ಕಲೆಗೆ ಬೆಲೆ ಕಟ್ಟಲಾಗದು :ಬಸವರಾಜ ದೇಶಮುಖ್

ಕಲೆಗೆ ಬೆಲೆ ಕಟ್ಟಲಾಗದು :ಬಸವರಾಜ ದೇಶಮುಖ್

ಕಲೆಗೆ ಬೆಲೆ ಕಟ್ಟಲಾಗದು :ಬಸವರಾಜ ದೇಶಮುಖ್ 

ಕುಮಾರ ಶ್ರೀ ರಾಜ್ಯಮಟ್ಟದ ಪ್ರಶಸ್ತಿಯು 60 ಜನ ಸಾಧಕರಿಗೆ ನೀಡಿ ಸನ್ಮಾನ  

ಜಾತಿ ಮತ್ತು ಪಂಥ ಎನ್ನದೆ ಸರ್ವ ಧರ್ಮೀಯರನ್ನು ಸಮಾನವಾಗಿ ಕಂಡು ಕಲಾವಿದರನ್ನು ಬೆಳೆಸುವಂತಹ ಕೆಲಸ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಮಾಡುತ್ತಿದೆ ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ್ ಹೇಳಿದರು.

ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸುವರ್ಣ ಕರ್ನಾಟಕ ಉತ್ಸವ-50, ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘದ 42ನೇ ವಾರ್ಷಿಕೋತ್ಸವ ಅಂಗವಾಗಿ ಹಾರಕೂಡದ ಚನ್ನವೀರ ಶಿವಾಚಾರ್ಯರಿಗೆ 719 ನೇ ನಾಣ್ಯ ತುಲಾಭಾರ ಹಾಗೂ 60 ಕಲಾವಿದರಿಗೆ ರಾಜ್ಯಮಟ್ಟದ 'ಕುಮಾರಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶ್ರೀ ಗುರು ಕುಮಾರೇಶ್ವರ ನಾಟ್ಯಸಂಘವು 2003 ರಂದು ಪ್ರಾರಂಭಗೊಂಡು ಸುಮಾರು 24 , ರಚನೆಕಾರರ 60 ನಾಟಕಗಳು , ಸುಮಾರು 9,000 ಪ್ರದರ್ಶನವನ್ನು ಮಾಡಿವೆ. ಕಲೆಗೆ ಬೆಲೆ ಕಟ್ಟಲಾಗದು, ಕಲೆ ಯಾರ ಸ್ವತ್ತು ಅಲ್ಲ ಅದು ಭಗವಂತನ ಕೊಡುಗೆಯಾಗಿದೆ.ಇಂದಿನ ತಂತ್ರಜ್ಞಾನಿಕ ಯುಗದಲ್ಲಿ ನಾಟಕಗಳು ನೋಡುವ ಹವ್ಯಾಸಿಗರು ಕಡಿಮೆಯಾಗಿದ್ದು ಆದರೂ ಇಂತಹ ಸಂಸ್ಥೆಗಳು ಕಲೆ ಮತ್ತು ಕಲಾವಿದರನ್ನು ಬೆಳೆಸಿ ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು .

ಕಲಬುರಗಿ ರಂಗಾಯಣ ನಿರ್ದೇಶಕಿ, ಸುಜಾತ ಜಂಗಮಶೆಟ್ಟಿ, ದಾವಣಗೆರೆ ವೃತ್ತಿರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ್ ಕಡಕೋಳ ಅವರು ಹೆಚ್ಚಿನ ಅನುದಾನ ನೀಡಿದರೆ ಕಲಾವಿದರಿಗೆ ಅನುಕೂಲವಾಗುತ್ತದೆ ಎಂದು ಮಾತನಾಡಿದರು.

ಹಾರಕೂಡದ ಶ್ರೀ ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದರು. ಬಂದು ಮುದ್ರಣ ಮಾಲೀಕರಾದ ರಮೇಶ್ ಜಿ .ತಿಪನೂರ ಮಾತನಾಡಿದರು. ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘದ ಮಾಲೀಕರಾದ ಎಲ್.ಬಿ.ಶೇಖ್ ಮಾಸ್ತರ, ಸಂಚಾಲಕ ಶ್ರೀಧರ್ ಹೆಗಡೆ, ಭಾಗವಹಿಸಿದರು.

ಸಮಾಜ ಸೇವೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ನಾಗರಾಜ ಕಲ್ಲಾ, ನಂದೂರ ( ಕೆ), ವಿಶ್ವನಾಥ್ ಪಾಟೀಲ್ ಓಂಕಾರ ಬೇನೂರ ಸೇರಿ 60 ಕಲಾವಿದರಿಗೆ ರಾಜ್ಯಮಟ್ಟದ ಕುಮಾರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಸವರಾಜ್ ಬಂಟನೂರು, ಸಿದ್ದರಾಮ ಪೊಲೀಸ್ ಪಾಟೀಲ್, ಸಮೀರ್ ಬಿ.ಶೇಖ್, ಬಸವರಾಜ್ ಹೂಗಾರ, ಪ್ರಭು ಗುಡ್ಡದ, ಶಂಕರ್ ಹೂಗಾರ ಕಲಾವಿದರು ಸೇರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

  "ಕುಮಾರ ಶ್ರೀ ಪ್ರಶಸ್ತಿ" ಪುರಸ್ಕೃತರ ಭಾವಚಿತ್ರ 

.

ನಾಗರಾಜ ಕಲ್ಲಾ ನಂದೂರ ( ಕೆ) ಪ್ರಶಸ್ತಿ ಪ್ರಧಾನ ಚಿತ್ರ