ಸಮಾಜವನ್ನು ಒಗ್ಗೂಡಿಸಲು ಭಜನಾ ಸ್ಪರ್ಧೆಗಳ ಪಾತ್ರ ಪ್ರಮುಖ' ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷ ಡಾ.ವಾದಿರಾಜ ತಾಯಲೂರು ಅಭಿಮತ

'ಸಮಾಜವನ್ನು ಒಗ್ಗೂಡಿಸಲು ಭಜನಾ ಸ್ಪರ್ಧೆಗಳ ಪಾತ್ರ ಪ್ರಮುಖ'

ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷ ಡಾ.ವಾದಿರಾಜ ತಾಯಲೂರು ಅಭಿಮತ

*ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿಯಿಂದ ಕೃಷ್ಣ ಲೀಲೋತ್ಸವದ ಪ್ರಯುಕ್ತ ಭಜನಾ ಸ್ಪರ್ಧೆ ಆಯೋಜನೆ* 

ಬಸವನಗುಡಿಯ ಗೋವರ್ಧನ ಕ್ಷೇತ್ರ ಪುತ್ತಿಗೆ ಮಠ ಮತ್ತು ಅಮೃತ ಶಿಶು ನಿವಾಸದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಖಿಲ ಕರ್ನಾಟಕ ಮಟ್ಟದ ಭಜನಾ ಸ್ಪರ್ಧೆಯನ್ನು ಅಖಿಲ ಕರ್ನಾಟಕ ಭಜನಾ ಪರಿಷತ್ತು ಮತ್ತು 20ನೇ ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು .

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷ ಡಾ.ವಾದಿರಾಜ ತಾಯಲೂರು ಚಾಲನೆ ನೀಡಿ ಸನಾತನ ಧರ್ಮ ಉಳಿವ ನಿಟ್ಟಿನಲ್ಲಿ ಭಜನೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ . ವಿಭಜನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಮಾಜವನ್ನು ಒಗ್ಗೂಡಿಸಲು ಇಂತಹ ಸ್ಪರ್ಧೆಗಳು ಅಗತ್ಯ ಎಂದು ತಿಳಿಸಿದರು .

ದಾಸ ಸಾಹಿತ್ಯ ಚಿಂತಕ ಡಾ. ಅನಂತ ರಾವ್ ದಂಡಿನ್ , ಹಿರಿಯ ಪತ್ರಕರ್ತ ಹನುಮೇಶ್ ಯಾವಾಗಲ್ ಸ್ಪರ್ದಿಗಳಿಗೆ ಪ್ರಮಾಣಪತ್ರ ವಿತರಿಸಿದರು.ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಧರ್ಮ ದೀಕ್ಷಾ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮದ ಆಯೋಜಕರಾದ ಅಕ ಭ ಪ ದ ಡಾ ಕೆ ಜಿ ಮುರುಳಿಧರ ಶರ್ಮ ,ಸಂಘಟನಾ ಕಾರ್ಯದರ್ಶಿ ಟಿವಿ ಮಲ್ಲಿಕಾರ್ಜುನ , ತೀರ್ಪುಗಾರರಾದ ಪದ್ಮ ಪ್ರಕಾಶ್ , ಸುಗುಣ ಬೆಳ್ಳೂರು ಮೊದಲಾದವರು ಉಪಸ್ಥಿತರಿದ್ದರು