ಗಂವಾರ್ ಗ್ರಾಮ ಪಂ ಪಿಡಿಓ, ಅಧ್ಯಕ್ಷರು ಸೇರಿ ಅಂಗವಿಕರ ಹಣವೂ ಲೂಟಿ ಮಾಡಿದ್ದು ಅಪರಾಧವಲ್ಲವೇ? : ಮಲ್ಲಿಕಾರ್ಜುನ ಎಸ್. ಗಂವ್ಹಾರ ಆಗ್ರಹ
ಗಂವಾರ್ ಗ್ರಾಮ ಪಂ ಪಿಡಿಓ, ಅಧ್ಯಕ್ಷರು ಸೇರಿ ಅಂಗವಿಕರ ಹಣವೂ ಲೂಟಿ ಮಾಡಿದ್ದು ಅಪರಾಧವಲ್ಲವೇ? : ಮಲ್ಲಿಕಾರ್ಜುನ ಎಸ್. ಗಂವ್ಹಾರ ಆಗ್ರಹ
ಕಲಬುರಗಿ: ತಾಲೂಕಿನ ಗಂವಾರ್ ಗ್ರಾಮ ಪಂಚಾಯಿತಿಯಲ್ಲಿ 15 ನೇ ಹಣಕಾಸು ಆಯೋಗದಡಿಯಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಬಳಕೆಯಾಗಬೇಕಾದ ಹಣ ಲೂಟಿ ಮಾಡಿದ ಗಂವ್ಹಾರ ಗ್ರಾಮ ಪಂಚಾಯತ ಅಭಿವೃಧಿ ಅಧಿಕಾರಿ ಮತ್ತು ಅಧ್ಯಕ್ಷರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಎಸ್. ಗಂವ್ಹಾರ ಅವರು ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ಮೇಲ್ಕಂಡ ವಿಷಯಕ್ಕೆ ಸಂಬAಧಿಸಿದAತೆ 15 ಹಣಕಾಸು ಆಯೋಗದಡಿಯಲ್ಲಿ 2023-24 ನೇ ಮತ್ತು 2024-25 ನೇ ಸಾಲಿನಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಬಳಕೆಯಾಗಬೇಕಾದ ಹಣ ಗಂವ್ಹಾರ ಗ್ರಾಮ ಪಂಚಾಯತ ಅಭಿವೃಧಿ ಅಧಿಕಾರಿ ಮತ್ತು ಅಧ್ಯಕ್ಷರು ಸೇರಿ ಲೂಟಿ ಮಾಡಿರುತ್ತಾರೆ ಇದರ ಬಗ್ಗೆ ಕೇಳಿದರೆ ಅಂಗವಿಕಲರ ಕಲ್ಯಾಣಕ್ಕಾಗಿ ಬಳಕೆಯಾಗಬೇಕಾದ ಹಣ ಬೇರೆ ಕೆಲಸಕ್ಕೆ ಬಳಕೆಯಾಗಿದೆ ಎಂದು ಉಡಾಫೆ ಉತ್ತರ ನೀಡುತ್ತಾರೆ. ಈ ಹಣ ಬೇರೆ ಕೆಲಸಕ್ಕೆ ಬಳಕೆ ಮಾಡಲು ಅವಕಾಶವಿದೆಯೇ
ಎಂಬುವುದು ಮೇಲಾಧಿಕಾರಿಗಳು ಈ ಕೂಡಲೇ ಸ್ಪಷ್ಟಪಡಿಸಬೇಕು. ಅಲ್ಲದೆ 15ನೇ ಹಣಕಾಸು ಆಯೋಗದಡಿಯಲ್ಲಿ ಯಾವುದೇ ಕೆಲಸ ಮಾಡದೆ ಸುಳ್ಳು ದಾಖಲೆ ಸೃಷ್ಟಿ ಮಾಡಿ ಅಪಾರ ಪ್ರಮಾಣದ ಹಣ ಲೂಟಿ ಮಾಡಿದ್ದಾರೆ. ಈ ರೀತಿಯಾಗಿ ಲೂಟಿ ಮಾಡುವಲ್ಲಿ ನಿರತರಾದ ಈ ಲೂಟಿಕೊರರ ವಿರುದ್ಧ ಸೂಕ್ತ ಕ್ರಮ ಕೊನೆಗೊಂಡು ತನಿಕೆಗೆ ಆದೇಶ ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಂಡಿರುವ ನಾಲ್ನೋಡಿ ಅಂಗವಿಕಲರ ಹಣ ದುರ್ಬಳಕೆ ಮಾಡಿದ ಈ ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು. ಒಂದು ವೇಳೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗದೇ ಇದ್ದಲ್ಲಿ ತಮ್ಮ ಕಛೇರಿಯ ಮುಂದೆ ಗ್ರಾಮದ ನಾಗರಿಕರು ಮತ್ತು ಅನ್ಯಾಯಕ್ಕೊಳಗಾದ ಅಂಗವಿಕಲರು ಸೇರಿ ಧರಣ ಮಾಡಲಾಗುವುದು ಎಂದು ಮಲ್ಲಿಕಾರ್ಜುನ ಅವರು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.