ಕಾಲಹರಣ ಮಾಡದೇ ರಾಜ್ಯ ಸರಕಾರ ಮಸೂದೆ ಮರಳಿ ಅಂಕಿತಕ್ಕೆ ರಾಜ್ಯಪಾಲರಿಗೆ ಕಳುಹಿಸಲು ಒತ್ತಾಯ
ಒಳಮೀಸಲಾತಿ ಜಾರಿಗೆ ಸಲ್ಲಿಸಿದ ಮಸೂದೆ ಮರಳಿ ಸರಕಾರಕ್ಕೆಮರಳಿಸಿರುವ ರಾಜ್ಯಪಾಲರ ನಡೆಗೆ ಖಂಡಿಸಿದ ಜಿಲ್ಲಾ ಮಾದರ ಮಹಾಸಭಾ
ಕಾಲಹರಣ ಮಾಡದೇ ರಾಜ್ಯ ಸರಕಾರ ಮಸೂದೆ ಮರಳಿ ಅಂಕಿತಕ್ಕೆ ರಾಜ್ಯಪಾಲರಿಗೆ ಕಳುಹಿಸಲು ಒತ್ತಾಯ
ಚಿಂಚೋಳಿ : 3 ದಶಕದ ಹೋರಾಟದ ಫಲವಾಗಿ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ದಾಸ್ ಆಯೋಗ ಸಲ್ಲಿಸಿದ್ದ ವರದಿಯ ಅನುಸಾರವಾಗಿ ಮಾದಿಗ ಸಮಾಜದ ಒಳಮೀಸಲಾತಿ ಜಾರಿಗಾಗಿ ಸಿದ್ದರಾಮಯ್ಯ ಸರಕಾರ ಬೆಳಗಾವಿ ಅಧಿವೇಶನದಲ್ಲಿ ಅನುಮೋದಿಸಿ ಕಳುಹಿಸಿರುವ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದೇ ಮರಳಿ ಸರಕಾರಕ್ಕೆ ಕಳುಹಿಸಿರುವುದಕ್ಕೆ ಕರ್ನಾಟಕ ಮಾದರ ಮಹಾಸಭಾ ತ್ರೀವ್ರವಾಗಿ ಖಂಡಿಸಿದೆ. ಮರಳಿಸಿರುವ ಮಸೂದೆಯನ್ನು ಮರಳಿ ರಾಜ್ಯಪಾಲರಿಗೆ ಸಲ್ಲಿಸುವಂತೆ ಕೋರಿ ಸರಕಾರಕ್ಕೆ ಮಹಾಸಭಾ ಮನವಿ ಸಲ್ಲಿಸಿದೆ.
ಮಹಾಸಭಾದ ಜಿಲ್ಲಾಧ್ಯಕ್ಷ ಗೋಪಾಲರಾವ ಕಟ್ಟಿಮನಿ ಮಾತನಾಡಿ, 3 ದಶಕದ ಹೋರಾಟಕ್ಕೆ ರಾಜ್ಯ ಸರಕಾರ ಮಾದಿಗ ಸಮಾಜಕ್ಕೆ ಒಳಮೀಸಲಾತಿ ಒದಗಿಸಲು ಬೆಳಗಾವಿ ಅಧಿವೇಶನದಲ್ಲಿ ಅನುಮೋದಿಸಿ ಕಳುಹಿಸಿರುವ ಮಸೂದೆಯನ್ನು ರಾಜ್ಯಪಾಲರು ತಿರಸ್ಕರಿಸಿ ಹಿಂದೆಕೆ ಕಳುಹಿಸಿರುವುದು ರಾಜ್ಯಪಾಲರ ನಡೆ ತ್ರೀವ್ರ ಖಂಡನೆ ವ್ಯಕ್ತಪಡಿಸುವಂತಹದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ದಾಸ್ ಆಯೋಗ ಸಲ್ಲಿಸಿದ್ದ ವರದಿಯ ದತ್ತಾಂಶದಂತೆ ಅಂಗಿಕರಿಸಿ ಒಳಮೀಸಲಾತಿಯ ಮಸೂದೆಯನ್ನು ಸರಕಾರ ಪುನಃ ಮರಳಿ ರಾಜ್ಯಪಾಲರಿಗೆ ಸಲ್ಲಿಸಬೇಕು. ಸಲ್ಲಿಸಲು ವಿಳಂಬ ನೀತಿ ಅನುಸರಿಸಿದರೆ ಇಡೀ ರಾಜ್ಯದ್ಯಾಂತ ಮಾದರ ಮಹಾಸಭಾ ಮತ್ತು ಒಳಮೀಸಲಾತಿ ಹೋರಾಟಗಾರರು ಮತ್ತೋಮ್ಮೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆಂಬ ಸಂದೇಶದ ಮನವಿ ಪತ್ರಕ್ಕೆ ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾ ಅಧ್ಯಕ್ಷ ಗೋಪಾಲರಾವ ಕಟ್ಟಿಮನಿ, ಹಿರಿಯ ಮುಖಂಡ ಶಾಮರಾವ ಕೊರವಿ, ಮಲ್ಲು ಕೊಡಂಬಲ್, ವಿಜಯರಾಜ್ ಕೊರಡಂಪಳ್ಳಿ, ನರಸಪ್ಪ ಕಿವಣೂರ್ ಅವರ ಸಹಿಯೊಂದಿಗೆ ಚಿಂಚೋಳಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
