ಬಸವಕಲ್ಯಾಣ : ಬೀದಿ ನಾಯಿಗಳ ಹಾವಳಿ ತಪ್ಪಿಸಿ
ಬಸವಕಲ್ಯಾಣ : ಬೀದಿ ನಾಯಿಗಳ ಹಾವಳಿ ತಪ್ಪಿಸಿ
ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಗರದ ಐಡಿಯಲ್ ಕೂಲ್ ಹೋಗುವ ದಾರಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿವೆ ಸಾರ್ವಜನಿಕರು ರಸ್ತೆಯ ಮೇಲೆ ನಡೆದುಕೊಂಡು ಹೋಗುವಾಗ ಅವರನ್ನು ಬೆನ್ನತ್ತಿ ಕಡಿಯುತ್ತಿವೆ ಅಲ್ಲದೆ ದ್ವಿಚಕ್ರ ವಾಹನದ ಮೇಲೆ ಹೋಗುವ ಸಂದರ್ಭದಲ್ಲಿ ವಾಹನದ ಹಿಂದುಗಡೆ ಬಂದು ಅವರಿಗೆ ಕಚ್ಚೋ ರೀತಿಯಲ್ಲಿ ತೊಂದರೆ ಮಾಡುತ್ತೇವೆ. ಶಾಲಾ ಮಕ್ಕಳು ಶಾಲೆಗೆ ಹೋಗುವಾಗ ಸಮಯದಲ್ಲಿ ಮಕ್ಕಳಿಗೆ ಮೈಮೇಲೆ ಬಿದ್ದು ಕಚ್ಚುವುದು ಖುದ್ದಾಗಿ ನೋಡಿದ್ದೇನೆ ಎಂದು ಜೆಡಿಎಸ್ ಪಕ್ಷದ ಮುಖಂಡ ಡಾ.ಜಿವೂದೀನ ಒತ್ತಾಯಿಸಿದ್ದಾರೆ.
ಸ್ಥಳೀಯ ಶಾಸಕರು ಈ ವಿಷಯ ಗಂಭೀರವಾಗಿ ತೆಗೆದುಕೊಂಡು ಸಂಬಂಧಪಟ್ಟ ಇಲಾಖೆಯವರಿಗೆ ಸೂಚಿಸಿ ಸಾರ್ವಜನಿಕರ ತೊಂದರೆ ನಿರ್ವಹಣೆ ಮಾಡಬೇಕು ಎಂದು ಅವರು ಹೇಳಿದರು.
ನಗರದ ಬೀದಿ ನಾಯಿಗಳನ್ನು ಹಿಡಿದು ಬೇರೆ ಕಡೆ ಸ್ಥಳಾಂತರಿಸಲು. ನಗರಸಭೆ ಪೌರಾಯುಕ್ತರು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದರು.
ನಗರದ ಎಲ್ಲಾ ಬಡಾವಣೆಗಳಲ್ಲಿ ಸಾರ್ವಜನಿಕರಿಗೂ ಹಾಗೂ ಮಕ್ಕಳಿಗೆ ಹೊರಗಡೆ ಬರಬೇಕಾದರೆ ಭಯದ ವಾತಾವರಣ ನಿರ್ಮಾಣವಾಗಿದೆ. ನಗರಸಭೆಯವರು ಕೂಡಲೇ ಬೀದಿ ನಾಯಿಗಳನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಡಬೇಕು ಎಂದು ಜೆಡಿಎಸ್ ಪಕ್ಷದ ಡಾ.ಜಿವೂದೀನ ನೀಲೆರ್ಕ ಕಾರ್ಯಾಧ್ಯಕ್ಷರಾದ ಆಕಾಶ್ ಕಂಡಾಳೆ ಮತ್ತು ಧನರಾಜ ಡಿ ರಾಜೋಳೆ ನಗರಸಭಾ ಪೌರಾಯುಕ್ತರಿಗೆ ತಿಳಿಸಿದ್ದಾರೆ.