ಅಂತರಾಷ್ಟ್ರೀಯ ಕರಾಟೆಪಟು ಮನೋಹರ್ ಕುಮಾರ್ ಬೀರನೂರ ರವರ ತಂಡ 36 ಪದಕಗಳ ಸಾಧನೆ

ಅಂತರಾಷ್ಟ್ರೀಯ ಕರಾಟೆಪಟು ಮನೋಹರ್ ಕುಮಾರ್ ಬೀರನೂರ ರವರ ತಂಡ 36 ಪದಕಗಳ ಸಾಧನೆ

ಅಂತರಾಷ್ಟ್ರೀಯ ಕರಾಟೆಪಟು ಮನೋಹರ್ ಕುಮಾರ್ ಬೀರನೂರ ರವರ ತಂಡ 36 ಪದಕಗಳ ಸಾಧನೆ

ಕಲಬುರಗಿ: ಆಗಸ್ಟ್ 23 ರಿಂದ 25 ರಂದು ಮೈಸೂರಿನಲ್ಲಿ ನಡೆದ 27 ನೆಯ ನ್ಯಾಷನಲ್ ಶೀಟೋ ರಿಯೋ ಕರಾಟೇ ಡು ಚಾಂಪಿಯನ್ಶಿಪ್‌ನಲ್ಲಿ ದೇಶದ ಹಲವಾರು ರಾಜ್ಯಗಳಿಂದ ಸುಮಾರು ಸಾವಿರಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದು ಈ ಪಂದ್ಯಾವಳಿಯಲ್ಲಿ ಕಲ್ಯಾಣ ಕರ್ನಾಟಕ ಕಲಬುರಗಿ ಜಿಲ್ಲೇಯ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ಸ್ಪೋರ್ಟ್ಸ್ ಕಮಿಷನ್ ರಾಜ್ಯದ ಚೇರ್ಮೆನ್ ಮತ್ತು ಹೆವೆನ್ ಫೈಟರ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಂತರಾಷ್ಟ್ರೀಯ ಕರಾಟೆ ಪಟ್ಟು ಮನೋಹರಕುಮಾರ ಬೀರನೂರ ಅವರ ನೇತೃತ್ವದಲ್ಲಿ ಕರಾಟೇ ತಂಡ 17 ಬಂಗಾರದ ಪದಕ 13 ಬೆಳ್ಳಿ ಪದಕ 6 ಕಂಚಿನ ಪದಕ ಒಟ್ಟು 36 ಪ್ರಶಸ್ತಿ ಮತ್ತು ಪದಕಗಳನ್ನು ಪಡೆದು ರಾಜ್ಯಕ್ಕೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ. 

ಈ ಚಾಂಪಿಯನ್ಶಿಪ್‌ಗೆ ಮೈಸೂರಿನ ಮಹಾರಾಜರು ಮತ್ತು ಪಾರ್ಲಿಮೆಂಟ್ ಸದಸ್ಯರಾದ ಯದುವೀರ್ ಕೃಷ್ಣ ದತ್ತ ನರಸಿಂಹರಾಜ ಒಡೆಯರ್ ಅವರು ಉದ್ಘಾಟಿಸಿದರು.   

ಈ ಚಾಂಪಿಯನ್ ಶಿಪ್‌ನ ಯೋಜನೆಯನ್ನು ಮಾಜಿ ವಿಧಾನ ಪರಿಷತ್ನ ಸದಸ್ಯರು ಆಲ್ ಇಂಡಿಯಾ ಶೀಟೋ ರಿಯೋ ಕರಾಟೆ ಸಂಸ್ಥೆ & ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಶಿಹಾನ ಸಿ.ಎಸ್ ಅರುಣ ಮಾಚಯ್ಯನವರು ಆಯೋಜಿಸಿದರು.

 ಈ ಕರಾಟೆ ಪಟ್ಟುಗಳ ಸಾಧನೆಗೆ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು, ರಾಜಕೀಯ ಮುಖಂಡರು, ಅಧಿಕಾರಿ ವರ್ಗದವರು, ಕ್ರೀಡಾ ಅಭಿಮಾನಿಗಳು, ಹ್ಯಾವೆನ್ ಫೈಟರ್ ಸಂಸ್ಥೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಹೇವೆನ್ ಫೈಟರ್ ಸಂಸ್ಥೆಯ ರಾಷ್ಟ್ರೀಯ ಕರಾಟೆಪಟು ಆಕಾಂಕ್ಷ ಪುರಾಣ ಮತ್ತು ಕಲ್ಯಾಣ ಕರ್ನಾಟಕ ಉಪಾಧ್ಯಕ್ಷರಾದ ಅನಿಲಕುಮಾರ್ ಅಳಿಮನಿ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.