ದಾನಮ್ಮ ದೇವಿಯ ಪುರಾಣ ಮಹಾಮಂಗಲೋತ್ಸವ, ಧಾರ್ಮಿಕ ಸಭೆ
ಗಂಗಾನಗರದಲ್ಲಿ ಗುಡ್ಡಾಪುರ ಶ್ರೀ ದಾನಮ್ಮ ದೇವಿಯ ಪುರಾಣ ಮಹಾಮಂಗಲೋತ್ಸವ, ಧಾರ್ಮಿಕ ಸಭೆ
ಕಲಬುರಗಿ: ಶ್ರಾವಣ ಮಾಸದ ನಿಮಿತ್ಯ ಗಂಗಾನ ಗರದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿಯಿಂದ ಜರುಗುತ್ತಿರುವ ಗುಡ್ಡಾಪುರ ಶ್ರೀ ದಾನಮ್ಮ ದೇವಿಯ ಪುರಾಣ ಮಹಾ ಮಂಗಲೋತ್ಸವ ನಿಮಿತ್ಯ ಧಾರ್ಮಿಕ ಸಭೆ ಕಾರ್ಯಕ್ರಮವು ದಿನಾಂಕ 03-09-2024ರಂದು ಮಂಗಳವಾರ ಗಂಗಾ ನಗರದ ಹನುಮಾನ್ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 11-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸತ್ಸಂಗ ಸಮಿತಿಯ ಅಧ್ಯಕ್ಷರಾದ ಅನಿಲ್ ಎನ್.ಕೂಡಿ ಕಾರ್ಯದರ್ಶಿ ಅಶೋಕ್ ಬಿದನೂರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಆಗಸ್ಟ್ 12ರಿಂದ ಪ್ರಾರಂಭವಾಗಿರುವ ಗುಡ್ಡಾಪುರ ಶ್ರೀ ದಾನಮ್ಮ ದೇವಿಯ ಮಹಾ ಪುರಾಣ ಯಶಸ್ವಿಯಾಗಿ ಗಂಗಾನಗರದಲ್ಲಿ ಪ್ರತಿ ದಿನ 8-00ರಿಂದ ರಾತ್ರಿ 10-00 ಗಂಟೆವರೆಗೆ ನಡೆಯುತ್ತಿದೆ.ಹೆಸರಾಂತ ಪುರಾಣ ಪಂಡಿತ ವೇ.ಮು.ಶ್ರೀ ಸಿದ್ದೇಶ್ವರ ಶಾಸ್ತ್ರಿಗಳು ಹಿರೇಮಠ್ ಸುಂಟನೂರ ಅವರು ಪುರಾಣ ನಡೆಸಿಕೊಡುತ್ತಿದ್ದಾರೆ.ಶ್ರೀ ದಾನಮ್ಮ ದೇವಿಯ ಜೀವನ ಚರಿತ್ರೆ ಮತ್ತು ಅವರ ಕಾಯಕ ಪವಾಡಗಳು ಹಾಗೂ ದಾಸೋಹದ ಮಹಿಮೆ ಕುರಿತು ವಿಸ್ತಾರವಾಗಿ ಪುರಾಣದ ಮೂಲಕ ತಿಳಿಸುತ್ತಿದ್ದಾರೆ.ಪುರಾಣ ಕಾರ್ಯಕ್ರಮದಲ್ಲಿ ದಾನಮ್ಮ ದೇವಿಯ ತೊಟ್ಟಿಲು ತೂಗುವ ಮದುವೆಯ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಿದ್ದು ವಿಶೇಷವಾಗಿತ್ತು.ಮಹಿಳೆಯರಿಗೆ ಸೀರೆ ಉಡಿಸಿ ಪದಗಳನ್ನು ಹಾಡಲಾಯಿತು.ಪುರಾಣ ಕೇಳಲು ದಿನ ನಿತ್ಯ ನಗರದ ಹಲವಾರು ಬಡಾವಣೆಗಳ ಭಕ್ತರು, ಸಾರ್ವಜನಿಕರು, ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಅದರಂತೆ ನಿರಂತರ ದಿನಾಲೂ ನೂರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.
ಇಂದು ನಡೆಯುವ ಮಹಾ ಮಂಗಲೋತ್ಸವ ಧಾರ್ಮಿಕ ಸಭೆಯ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಷ. ಬ್ರ.ಡಾ. ರಾಜಶೇಖರ್ ಶಿವಾಚಾರ್ಯರು ಚೌದಾಪುರಿ ಹಿರೇಮಠ್ ಕಲಬುರಗಿ, ಹಾಗೂ ರೇವಣಯ್ಯಸ್ವಾಮಿ ಸುಂಟನೂರ ಆಗಮಿಸುವರು, ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ವಹಿಸುವರು, ಮುಖ್ಯ ಅತಿಥಿಗಳಾಗಿ ಖ್ಯಾತ ಉದ್ದಿಮೆದಾರರಾದ ಉಮೇಶ್ ತಳವಾರ್, ನಿವೃತ್ತ ಎಇಇ ನೀಲಕಂಠ ಎಂ. ಜಮಾದಾರ್ ಅಮೃತ ಎಚ್. ಡಿಗ್ಗಿ, ಮುಂತಾದ ಗಣ್ಯಮಾನ್ಯರು ಭಾಗವಹಿಸುವರು ಪುರಾಣ ಪಂಡಿತ ವೇದಮೂರ್ತಿ ಪಂಡಿತ್ ಸಿದ್ದೇಶ್ವರ ಶಾಸ್ತ್ರಿಗಳು ಹಿರೇಮಠ ಸುಂಟನೂರ್, ಸಂಗೀತ ಸೇವೆ ನೀಡುತ್ತಿರುವ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಬಾಬುರಾವ್ ಕೋಬಾಳ್, ಹಾಗೂ ಸತ್ಸಂಗ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿರುವರು. ಗಂಗಾನಗರ ಸೇರಿದಂತೆ ಬೇರೆ ಬಡಾವಣೆಯ ಹಿರಿಯರು, ಮಹಿಳೆಯರು, ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.