ರಸ್ತೆ ಬದಿಕಂಠಿ ಜನರಿಗೆ ಕಂಟಕ-ಉಮೇಶ್ ಕೆ ಮುದ್ನಾಳ
 
                                ರಸ್ತೆ ಬದಿಕಂಠಿ ಜನರಿಗೆ ಕಂಟಕ-ಉಮೇಶ್ ಕೆ ಮುದ್ನಾಳ
ರಸ್ತೆಯ ಎರಡೂ ಬದಿಗಳಲ್ಲಿ ಜಾಲೆ ಕಂಟಿಗಳು, ಜನ ನರಳಾಟ! ಜಿಲ್ಲಾಡಳಿತಕ್ಕೆ ಉಮೇಶ್ ಕೆ ಮುದ್ನಾಳ ಎಚ್ಚರಿಕೆ!
ಜಿಲ್ಲಾಡಳಿತಕ್ಕೆ ಉಮೇಶ್ ಕೆ. ಮುದ್ನಾಳ ಎಚ್ಚರಿಕೆ, ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಎಚ್ಚರ!
ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಖಾನಾಪೂರದಿಂದ, ಕರಣಿಗಿ ಮತ್ತು ಬಲಕಲ್ ಕಡೆ ಹೋಗುವ ರಸ್ತೆಗಳಲ್ಲಿ ತೆಗ್ಗು ದಿನ್ನೆಗಳಿಂದ ಸಂಚಾರ ಸಂಪೂರ್ಣ ಆಳಾಗಿದ್ದು ರೈತನ ಎತ್ತಿನ ಬಂಡಿ, ಟಂಟಂ, ಟ್ರಾಕ್ಟರ್ ಸೇರಿದಂತೆ ಹಲವು ವಾಹನಗಳು ಹೋಗುವುದು ಕಷ್ಟವಾಗಿದ್ದು ರೈತರು ತೀವ್ರ ತೊಂದರೆಯಲ್ಲಿ ನರಳುತ್ತಿದ್ದಾರೆ. ರಸ್ತೆಯ ಎರಡೂ ಬದಿಗಳಲ್ಲಿ ಜಾಲೆ ಕಂಟಿಗಳು ಬೆಳೆದಿದ್ದು, ಎದುರಿಗೆ ಬರುವ ವಾಹನಗಳು ಕಾಣದೆ ಅಪಘಾತದ ಭೀತಿ ಉಂಟಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಅಖಿಲ ಭಾರತೀಯ ಕೊಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ. ಮುದ್ನಾಳ ಅವರು ಮಾತನಾಡಿ ರಸ್ತೆಯ ದುಸ್ಥಿತಿಯಿಂದ ದನಕರುಗಳು, ವಾಹನ ಸವಾರರು, ವಿದ್ಯಾರ್ಥಿಗಳು, ಸಾರ್ವಜನಿಕರು ಎಲ್ಲರೂ ಕಷ್ಟದಲ್ಲಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮಸ್ಯೆ ಕಡೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ರಸ್ತೆ ದುರಸ್ತಿ ಮತ್ತು ಜಾಲಿ ಕಂಟಿ ಸ್ವಚ್ಛಗೊಳಿಸಬೇಕು ಇಲ್ಲದಿದ್ದರೆ ಯಾದಗಿರಿ–ಸುರಪುರ–ಶಹಾಪುರ ಮುಖ್ಯರಸ್ತೆ ಬಂದ್ ಮಾಡಿ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ,” ಎಂದು ಎಚ್ಚರಿಕೆ ನೀಡಿದರು.
-ಉಮೇಶ್ ಕೆ ಮುದ್ನಾಳಅಖಿಲ ಭಾರತೀಯ ಕೊಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ
 

 kkeditor
                                    kkeditor                                 
                    
                 
                    
                 
                    
                 
                    
                 
                    
                 
                    
                 
                    
                 
    
             
    
             
    
             
    
             
    
             
    
             
    
 
    
 
    
 
    
 
    
 
    
                                        
                                     
    
 
    
