ಮೊಬೈಲ್ ಹ್ಯಾಕ್ ಕಾನ್‌ಸ್ಟೆಬಲ್‌ನ ಖಾತೆಯಿಂದ ರೂ.1.75 ಲಕ್ಷ ವಂಚನೆ

ಮೊಬೈಲ್ ಹ್ಯಾಕ್ ಕಾನ್‌ಸ್ಟೆಬಲ್‌ನ ಖಾತೆಯಿಂದ ರೂ.1.75 ಲಕ್ಷ  ವಂಚನೆ

ಮೊಬೈಲ್ ಹ್ಯಾಕ್ ಮಾಡಿದ ಕಾನ್ಸ್ಟೇಬಲ್ ವಂಚಕರು..

ಕಾನ್‌ಸ್ಟೆಬಲ್‌ನ ಖಾತೆಯಿಂದ ರೂ.1.75 ಲಕ್ಷ ಲಪಟಾಯಿಸಿದ ವಂಚಕರು

ಕಲಬುರಗಿ: ನಗರದ ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರ ಮೊಬೈಲ್ ಹ್ಯಾಕ್ ಮಾಡಿದ ವಂಚಕರು, ಆತನ ಬ್ಯಾಂಕ್ ಖಾತೆಯಿಂದ ₹1.75 ಲಕ್ಷ ಲಪಟಾಯಿಸಿದ್ದಾರೆ.

ಡಿಎಆರ್‌ ಪೊಲೀಸ್ ಕ್ವಾಟರ್ಸ್ ನಿವಾಸಿ ಪೊಲೀಸ್ ಕಾನ್‌ಸ್ಟೆಬಲ್ ಸಿದ್ದಪ್ಪ ಮಾಳಪ್ಪ ಗೋಡಿಹಾಳ ಹಣ ಕಳೆದುಕೊಂಡ ಸಂತ್ರಸ್ತ. ಅಪರಿಚಿತ ವ್ಯಕ್ತಿಯ ವಿರುದ್ಧ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯೊಬ್ಬರು ಎಪಿಕೆ ಫೈಲ್ ಮೂಲಕ ಸಿದ್ದಪ್ಪ ಅವರ ಮೊಬೈಲ್‌ ಹ್ಯಾಕ್ ಮಾಡಿದರು. ಕಾನ್‌ಸ್ಟೆಬಲ್‌ ಮೊಬೈಲ್‌ಗೆ ಬರುವ ಎಸ್ಎಂಎಸ್‌ಗಳನ್ನು ಬೇರೊಂದು ಮೊಬೈಲ್‌ಗೆ ಬರುವಂತೆ ಮಾಡಿಕೊಂಡರು. ಬ್ಯಾಂಕ್‌ ಖಾತೆಯಿಂದ ಹಂತ– ಹಂತವಾಗಿ ₹1.75 ಲಕ್ಷ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.