ವೀರಣ್ಣ ಮದ್ರಕಿ ನಿಧನ

ವೀರಣ್ಣ ಮದ್ರಕಿ ನಿಧನ

ವೀರಣ್ಣ ಮದ್ರಕಿ ನಿಧನ

ಶಹಾಬಾದ :ತೋನಸನಹಳ್ಳಿ ಗ್ರಾಮದ ವೀರಣ್ಣ ಮಲ್ಕಪ್ಪ ಮದ್ರಕಿ

(70) (ಬಿಜೆಪಿ ಹಿಂದುಳಿದ ಮೋರ್ಚಾ ಪ್ರಚಾರ ಸಮಿತಿ ಸಂಚಾಲಕ ಬಸವರಾಜ ಮದ್ರಕಿ ರವರ ತಂದೆ) ಗುರುವಾರ ಏ. 10 ರಂದು ಸಾಯಂಕಾಲ 4 ಗಂಟೆಗೆ ಅನಾರೋಗ್ಯದಿಂದ ನಿಧಾನರಾಗಿದ್ದಾರೆ. ಅವರಿಗೆ ಪತ್ನಿ, 4 ಜನ ಸುಪುತ್ರರು ಹಾಗೂ ಓರ್ವ ಸುಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಹೊಂದಿದ್ದರು.

ಅವರ ಅಂತ್ಯಕ್ರಿಯೆ ಶುಕ್ರವಾರ ಏ. 11 ರಂದು ಮದ್ಯಾಹ್ನ 3 ಗಂಟೆಗೆ ಶಹಾಬಾದ ತಾಲ್ಲೂಕಿನ ತೋನಸನಹಳ್ಳಿ (ಎಸ) ಗ್ರಾಮದಲ್ಲಿರುವ ಅವರ ಸ್ವಂತ ಹೊಲದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಶೋಕ ವ್ಯಕ್ತ : ಉದ್ಯಮಿದಾರ ಮಹಾದೇವ ಬಂದಳ್ಳಿ, ಬಿಜೆಪಿ

ಮಾಜಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಕುರಬ ಸಮಾಜದ ಅಧ್ಯಕ್ಷನಿಂಗಣ್ಣ ಪೂಜಾರಿ, ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಅಧ್ಯಕ್ಷ ರಾಜೇಶ ಯನಗುಂಟಿಕರ, ಮಹಾದೇವ ತರನಳ್ಳಿ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.

ಶಹಾಬಾದ್ ವರದಿ ನಾಗರಾಜ್ ದಂಡಾವತಿ