ಮತ್ತಿಮಡು ಅವರ ಜನ್ಮದಿನದ ನಿಮಿತ್ತ 101 ಮುತ್ತೈದೆಯರಿಗೆ ಉಡಿ ತುಂಬಿದರು

ಮತ್ತಿಮಡು ಅವರ ಜನ್ಮದಿನದ ನಿಮಿತ್ತ 101 ಮುತ್ತೈದೆಯರಿಗೆ ಉಡಿ ತುಂಬಿದರು
ಕಲಬುರಗಿ: ತಾಲೂಕಿನ ಹರಸೂರ ಗ್ರಾಮದಲ್ಲಿ ಗ್ರಾಮಿಣ ಮತಕ್ಷೇತ್ರದ ಶಾಸಕ ಬಸವರಾಜ ಬಿ. ಮತ್ತಿಮಡು ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಮುಖಂಡ ಆನಂದ ಕಣಸೂರ ನೇತೃತ್ವದಲ್ಲಿ 101 ಮುತ್ತೈದೆಯರಿಗೆ ಉಡಿ ತುಂಬವ ಕಾರ್ಯಕ್ರಮ, 45 ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕಿಟ್ ವಿತರಣೆ ಕಾರ್ಯಕ್ರಮವನ್ನು ಪೂಜ್ಯರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಾಳಾದಪೂಜ್ಯ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಹರಸೂರಿನ ಶ್ರೀ ಸಿದ್ದರಾಮ ಶಿವಾಚಾರ್ಯರು, ಗೋರಕನಾಥ ಶಾಕಪೂರೆ, ದಿವ್ಯಾ ಹಾಗರಗಿ, ವಿನೋದ ಪಾಟೀಲ ಸರಡಗಿ, ಈಶ್ವರ್ ರಾಥೋಡ, ಶ್ರೀಧರ ನಾಗನಹಳ್ಳಿ, ಪತ್ರಕರ್ತರಾದ ಸುರೇಶ ಲೆಂಗಟಿ, ಮಲ್ಲಿಕಾರ್ಜುನ್ ಮೂಲಗೆ, ಕು. ಭಾಗ್ಯಶ್ರೀ ಪಾಟೀಲ, ಅಶೋಕ್ ಪೊದ್ದಾರ, ಬಸವರಾಜ ಸಮಾಳ, ಸಾಯಿಬಣ್ಣ ಜಮಾದಾರ, ಮಂಗಲಾ ಕಂತಿ, ಪುಷ್ಪಾ ಪೋದ್ದಾರ, ಸುಜಾತ ಸಮಾಳ ಸೇರಿದಂತೆ ಇತರರು ಇದ್ದರು.