ವಿದ್ಯಾರ್ಥಿ ವೇತನದಲ್ಲಿ ತಾರತಮ್ಯ ಮಾಡದೆ ಎಲ್ಲಾ ಮಕ್ಕಳಿಗೂ ನೀಡುವಂತೆ : ವಿಶ್ವನಾಥ ಪಾಟೀಲ ಗೌನಳ್ಳಿ ಮನವಿ

ವಿದ್ಯಾರ್ಥಿ ವೇತನದಲ್ಲಿ ತಾರತಮ್ಯ ಮಾಡದೆ ಎಲ್ಲಾ ಮಕ್ಕಳಿಗೂ ನೀಡುವಂತೆ : ವಿಶ್ವನಾಥ ಪಾಟೀಲ ಗೌನಳ್ಳಿ ಮನವಿ

 ವಿದ್ಯಾರ್ಥಿ ವೇತನದಲ್ಲಿ ತಾರತಮ್ಯ ಮಾಡದೆ ಎಲ್ಲಾ ಮಕ್ಕಳಿಗೂ ನೀಡುವಂತೆ : ವಿಶ್ವನಾಥ ಪಾಟೀಲ ಗೌನಳ್ಳಿ ಮನವಿ 

 2023 - 24 ನೇ ಸಾಲಿನ ವಿದ್ಯಾರ್ಥಿವೇತನ ನೀಡುವಲ್ಲಿಯೂ ರಾಜ್ಯ ಸರ್ಕಾರ ಮಕ್ಕಳ ನಡುವೆಯೂ ತಾರತಮ್ಯ ನೀತಿ ಅನುಸರಿಸುತ್ತದೆ ಎಲ್ಲ ಮಕ್ಕಳಿಗೂ ಸ್ಕಾಲರ್ಶಿಪ್ ನೀಡದೆ ಲೋಕಸಭಾ ಚುನಾವಣೆಗೂ ಮೊದಲು 30 ಪ್ರತಿಶತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಉಳಿದ 70 ಪ್ರತಿಶತ ವಿದ್ಯಾರ್ಥಿಗಳಿಗೆ ಐದಾರು ತಿಂಗಳ ಕಳೆದರೂ ವಿದ್ಯಾರ್ಥಿ ವೇತನ ನೀಡಿರುವುದಿಲ್ಲ ಮಕ್ಕಳಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ  ಕ್ರಮ ಅತ್ಯಂತ ಖಂಡನಿಯ ಎಂದು ವಿಶ್ವನಾಥ ಪಾಟೀಲ ಗೌನಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಶಿಕ್ಷಣ ಸಚಿವರಿಗೆ,  ಸಂಬಂಧಪಟ್ಟ ಅಧಿಕಾರಿಗಳಿಗೆ , ವಿದ್ಯಾರ್ಥಿಗಳಲ್ಲಿ ತಾರತಮ್ಯ ನೀತಿ ಕೈ ಬಿಟ್ಟು ಕೂಡಲೇ ರಾಜ್ಯದ ಉಳಿದ ಎಲ್ಲಾ ಮಕ್ಕಳಿಗೂ ವಿದ್ಯಾರ್ಥಿವೇತನ ಸ್ಕಾಲರ್ಶಿಪ್ ಹಣ ಬಿಡುಗಡೆ ಮಾಡಿಸಬೇಕು ಎಂದರು.

 ಮುಖ್ಯಮಂತ್ರಿಗಳು ಈ ವಿಷಯ ಕುರಿತು ಶಿಕ್ಷಣ ಸಚಿವರಿಗೆ ಸಂಭಂದಪಟ್ಟ  ಇಲಾಖೆಯ ಅಧಿಕಾರಿಗಳಿಗೆ ಈ ಕೂಡಲೇ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಬೇಕು ಎಂದು 

   ಮುಖ್ಯಮಂತ್ರಿಗಳಿಗೆ,  ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ , ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಉನ್ನತ ಶಿಕ್ಷಣ ಇಲಾಖೆಗೆ ಪಾಟೀಲ ಮನವಿ ಸಲ್ಲಿಸಿದರು.