ಅಪ್ಪನ ಕೆರೆಯು ತಿಪ್ಪೆಯಂತೆ ಆಗಿದೆ, ಕೂಡಲೇ ಸ್ವಚ್ಛತೆ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿಗಳಿಗೆ ಸಚೀನ್ ಎಸ್. ಫರತಾಬಾದ ಮನವಿ
ಅಪ್ಪನ ಕೆರೆಯು ತಿಪ್ಪೆಯಂತೆ ಆಗಿದೆ, ಕೂಡಲೇ ಸ್ವಚ್ಛತೆ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿಗಳಿಗೆ ಸಚೀನ್ ಎಸ್. ಫರತಾಬಾದ ಮನವಿ
ಕಲಬುರಗಿ : ನಗರದಲ್ಲಿರುವಂತಹ ಅಪ್ಪನ ಕೆರೆಯು ಸಂಪೂರ್ಣವಾಗಿ ಹದಗೆಟ್ಟು ತಿಪ್ಪೆಯಂತೆ ಆಗಿದ್ದು, ಕೂಡಲೇ ಕೆರೆಯನ್ನು ಸ್ವಚ್ಛತೆ ಮಾಡಿ, ಸಾರ್ವಜನಿಕರಿಗೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡವಂತೆ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚೀನ್ ಎಸ್. ಫರತಾಬಾದ ಅವರು ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಲಬುರಗಿ ನಗರದಲ್ಲಿ ಸುಮಾರು ಏಳು ಕೆರೆಗಳು ಇದ್ದವು. ಅದರಲ್ಲಿ ಅದು ಕೆರೆಗಳ ಹಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿರುತ್ತಾರೆ. ಆದರೆ ಈಗ ಉಳಿದಿರುವದು ಈ ಅಪ್ಪನ ಕೆರೆ ಮಾತ್ರ, ಈ ಅಪ್ಪನ ಕೆರೆಯಲ್ಲಿ ಸಾರ್ವಜನಿಕರು ಮನಸ್ಸಿಗೆ ಬಂದಂತೆ ಕಸದ ರಾಶಿ ಬಿಸಾಡಿ ಹೋಗುತ್ತಿದ್ದು, ಇದರಿಂದ ಕೆರೆಯ ಸಂಪೂರ್ಣವಾಗಿ ಹಾಳಾಗುತ್ತಿದೆ. ಅಪ್ಪನ ಕೆರೆ ಹಾಳಾಗಲು ಕಾರಣ ಮಹಾನಗರ ಪಾಲಿಕೆನೇ ನೇರ ಹೊಣೆಯಾಗಿರುತ್ತದೆ. ಸದರಿ ಕೆರೆಯಲ್ಲಿ ನೀರು ಇರುವದರಿಂದ ಸುತ್ತಮುತ್ತ ವಾಸಿಸುವ ನಿವಾಸಿಗಳ ಬೋರ್‌ವೇಲ್‌ಗಳಿಗೆ ನೀರು ಬರುತ್ತಿದ್ದು, ಸಾರ್ವಜನಿಕರು ಕೆರೆಯ ಪಕ್ಕದಲ್ಲಿ ಹೋಗುವ ಸಂದರ್ಭದಲ್ಲಿ ದುರ್ವಾಸನೆ ಬರುತ್ತಿದ್ದು,
ಆದ್ದರಿಂದ ಮಾನ್ಯರು ಕೂಡಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿಗಳು. ಲೋಕಸಭಾ ಸದಸ್ಯರು. ದಕ್ಷಿಣ ಮತಕ್ಷೇತ್ರದ ಶಾಸಕರು, ಮಹಾನಗರ ಪಾಲಿಕೆ ಆಯುಕ್ತರು, ಅಪ್ಪನ ಕೆರೆಗೆ ಭೇಟಿ ನೀಡಿ ಅಪ್ಪನ ಕೆರೆಯಲ್ಲಿನ ಕಸವನ್ನು ಸಂಬಂಧಪಟ್ಟ ಮಹಾನಗರ ಪಾಲಿಕೆಯಿಂದ ತೆಗೆಯಿಸಿ, ಕೆರೆಯನ್ನು ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ. ಮಕ್ಕಳಿಗೆ ಬೊಟ್ ಪ್ರಾರಂಭ ಮಾಡಿ. ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುರೇಶ ಹನಗುಡಿ, ಅಕ್ಷಯ, ಅಣವೀರ ಪಾಟೀಲ, ರವಿ ಸಜ್ಜನ್, ಬಸ್ಸು, ಅಜಯ, ಪ್ರವೀಣ ಸಿಂಧೆ, ಅಂಬು ಮಸ್ಕಿ, ಸಾಯಿಕುಮಾರ ಸಿಂದೆ ಸೇರಿದಂತೆ ಉಪಸ್ಥಿತರಿದ್ದರು.