ವೃತ್ತಿ ಗೌರವಕ್ಕೆ ಆದರ್ಶ ವ್ಯಕ್ತಿ- ನಾಗಣ್ಣನವರು- ಸೊನ್ನಶ್ರೀ
ಸಾರ್ಥಕ ಜೀವನ ಗ್ರಂಥ ಲೋಕಾರ್ಪಣೆ
ವೃತ್ತಿ ಗೌರವಕ್ಕೆ ಆದರ್ಶ ವ್ಯಕ್ತಿ- ನಾಗಣ್ಣನವರು- ಸೊನ್ನಶ್ರೀ
ಕಲಬುರಗಿ: ಸೊನ್ನದ ಶ್ರೀಮಠದಲ್ಲಿ ಶಿಕ್ಷಣ ದಾಸೋಹ ಮಾಡುವಲ್ಲಿ ಗಣಜಲಖೇಡ ಅವರ ಕೊಡುಗೆ ಅಪಾರ. ಅವರೊಬ್ಬ ಸಾಮಾಜಿಕ,ಶೈಕ್ಷಣಿಕದ ಜೊತೆಗೆ ತಮ್ಮ ವೃತ್ತಿ ಗೌರವಕ್ಕೆ ಕಳೆ ತಂದ ಆದರ್ಶ ವ್ಯಕ್ತಿ ಅದೇ ದಾರಿಯಲ್ಲಿ ಅವರ ಮಕ್ಕಳು ನಡೆಯುತ್ತಿರುವುದು ಸಂತಸದ ಸಂಗತಿ ಎಂದು ಸೊನ್ನ ಮಠದ ಪೀಠಾಧಿಪತಿ ಡಾ.ಶಿವಾನಂದ ಮಹಾಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.
ವೀರಶೈವ ಕಲ್ಯಾಣ ಮಂಟಪದಲ್ಲಿ ಗಣಜಲಖೇಡ ಪರಿವಾರ ಮತ್ತು ಅಭಿಮಾನಿ ಬಳಗ ಏರ್ಪಡಿಸಿದ ಲಿಂ.ನಾಗಣ್ಣ ಗಣಜಲಖೇಡ ಅವರ ಪ್ರಥಮ ಪುಣ್ಯ ಸ್ಮರಣೆ ನಿಮಿತ್ಯ ಹಿರಿಯ ಸಾಹಿತಿ ಎಚ್.ಕಾಶೀನಾಥ ರೆಡ್ಡಿ ಸಂಪಾದಿಸಿದ ಸಾರ್ಥಕ ಜೀವನ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡಿ ಸಮಾಜಕ್ಕೆ ಇಂತಹ ವ್ಯಕ್ತಿಗಳು ಯಾವಾಗಲು ಆದರ್ಶವೆಂದರು.
ದಕ್ಷಿಣ ಮತ ಕ್ಷೇತ್ರದ ಕಲಬುರಗಿ ಶಾಸಕ ಅಲ್ಲಮಪ್ರಭು ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ನಮ್ಮ ನಾಗಣ್ಣನವರ ಒಡನಾಟ ಇದೆ.ಅವರು ಸರಕಾರಿ ನೌಕರರ ಸಂಘದ ಕಟ್ಟಡಕ್ಕೆ ಸಹಾಯ ಮಾಡಿದ್ದೇವೆ.ಅನೇಕರಿಗೆ ಅವರು ನೌಕರಿ ಕೊಟ್ಟ ಮಹಾತ್ಮ ಎಂದರು.
ನಾಗಣ್ಣನವರ ಬದುಕು ತನಗಾಗಿ ಅಲ್ಲ ಇತರರಿಗೆ ಮಾಡಿದ
ಬಾಳಿದ್ದು ಅವರ ಆದರ್ಶ ಎಂದು ಸಾರಂಗಧರ- ಸುಲಫಲ ಮಠದ ಡಾ.ಸಾರಂಗಧರ ಮಹಾಸ್ವಾಮಿಗಳು ನುಡಿದರು.
ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಮಾತನಾಡಿ ನಮ್ಮದು ಸ್ನೇಹಕ್ಕಿಂತ ಮಿಗಿಲಾದ ಸಂಬಂಧ
ಅವರೊಂದಿಗಿನ ಅನನ್ಯತೆ ಅಪಾರ ಎಂದರು.
ಪ್ರಾಸ್ತಾವಿಕ ನುಡಿ ಆಡಿದ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಅವರು ಸಾರ್ಥಕ ಜೀವನ ಗ್ರಂಥದಲ್ಲಿ ೩೩೦ ಪುಟಗಳು ಹೊಂದಿದೆ.ಮೂರು ಭಾಗದಲ್ಲಿ ಕಳ್ಳುಬಳ್ಳಿಯಲ್ಲಿ ಎಂಟು ಲೇಖನ,ಎಪ್ಪತ್ತೆರಡು ಲೇಖನಗಳು ಭಾಗ ಮೂರರಲ್ಲಿ ತೆರೆದ ಬದುಕು ಗಣಜಲಖೇಡ ಅವರ ಆತ್ಮಕಥೆ ಮೂಡಿದೆ.ಅವರ ಚಿತ್ರ ಸಂಪುಟ ಹೊಂದಿದೆ.ಹಾಗೇ ಅವರು ಎಂಬತ್ತೊಂದು ವರ್ಷ ಕಾಲ ಬಾಳಿ ಬದುಕಿದ ಸಾವಿರಾರು ಮಹಿಳೆಯರ ಬಾಳಿಗೆ ಆಶಾ ಕಿರಣವಾದವರು ಎಂದರು.ಇದೇ ಸಂದರ್ಭದಲ್ಲಿ ನೃಪತುಂಗ ಪತ್ರಿಕೆ ಸಂಪಾದಕ ಶಿವರಾಯ ದೊಡ್ಡಮನಿ, ಡಾ.ಶಿವಪುತ್ರ ಹರವಾಳ,ಓತಿ ಶರಣಪ್ಪ,ಎ.ಎಂ.ಪಾಟೀಲ
ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಶ್ರದ್ಧಾಂಜಲಿ ಸಂಗಮ್ಮ ನಾಗಣ್ಣ ಗಣಜಲಖೇಡ ವೇದಿಕೆ ಮೇಲೆ ಉಪಸ್ಥಿತಿ ಇದ್ದರು.
ಡಾ.ಜಯಶ್ರೀ ಗಣಜಲಖೇಡ ಪ್ರಾರ್ಥನಾ ಗೀತೆ ಹಾಡಿದರು, ಡಾ.ಶರಣಬಸಪ್ಪ ಗಣಜಲಖೇಡ ಸ್ವಾಗತಿಸಿದರು, ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಸುರೇಶ ಕಾನೇಕರ ವಂದಿಸಿದರು.ರವಿ ಗಣಜಲಖೇಡ, ಸತೀಶ ಗಣಜಲಖೇಡ, ಅಶೋಕ ಗಣಜಲಖೇಡ, ಶಂಕರ ಕೊಡ್ಲಾ,
ದೇವರಮನಿ,ಬಸಣ್ಣ ಸಿಂಗೆ,ಎಸ್.ವಿ.ಹತ್ತಿ,ಹತ್ತಿ ಗ್ರಂಥಪಾಲಕರು,ನಾಗಾರ್ಜುನ ರೆಡ್ಡಿ,ಮೊದಲಾದವರು ಉಪಸ್ಥಿತಿ ಇದ್ದರು.