ಕನ್ನಡ ಸೇನೆಯ ಐದು ಗ್ರಾಮ ಘಟಕಗಳ ಉದ್ಘಾಟನೆ.

ಕನ್ನಡ ಸೇನೆಯ ಐದು ಗ್ರಾಮ ಘಟಕಗಳ ಉದ್ಘಾಟನೆ.
ಚಿಟಗುಪ್ಪ: ಕನ್ನಡಕ್ಕಾಗಿ ಸದಾ ದುಡಿಯುತ್ತಿರುವ ಕನ್ನಡ ಸೇನೆಯ ಪದಾಧಿಕಾರಿಗಳು ನಾಡಿಗೆ ಮಾದರಿಯಾಗಿದ್ದಾರೆ ಎಂದು ಚಿಟಗುಪ್ಪಾ ವೃತ್ತ ನಿರೀಕ್ಷಕರಾದ ಶ್ರೀನಿವಾಸ ವಲ್ಲಾಪೂರೆ ಹೇಳಿದರು.
ನಗರದ ಗಣೇಶ ಮಂದಿರದ ಸಭಾಂಗಣದಲ್ಲಿ ಜರುಗಿದ
ಕನ್ನಡ ಸೇನೆಯ ಐದು ಗ್ರಾಮ ಘಟಕಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು ಭಾಷಾ ಅಭಿಮಾನ ಸರ್ವರಲ್ಲಿಯೂ ಇರಬೇಕು. ಬೇರೆ ಭಾಷೆಯ ಬಗ್ಗೆ ಕೀಳರಿಮೆ ಬೇಡ, ನಮ್ಮತನವನ್ನು ನಾವು ಯಾವತ್ತೂ ಮರೆಯಬಾರದು. ಕನ್ನಡ ಭಾಷೆಯನ್ನು ದೇವ ಭಾಷೆಯಾಗಿ ಮಾಡಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಕನ್ನಡ ಭಾಷೆ ಜಗತ್ತಿನಲ್ಲಿರುವ ಅತ್ಯಂತ ಸುಂದರ ಹಾಗೂ ಹಳೆಯ ಭಾಷೆಯಾಗಿದೆ. ಕನ್ನಡದಲ್ಲಿ ಕಡ್ಡಾಯವಾಗಿ ನಾಮಫಲಕಗಳು ಇರಬೇಕು. ಕನ್ನಡ ಸೇನೆ ಸಮಾಜಮುಖಿ ಸದಾ ದುಡಿಯುತ್ತಿರುವ ಸಂಘಟನೆಯಾಗಿದೆ ಎಂದರು.
ಬಿ ಎಸ್ ಎಸ್ ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ ಈ ಭಾಗದಲ್ಲಿ ಕನ್ನಡ ಸೇನೆ ಪದಾಧಿಕಾರಿಗಳು ಅನೇಕ ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಭಾಷಾ ಬೆಳವಣಿಗೆಗಾಗಿ ನಿಸ್ವಾರ್ಥದಿಂದ ದುಡಿಯುತ್ತಿದ್ದಾರೆ.ಕನ್ನಡ ಭಾಷೆ ಬಗ್ಗೆ ಸರ್ವರಲ್ಲಿಯೂ ಹೆಮ್ಮೆ ಇರಬೇಕು ಎಂದರು.
ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷ ರವಿ ಸ್ವಾಮಿ ನೀರ್ಣಾ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಸೇನೆ ಬೆಳೆದು ಬಂದ ದಾರಿಯ ಬಗ್ಗೆ ವಿವರಿಸಿದರು.
ಈ ಸಮಯದಲ್ಲಿ ನೂತನವಾಗಿ ಆಯ್ಕೆಯಾದ ವಳಖಿಂಡಿ,ರಾಂಪೂರ,ಇಟಗಾ,ಮುದನಾಳ,ಮುಸ್ತರಿವಾಡಿ ಗ್ರಾಮ ಘಟಕಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳಿಗೆ ಗೌರವಿಸಿ, ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಚಿಟಗುಪ್ಪಾ ಪೋಲಿಸ್ ಉಪ ನಿರೀಕ್ಷಕ ಬಸವಲಿಂಗಪ್ಪ,
ಜಿಲ್ಲಾಧ್ಯಕ್ಷ ಸುಭಾಷ್ ಕೆನಾಡೆ,ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಾಕ್ಷಿ ಆರ್ ಹಿರೇಮಠ, ತಾಲೂಕು ಅಧ್ಯಕ್ಷ ಪವನ ಪೂಜಾರಿ, ಗಣ್ಯರಾದ ಶರಣಪ್ಪಾ ಗಡಮಿ, ಶಾಮರಾವ ಭೂತಾಳೆ, ರಾಜು ಪೂಜಾರಿ ಸೇರಿದಂತೆ
ಜಿಲ್ಲಾ, ತಾಲೂಕು,ಗ್ರಾಮ ಘಟಕಗಳ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ವರದಿ - ಸಂಗಮೇಶ ಎನ್ ಜವಾದಿ.