ಜೈಲ ಅಡಳಿತ ಮಂಡಳಿಗೆ ನ್ಯಾಯವಾದಿ ಸಂಜೀವ್ ಕುಮಾರ ಡೊಂಗರಗೌಂವ ನೇಮಕ
ಜೈಲ ಅಡಳಿತ ಮಂಡಳಿಗೆ ನ್ಯಾಯವಾದಿ ಸಂಜೀವ್ ಕುಮಾರ ಡೊಂಗರಗೌಂವ ನೇಮಕ
ಇತ್ತೀಚೆಗೆ, ಕರ್ನಾಟಕ ಸರ್ಕಾರದ ಬಂಧಿಖಾನೆ ಇಲಾಖೆ ವತಿಯಿಂದ ಕಲಬುರಗಿ ಜೈಲ ಅಡಳಿತ ಮಂಡಳಿಗೆ ನ್ಯಾಯವಾದಿಗಳು , ವಕೀಲರ ಸಂಘದ ಕಾರ್ಯಕಾರಿಣಿ ಸದಸ್ಯರಾದ ಸಂಜೀವ್ ಕುಮಾರ ಡೊಂಗರಗೌವ ರವರನ್ನು ಅವರ ಕಾನೂನು ಅರಿವು ಮತ್ತು ದಕ್ಷತೆ ಯನ್ನು ಪರಿಗಣಿಸಿ, ಮೂರು ವರ್ಷದ ಅವಧಿಗೆ ಕಾನೂನು ಸಲಹೆಗಾರೆಂದು ನೇಮಕ ಗೊಳಿಸಿದೆ.
ಇಂದು ಕಲಬುರ್ಗಿಯಲ್ಲಿ ಅವರನ್ನು ಹೊಸ ಸಂಘದ ಕಟ್ಟಡದ ಆವರಣದಲ್ಲಿ ಶಾಲು ಹೊದಿಸಿ, ಗೌರವಿಸಲಾಯಿತು , ಸಂಘದ ಮಾಜಿ ಕಾರ್ಯದರ್ಶಿ ಶರಣು ಪಸ್ತಾಪುರ್, ಮಾಜಿ ಜಂಟಿ ಕಾರ್ಯದರ್ಶಿ ಶೈಲೇಶ ಜಮಾದಾರ, ಮುರಳೀಧರ ಪೂಜಾರಿ, ದಾಯಘನ ಧಾರವಾಡಕರ, ಹಿರಿಯ ವಕೀಲ ವಿ.ಎಸ್.ಜಲದೆ, ಹನಮೇಶ ರಾವ್, ಇತರರು ಉಪಸ್ಥಿತರಿದ್ದರು.