ಶಿಸ್ತಿನ ಜೊತೆ ಒತ್ತಡ ನಿಭಾಯಿಸುವ ಕಲೆ ರೂಡಿಸಿಕೊಳ್ಳಿ, ಡಾ.ನಾರಾಯಣ ಮುತಾಲಿಕ್

ಶಿಸ್ತಿನ ಜೊತೆ ಒತ್ತಡ ನಿಭಾಯಿಸುವ ಕಲೆ ರೂಡಿಸಿಕೊಳ್ಳಿ, ಡಾ.ನಾರಾಯಣ ಮುತಾಲಿಕ್

ಶಿಸ್ತಿನ ಜೊತೆ ಒತ್ತಡ ನಿಭಾಯಿಸುವ ಕಲೆ ರೂಡಿಸಿಕೊಳ್ಳಿ, ಡಾ.ನಾರಾಯಣ ಮುತಾಲಿಕ್

ಬಾಗಲಕೋಟೆ: ಶಿಸ್ತಿನ ಜೊತೆ ಒತ್ತಡ ನಿಭಾಯಿಸುವ ಕಲೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಡಾ. ನಾರಾಯಣ ಮುತಾಲಿಕ್ ಹೇಳಿದರು. ನವನಗರದ ಅಂಬೇಡ್ಕರ ಭವನದಲ್ಲಿ ಆರ್ಯಭಟ ಅರೆ ವೈದ್ಯಕೀಯ ಮಹಾವಿದ್ಯಾಲಯ ಆಯೋಜಿಸಿದ್ದ ಆರ್ಯಭಟ ಹಬ್ಬ 2024 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಜೀವನದಲ್ಲಿ ನಗು ಬಂದಾಗ ನಗುವುದು, ಯಾರ ಮೇಲೂ ಅಸಮಾಧಾನ ಉಂಟಾದಾಗ ಜಗಳವಾಡುವುದು, ಬೇಸರವಾದಾಗ ಅತ್ತು ಬಿಡುವುದು ಇವೆಲ್ಲಾ ವ್ಯಕ್ತಿತ್ವಕ್ಕೆ ಸಹಜವೇ. ಒತ್ತಡದ ಬದುಕಿನಲ್ಲಿ ಸುಖ, ದುಃಖ, ಸಂತೋಷಗಳನ್ನು ಸಮಾನವಾಗಿ ಸ್ವೀಕರಿಸಿ ಬದುಕಿದರೆ ಯಶಸ್ಸು ಸಾಧ್ಯ.

ಎಂದು ಕಿವಿಮಾತು ಹೇಳಿದರು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಡಾ. ಜಯರಾಜ ಮೇತ್ರಿ ಮಾತನಾಡಿ ಶಿಸ್ತು, ಸಮಯ ಪ್ರಜ್ಞೆ ಮತ್ತು ಆತ್ಮವಿಶ್ವಾಸ ಹೊಂದಿದ್ದರೆ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ದೃಶ್ಯಾಂತ ಖುಷಿಯವರು ಮಾತನಾಡಿ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಕಠಿಣ ಪರಿಶ್ರಮವಹಿಸಿ ಓದಬೇಕು. ಮಹಾವಿದ್ಯಾಲಯದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬಹುದು. ಕೇವಲ ಡಿಪ್ಲೊಮಾ ಮಾಡಿದರೆ ಸಾಲದು, ಭವಿಷ್ಯದ ಚಿಂತನೆ ಇರಬೇಕು ಎಂದರು. 

ಗೌರಿ ಚಂದ್ರಶೇಖರ ನಾಯಕ ಮಾತನಾಡಿ ಜೀವನದಲ್ಲಿ ಛಲವಿದ್ದರೆ ಯಾವುದೇ ಕೆಲಸ ಅಸಾಧ್ಯವಿಲ್ಲ. ಹೆಣ್ಣು ಅಬಲೆಯಲ್ಲ ಸಬಲೆ ಎಂಬುದು ಜಗತ್ತಿಗೆ ತೋರಿಸಬೇಕು. ಮನುಷ್ಯನಿಗೆ ನಿಸ್ವಾರ್ಥ ಸೇವೆ, ಪರೋಪಕಾರಿ ಗುಣ ಇರಬೇಕು ಎಂದು ತಿಳಿಸಿದರು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡಲಾಯಿತು. ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಇದೆ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ಕಾರ್ಯದರ್ಶಿ ಪ್ರಶಾಂತ, ಮಸೂದಿ, ಅಧ್ಯಕ್ಷರಾದ ಶ್ರೀಮತಿ ಅನುಷಾ ಮಸೂದಿ ಹಾಗೂ ಕೋ. ಆರ್ಡೀನೇಟರ ಚನ್ನಮ್ಮ ದಾಸರ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.