ವಿವಿಧ ಸಾಧಕರಿಗೆ ಸಂಗಮೇಶ್ವರ ದೇವಾಲಯದಿಂದ ಪ್ರಶಸ್ತಿ ಪ್ರದಾನ|| ಚಿಮ್ಮನಚೋಡ: ಪ್ರಶಸ್ತಿಗಳು‌ ಜವಾಬ್ದಾರಿ ಹೆಚ್ಚಿಸುತ್ತವೆ- ಮೊಗಡಂಪಳ್ಳಿ

ವಿವಿಧ ಸಾಧಕರಿಗೆ ಸಂಗಮೇಶ್ವರ ದೇವಾಲಯದಿಂದ ಪ್ರಶಸ್ತಿ ಪ್ರದಾನ|| ಚಿಮ್ಮನಚೋಡ: ಪ್ರಶಸ್ತಿಗಳು‌ ಜವಾಬ್ದಾರಿ ಹೆಚ್ಚಿಸುತ್ತವೆ- ಮೊಗಡಂಪಳ್ಳಿ

ವಿವಿಧ ಸಾಧಕರಿಗೆ ಸಂಗಮೇಶ್ವರ ದೇವಾಲಯದಿಂದ ಪ್ರಶಸ್ತಿ ಪ್ರದಾನ 

ಚಿಮ್ಮನಚೋಡ: ಪ್ರಶಸ್ತಿಗಳು‌ ಜವಾಬ್ದಾರಿ ಹೆಚ್ಚಿಸುತ್ತವೆ- ಮೊಗಡಂಪಳ್ಳಿ

ಚಿಂಚೋಳಿ: ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ ಇದರಿಂದ ಪ್ರಶಸ್ತಿ ಪುರಸ್ಕೃತರು ಇನ್ನೂ ಉತ್ತಮ‌ಕೆಲಸ ಮಾಡಲು ಸಾಧ್ಯವಾಗುತ್ತದೆ ಮತ್ತು ಇದರಿಂದ ಬೇರೆಯವರಿಗೆ ಪ್ರೇರಣೆ ಸಿಗುತ್ತದೆ ಎಂದು ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಮೊಗಡಂಪಳ್ಳಿ ತಿಳಿಸಿದರು.

ಅವರು ತಾಲ್ಲೂಕಿನ‌ಚಿಮ್ಮನಚೋಡ ಗ್ರಾಮದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಪ್ರಶಸ್ತಿ ಪ್ರದಾನ‌ ಮಾಡಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಗಮೇಶ್ವರ ದೇವಾಲಯ ಟ್ರಸ್ಟ ಅಧ್ಯಕ್ಷ ಸಂಗಾರಡ್ಡಿ‌ ನರಸಣ್ಣನವರ ಮಾತನಾಡಿ ಸಂಗಮೇಶ್ವರರ 75ನೇ ಜಾತ್ರಾ ಮಹೋತ್ಸವ ಅಮೃತ ವರ್ಷಾಚರಣೆ ಹಾಗೂ ಶ್ರಾವಣ ಮಾಸದ 24ನೇ ವರ್ಷದ ಸಂಗೀತ ರುದ್ರಾಭಿಷೇಕ ಸಮಾರೋಪ ಸಮಾರಂಭ ಅರ್ಥಪೂರ್ಣಗೊಳಿಸಲು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ‌ ಮಾದರಿ‌ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದ್ದೇವೆ. ಇದು ಸಮಾಜಕ್ಕೆ ಸಂದೇಶ ಕೊಡುವ ಪ್ರಯತ್ನದ ಭಾಗ ಎಂದು ತಿಳಿಸಿದರು.

ಸಾಧಕರಾದ ನಾಗಮ್ಮ‌ ಪ್ರಭುಲಿಂಗಯ್ಯ ಮಠ (ಸಮಾಜ ಸೇವೆ) ಚಂದ್ರಯ್ಯ ಗುತ್ತೇದಾರ(ಸಮಾಜ ಸೇವೆ), ಕಮಲಮ್ಮ ತೆಲ್ಕಾಪಳ್ಳಿ, ಘಾಳಮ್ಮ ಗಾರಂಪಳ್ಳಿ( ಸಂಗೀತ), ವಾಸಂತಿ ಮ್ಯಾಕಲ( ಸ್ವಯಂ ಉದ್ಯೋಗ), ಭಾಗ್ಯಶ್ರೀ ಗೌನಳ್ಳಿ( ಕೃಷಿ ಪಶು ಪಾಲನೆ), ದತ್ತಕುಮಾರ ವಾಲಿ ( ಸ್ವಚ್ಛತೆ) ಪ್ರಶಸ್ತಿ‌ಪ್ರದಾನ‌ ಮಾಡಲಾಯಿತು.