ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ ಆರೋಪ

ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ ಆರೋಪ

ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ ಆರೋಪ

ಕಲಬುರಗಿ: ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಗುಲ್ಬರ್ಗ ವಿವಿಯ ಮೌಲ್ಯಮಾಪನ ಕುಲಸಚಿವೆ ಮೇದಾವಿನಿ ಎಸ್. ಕಟ್ಟಿ ಅವರು, ವಿಶ್ವವಿದ್ಯಾಲಯ ಠಾಣೆಯಲ್ಲಿ ಐವರ ವಿರುದ್ಧ ದೂರು ದಾಖಲಿಸಿದ್ದಾರೆ.

ರಾಜು ಕಗ್ಗನಮಡಿ, ಗೌತಮ ಕರಿಕಲ, ಬಾಬುರಾವ ಬೀಳಗಿ, ನಾಗರಾಜ, ಸಚಿನ್ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾಜು ಮತ್ತು ಆತನ ಸಂಗಡಿಗರು ಪರೀಕ್ಷಾ ವಿಭಾಗಕ್ಕೆ ಬಂದು ಕುಲಸಚಿವೆಯ ಕೆಲಸದ ಬಗ್ಗೆ ಅನಾವಶ್ಯಕ ಪ್ರಶ್ನಿಸಿದ್ದಾರೆ. ಕಚೇರಿ ಅಧೀ‌ಕ್ಷಕರ ಕೊಠಡಿಯಲ್ಲಿ ಬಂದು ಕುಳಿತುಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.