ಜಯನಗರದಲ್ಲಿ ಡಿ.23 ರಂದು ಸಾರ್ವಜನಿಕ ಉದ್ಯಾನವನ ಉದ್ಘಾಟನೆ.

ಜಯನಗರದಲ್ಲಿ ಡಿ.23 ರಂದು ಸಾರ್ವಜನಿಕ ಉದ್ಯಾನವನ ಉದ್ಘಾಟನೆ.

ಜಯನಗರದಲ್ಲಿ ಡಿ.23 ರಂದು ಸಾರ್ವಜನಿಕ ಉದ್ಯಾನವನ ಉದ್ಘಾಟನೆ.

ಕಲಬುರಗಿ: ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಡಿಯಲ್ಲಿ ಬರುವ ಜಯನಗರದಲ್ಲಿ ನವಿಕರಿಸಿದ ಸಾರ್ವಜನಿಕ ಉದ್ಯಾನವನವನ್ನು ಡಿ.23 ಸೋಮವಾರರಂದು ಬೆಳಿಗ್ಗೆ 11:30ಕ್ಕೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ ಅವರು ಉದ್ಘಾಟಿಸುವರು.ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಮಹಾನಗರ ಪಾಲಿಕೆಯ ಮಹಾಪೌರ ಯಲ್ಲಪ್ಪ ನಾಯ್ಕೋಡಿ, ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ,ಜಿಲ್ಲಾ ಪಂಚಾಯತ್ ಕಲಬುರಗಿ ಇಂಜಿನಿಯರಿಂಗ್ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಮಲ್ಲಿಕಾರ್ಜುನ ಅಲ್ಲಿಪೂರ, ಜಿಲ್ಲಾ ಪಂಚಾಯತ್ ಕಲಬುರಗಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವಿಜಯಕುಮಾರ ರಾಠೋಡ ಆಗಮಿಸುವರು.ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ಜಯನಗರ ಅಭಿವೃದ್ಧಿ ಸಂಘದ, ಡಾಕ್ಟರ್ಸ ಕಾಲೋನಿ ಅಭಿವೃದ್ಧಿ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಜಯನಗರ ಬಡಾವಣೆಯ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.