಟ್ಟ ದಿವಂಗತ ಮಾಜಿ ಸಚಿವ ದೇವೀಂದ್ರಪ್ಪ ಘಾಳಪ್ಪ ಜಮಾದಾರ ಹಲಚೇರಿ ಅವರ ಹೆಸರನ್ನು ವೇದಿಕೆ ಆಗಮನದ ಮುಖ್ಯದ್ವಾರಕ್ಕೆ ವೈಜಿನಾಥ ಪಾಟೀಲ್ ರ ಜೊತೆಗೆ ಇವರ ಹೆಸರು ಅಳವಡಿಸಿಕೊಂಡು ಮತ್ತು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ್, ರಾಧಾಕೃಷ್ಣ ದೊಡ್ಡಮ್ಮನಿ ಅವರುಗಳ ಹೆಸರುಗಳು ಸೇರಿಸಿ, ಪುನಹಃ ಆಮಂತ್ರಣ ಪತ್ರಿಕೆ ಮುದ್ರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟು ಮಾಡಿದ ತಪ್ಪುನ್ನು ಸರಿಪಡಿಸಿಕೊಳ್ಳುವ ಕೆಲಸ ಚಿಂಚೋಳಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ತಂಡ ಮತ್ತು ಸಮ್ಮೇಳನ ನುಡಿ ಜಾತ್ರೆಯ ಸ್ವಾಗತ ಸಮಿತಿ ಮಾಡಿತ್ತು.