ಹಿಂದೂ ಸ್ವರಾಜ ಸ್ಥಾಪಕ ಶಿವಾಜಿ ಶೋಭಾ ಯಾತ್ರೆಗೆ ಅವಮಾನಿಸಿರುವ ಕಿಡಿಗೇಡಿಗಳಿಗೆ ಬಂಧಿಸಿ : ಮರಾಠ ಸಮಾಜ ಪ್ರತಿಭಟನೆ
ಹಿಂದೂ ಸ್ವರಾಜ ಸ್ಥಾಪಕ ಶಿವಾಜಿ ಶೋಭಾ ಯಾತ್ರೆಗೆ ಅವಮಾನಿಸಿರುವ ಕಿಡಿಗೇಡಿಗಳಿಗೆ ಬಂಧಿಸಿ : ಮರಾಠ ಸಮಾಜ ಪ್ರತಿಭಟನೆ
ಚಿಂಚೋಳಿ : ಬಾಗಲಕೋಟೆ ನಗರ ಮತ್ತು ಚಿತ್ತಾಪೂರ್ ತಾಲೂಕಿನ ರಾವೂರ್ ಗ್ರಾಮದಲ್ಲಿ ನಡೆದಿರುವ ಭವ್ಯ ಶೋಭೆ ಯಾತ್ರೆಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಕಿಡಿಗೇಡಿಗಳು ಅವಮಾನಿಸಿರುವ ಘಟನೆಗೆ ತಾಲೂಕ ಕರ್ನಾಟಕ ಕ್ಷೇತ್ರಿಯ ಮರಾಠ ಪರಿಷತ್ತು ತೀವ್ರವಾಗಿ ಖಂಡಿಸಿ, ಆಡಳಿತ ಸೌಧ ತಹಸೀಲ್ ಕಾರ್ಯಾಲಯ ಎದುರುಗಡೆ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಬಳಿಕ ಅಧ್ಯಕ್ಷ ಸುಧಾಕರ ಪಾಟೀಲ್ ಮಾತನಾಡಿ,
ಹಿಂದೂ ಸ್ವರಾಜ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಲು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಹಿಂದೂ ಧರ್ಮಕ್ಕೆ ಮಾಡಿರುವ ದೊಡ್ಡ ಅವಮಾನವಾಗಿದೆ. ಶಿವಾಜಿ ಮಹಾರಾಜರು ಒಂದು ಜಾತಿ ಧರ್ಮಕ್ಕೆ ಸಿಮ್ಮಿತವಾಗಿಲ್ಲ. ಪ್ರತಿಯೊಬ್ಬ ಹಿಂದೂ ಜಾತಿಗೆ ಆರಾಧಕ ರಾಗಿದ್ದಾರೆ. ಇಂತಹ ಮಹಾನ್ ನಾಯಕನ ಹಿಂದೂ ಜಾಗೃತಿ ಶೋಭಾ ಯಾತ್ರೆಯನ್ನು ಸಹಿಸದೇ ಇರುವ ಕಿಡಿಗೇಡಿಗಳಿಂದ ಕಲ್ಲು ತುರಾಟ ನಡೆಸಲಾಗಿದೆ. ಈ ಘಟನೆಯಿಂದ ಶಿವಾಜಿ ಅಭಿಮಾನಿಗಳಿಗೆ ಮತ್ತು ಅವರ ಅನುಯಾಯಿಗಳಿಗೆ ಹಾಗೂ ಹಿಂದೂ ಸ್ವರಾಜ ಪ್ರತಿಪಾದಿಸುವ ಸ್ವಚ್ಚ ಹಿಂದೂ ಮನಸ್ಸುಗಳಿಗೆ ನೋವುಂಟು ಮಾಡಿದ್ದಲ್ಲದೆ, ರಾಜ್ಯದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿರುವ ಕಿಡಿಗೇಡಿಗಳನ್ನು ಸರಕಾರ ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಈ ರೀತಿ ಘಟನೆಗಳು ಮತ್ತೇ ಮರುಕಳುಹಿಸದಂತೆ ಸರಕಾರ ಕ್ರಮವಹಿಸಬೇಕೆಂದು ಆಗ್ರಹಿಸಿ, ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗಿರಿರಾಜ ನಾಟಿಕಾರ, ಶಾಹಜಿರಾವ ಶಾದಿಪೂರ, ರವಿ ಪಾಟೀಲ್ ಶಾದಿಪೂರ್, ಅಶೋಕ ಮೆಡಿಕಲ್, ಸಂತೋಷ ಚಿತ್ತಲ್, ಅಮರ ಲೋಡನೂರ, ಗಟೋದ್ ಗಜಾ ಪವಾರ, ನಾಗರಾಜ, ಸುಧಾಕರ ಮಿರಿಯಾಣ, ಅಂಬಣ್ಣ ಪೂಜಾರಿ ಅವರು ಉಪಸ್ಥಿತರಿದ್ದರು.
