ನಿಧನ ವಾರ್ತೆ -ಸಾಲ ಬಾದೆಗೆ ,ಬಿಳವಾರ ಗ್ರಾಮದ ರೈತ ಆತ್ಮಹತ್ಯೆ

ನಿಧನ ವಾರ್ತೆ -ಸಾಲ ಬಾದೆಗೆ ,ಬಿಳವಾರ ಗ್ರಾಮದ ರೈತ ಆತ್ಮಹತ್ಯೆ

ನಿಧನ ವಾರ್ತೆ -ಬಿಳವಾರ ಗ್ರಾಮದಲ್ಲಿ ಸಾಲ ಬಾದೆಗೆ ರೈತ ಆತ್ಮಹತ್ಯೆ

 ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ರೈತ ಮಲ್ಲಪ್ಪ / ಭೀಮರಾಯ ಕಂಬಳಿ (55) ಸಾಲಬಾದೆಯಿಂದ ಮನನೊಂದು ಕ್ರಿಮಿನಾಶಕ ಸೇವಿಸಿ, ತನ್ನ ಸ್ವಂತ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಕರ್ನಾಟಕ ಗ್ರಾಮೀಣ ಬ್ಯಾಂಕನಲ್ಲಿ 2 ಲಕ್ಷ ರುಪಾಯಿ ಸಾಲ ಹಾಗೂ ಖಾಸಗಿಯಲ್ಲು ಸಾಲ ಮಾಡಿದ್ದರು ಎನ್ನಲಾಗಿದೆ. ಶನಿವಾರ ಬೆಳಗ್ಗೆ ಜಮೀನಿನ ಕಡೆ ಹೋದ ಗ್ರಾಮಸ್ಥರು ಜಮೀನಿನಲ್ಲಿ ಮೃತಪಟ್ಟ ಮಲ್ಲಪ್ಪರನ್ನು ನೋಡಿ ಕುಟುಂಬಸ್ಥರಿಗೆ ಹಾಗೂ ಯಡ್ರಾಮಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಯಡ್ರಾಮಿ ಪೊಲೀಸ್ ಠಾಣೆಯ ಆರಕ್ಷಕ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿದ್ದಾರೆಂದು ತಿಳಿದುಬಂದಿದೆ.