ಸಚಿವ ಎಮ್.ಬಿ.ಪಾಟೀಲಗೆ ಮುರುಗೇಶ ನಿರಾಣಿ ಸವಾಲ |ತಾಕತ್ತಿದ್ದರೆ ಒಂದು ಸಂಸ್ಥೆ, ಕಾರ್ಖಾನೆ ಕಟ್ಟಿ ತೋರಿಸು

ಯಾರು ಕಟ್ಟಿರುವ ಸಂಸ್ಥೆಗೆ ಅಧ್ಯಕ್ಷನಾಗಿರುವೆ ಗೌಡಾ?
ತಾಕತ್ತಿದ್ದರೆ ಒಂದು ಸಂಸ್ಥೆ, ಕಾರ್ಖಾನೆ, ಕಟ್ಟಿ ತೋರಿಸು
ಸಚಿವ ಎಂ.ಬಿ.ಪಾಟೀಲಗೆ ಮುರುಗೇಶ ನಿರಾಣಿ ಸವಾಲ್
ಬಾಗಲಕೋಟೆ: ವಿಜಯಪುರದಲ್ಲಿ ಬಂಥನಾಳ ಶ್ರೀಗಳು ಹಾಗೂ ಹಲಕಟ್ಟಿಯವರು ಕಟ್ಟಿದ ಸಂಸ್ಥೆಗೆ ಅಧ್ಯಕ್ಷನಾಗಿ ಕುಳಿತು ಮಜಾ ಮಾಡುತ್ತಿರುವೆ ಗೌಡಾ! ನಿನಗೆ ತಾಕತ್ತಿದ್ದರೆ ಆ ಸಂಸ್ಥೆಯಿಂದ ಹೊರಗೆ ಬಂದು ಒಂದು ಸಂಸ್ಥೆ ಅಥವಾ ಕಾರ್ಖಾನೆ ಕಟ್ಟಿ ತೋರಿಸು ಎಂದು ಸಚಿವ ಎಂ. ಬಿ. ಪಾಟೀಲ್ ಮಾಜಿ ಸಚಿವ ಮುರುಗೇಶ್ ನಿರಾಣಿ ಸವಾಲ್ ಹಾಕಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸನ್ಮಾನ್ಯ ಎಂ ಬಿ ಪಾಟೀಲರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಚಲವಾದಿ ನಾರಾಯಣ ಸ್ವಾಮಿ ಅವರಿಗೆ ಏಕವಚನದಲ್ಲಿ ಒಬ್ಬ ಶೆಡ್ ಗಿರಾಕಿ ಎಂದು ಹಾಗೂ ಪಂಚಮಸಾಲಿಯ ಮುರುಗೇಶ ನಿರಾಣಿ ಅವರನ್ನು ದನ ಕಾಯುವ ಎನ್ನುವ ಶಬ್ದ ಬಳಸಿದ್ದಾರೆ. ಎಂಬಿ ಪಾಟೀಲರೇ ರಾಜ್ಯಕ್ಕೆ ನನ್ನ ಕೊಡುಗೆ ಏನು ಎಂಬ ನಿಮ್ಮ ಪ್ರಶ್ನೆಗೆ ನನ್ನ ಅವಧಿಯಲ್ಲಿ ರೈತರಿಗೆ ಸಾಕಷ್ಟು ಅನುಕೂಲ ಆಗಿದೆ. ಎಷ್ಟು ಜನರಿಗೆ ಉದ್ಯೋಗ ನೀಡಿದ್ದೇನೆ. ನಾನು ನಿಮಗಿಂತ ಹದಿನೈದು ವರ್ಷ ಮುಂಚೆಯೇ ನಾನು ಕೈಗಾರಿಕೆ ಸಚಿವನಾಗಿದ್ದು ಯಾವುದೇ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಕೇವಲ ಗಾಳಿಯಲ್ಲಿ ಗುಂಡು ಹಾರಿಸುವ ಹಾಗೆ ಅಪಾದನೆ ಮಾಡಿದ್ದೀರಿ ಹೊರತು ಯಾವುದೇ ಆರೋಪಗಳಲ್ಲಿ ಹುರುಳು ಇಲ್ಲ ಎಂದು ಗುಡುಗಿದರು.
ಎಂಬಿಪಿ, ಗಾಜಿನ ಮನೆಯಲ್ಲಿ ಇದ್ದು, ಬೇರೆಯವರ ಮನೆಗೆ ಕಲ್ಲು ಒಗಿಬೇಡ
ಮಿಸ್ಟರ್ ಎಂ.ಬಿ. ಪಾಟೀಲ್ ನಿನ್ನ ಅಧಿಕಾರ ದರ್ಪ, ಗೌಡಕಿಯನ್ನ ಮೇಲೆ ತೋರಿಸಬೇಡ. ನಾನು 9 ವರ್ಷ ಸಚಿವನಾಗಿದ್ದೆ ನಾನು ಏನೇನು ಮಾಡಿರೋದು ಬಗ್ಗೆ ನಿನ್ನ ಕಚೇರಿಯಲ್ಲಿಯೇ ಎಲ್ಲ ಫೈಲ್ ಗಳು ಇವೆ. ನನ್ನ ಜೀವ ಜಾಲಾಡಿಸುತ್ತೇನೆ ಎಂದು ಹೇಳಿದ್ದೆಯಲ್ಲ ಎಲ್ಲಾ ನಿನ್ನ ಕಚೇರಿಯಲ್ಲಿಯೇ ಇದೆ ಜಾಲಾಡಿಸು ನೋಡೋಣ. ಇದರಲ್ಲಿ ನಿರಾನಿಯವರು ತಪ್ಪು ಮಾಡಿದ್ದಾರೆ ಎಂದು ಕ್ರಮ ಕೈಗೊಳ್ಳು ಅದಕ್ಕೆ ನಾನು ತಲೆಬಾಗುತ್ತೇನೆ. ಒಂದು ನೆನಪಿಟ್ಟುಕೋ ನೀನು ಗಾಜಿನ ಮನೆಯಲ್ಲಿದ್ದುಕೊಂಡು ಮತ್ತೊಬ್ಬರ ಮನೆಗೆ ಕಲ್ಲು ಒಗಿಬೇಕಾದರೆ ಹುಷಾರಾಗಿ ಯೋಚಿಸಿ ಮಾತನಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು. ನೀನು ನೀರಾವರಿ ಸಚಿವರಾಗಿದ್ದಾಗ ಎಷ್ಟು ಭ್ರಷ್ಟಾಚಾರಗಳಾಗಿವೆ. ಕಳೆದ ಒಂದುವರೆ ವರ್ಷದಲ್ಲಿ ಕೆಐಡಿಬಿಯಿಂದ ಯಾರ್ಯಾರ್ ಹೆಸರಿ ಮೇಲೆ ಜಾಗ ಖರೀದಿಸಿದ ಬಗ್ಗೆ ಕಾಲ ಬಂದಾಗ ಹೇಳುವೆ. ನಿನ್ನ ತಾಟದಲ್ಲಿ ಹೆಗ್ಗಣ ಬಿದ್ದಿದ್ದೆ. ಮತ್ತೊಬ್ಬರ ತಾಟದಲ್ಲಿ ನೊಣ ಹುಡುಕುವ ಕೆಲಸ ನೀನು ಮತ್ತು ಕಾಂಗ್ರೆಸ್ನವರು ಮಾಡುತ್ತಿದ್ದೀರಿ ಎಂದು ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದರು. ವಿಜಯಪುರದಲ್ಲಿ ಬಂಥನಾಳ ಶ್ರೀಗಳು ಹಾಗೂ ದಿ. ಹಳಕಟ್ಟಿಯವರು ಹಲವು ಪುಣ್ಯಾತ್ಮರು ಕಟ್ಟಿದ ಸಂಸ್ಥೆ ಹುತ್ತಿನಲ್ಲಿ ಹಾವಾಗಿ ಬಂದು ಬಿ.ಎಲ್.ಡಿ. ಸಂಸ್ಥೆಗೆ ಅಧ್ಯಕ್ಷನಾಗಿ ಮಜಾ ಮಾಡುತ್ತಿರುವೆ ಗೌಡಾ! ಮತ್ತೊಬ್ಬರ ಬಗ್ಗೆ ಎಚ್ಚರಿಕೆಯಿಂದ ಆರೋಪ ಮಾಡಬೇಕು ಎಂದರು. ನಿನಗೆ ತಾಕತ್ತಿದ್ದರೆ ಆ ಸಂಸ್ಥೆಯನ್ನು ಬಿಟ್ಟು ಹೊರಗೆ ಬಂದು ಒಂದು ಸಂಸ್ಥೆ ಅಥವಾ ಕಾರ್ಖಾನೆ ಸ್ಥಾಪಿಸು ನಿನ್ನ ಯೋಗ್ಯತೆ ಎಲ್ಲರಿಗೂ ತಿಳಿಯುತ್ತದೆ ಎಂದು ಸವಾಲ್ ಹಾಕಿದರು.
ವಿಜಯಪುರ ಮತ್ತು ಕೋಲ್ಹಾರ ಮಧ್ಯದಲ್ಲಿ ಬಸವೇಶ್ವರ ಸಕ್ಕರೆ ಕಾರ್ಖಾನೆಗೆ ಜಾಗ ಪಡೆದುಕೊಳ್ಳುವಾಗ ರೈತರಿಗೆ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದಕ್ಕಾಗಿ ಕಾರ್ಖಾನೆ ಸ್ಥಾಪಿಸುವ ಉದ್ದೇಶದಿಂದ ಖರೀದಿಸಿ ತಮಿಳುನಾಡಿನವರಿಗೆ ಮಾರಾಟ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು. ? ನಿಮ್ಮ ಯೋಗ್ಯತೆಗೆ ಒಂದೇ ಒಂದು ಕಾರ್ಖಾನೆ ಸ್ಥಾಪಿಸಲು ಆಗಲಿಲ್ಲ ಮತ್ತೊಬ್ಬರ ಯೋಗ್ಯತೆ ಬಗ್ಗೆ ಮಾತನಾಡುವುದು ನಿನಗೆ ನೈತಿಕತೆ ಇಲ್ಲ ಎಂದು ಗುಡುಗಿದರು.
ಕಾಂಗ್ರೆಸ್ ನವರು ಗಾಳಿಯಲ್ಲಿ ಗುಂಡು ಹೊಡೆಯುವುದು ನಿಲ್ಲಿಸಲಿ
ಸಿಎಂ ಸಿದ್ದರಾಮಯ್ಯನವರು ಒಬ್ಬ ವಕೀಲರಾಗಿ ಕೆಲಸ ಮಾಡಿದ್ದಾರೆ, ಡಿಕೆ ಶಿವಕುಮಾರ್ ಅವರು ಅನುಭವಿ ರಾಜಕಾರಣಿಗಳು. ಇವರಿಗೆ ನನ್ನದೊಂದು ಪ್ರಶ್ನೆ ನೀವು ನಾಲ್ಕು ಜನರ ಮೇಲೆ ಪ್ರಾಸಿಕ್ಯೂಷನ್ ಇದೆ ಹೇಳುತ್ತಿದ್ದೀರಿ ಹೊರತು, ಯಾವ ಪ್ರಕರಣ ಎಂದು ಹೇಳುತ್ತಿಲ್ಲ ಯಾಕೆ? ನಿರಾಣಿ ಅವರ ಮೇಲೆ ಈ ಪ್ರಕರಣದಿಂದ ಸರ್ಕಾರಕ್ಕೆ ಇಷ್ಟು ನಷ್ಟವಾಗಿದೆ ಎಂದು ಯಾಕೆ ಸ್ಪಷ್ಟಪಡಿಸುತ್ತಿಲ್ಲ, ಕೇವಲ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ ಎಂದು ದೂರಿದರು. 2022ರ ಜಾಗತಿಕ ಹೂಡಿಕೆದಾರರ ಸಮಾವೇಶದ ಕಿರು ಚಿತ್ರ ನಿರ್ಮಾಣಕ್ಕೆ ಬಿಬಿಪಿ ಸ್ಟುಡಿಯೋ ಒಪ್ಪಿಗೆ ನೀಡಿರುವ ವಿಷಯ ನನ್ನ ಗಮನಕ್ಕೆ ಬಂದ ಕೂಡಲೇ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಬಾರದು ಎಂದು ಸೂಚನೆ ನೀಡಿ ದಿ. 21.10.2022 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಇವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು. ನನ್ನಿಂದ ಸರ್ಕಾರಕ್ಕೆ ಮತ್ತು ಇಲಾಖೆಗೆ 450.00 ಲಕ್ಷ ರೂ. ಹಾನಿಯಾಗುವುದನ್ನು ತಪ್ಪಿದೆ. ಇದನ್ನು ದ್ವಿ ಸದಸ್ಯ ಪೀಠ ಕೂಡ ಹೇಳಿದೆ ಎಂದು ತಿಳಿಸಿದರು.
2022ರ ಜಾಗತಿಕ ಹೂಡಿಕೆದಾರರ ಸಮಾವೇಶದ ಕಿರುಚಿತ್ರಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಪ್ರಸ್ತಾಪಿಸಿರುವ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.