ಗುರುಮಠಕಲ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯೋತ್ಸವ ಪೂರ್ವಭಾವಿ ಸಭೆ ನಡೆಯಿತು

ಗುರುಮಠಕಲ್: ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಪೂರ್ವಭಾವಿ ಸಭೆ

ಇಂದು ಗುರುಮಠಕಲ್ ನಗರ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ ಹಾಗೂ ನೂತನ ತಾಲೂಕು ಪದಾಧಿಕಾರಿಗಳ ಸಭೆ ನೆರವೇರಿತು. ಸಭೆಯನ್ನು ತಾಲೂಕು ಘಟಕದ ಅಧ್ಯಕ್ಷರಾದ ಶರಣಬಸಪ್ಪ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶರಣಬಸಪ್ಪ ಅವರು, “ಸಂಘಟನೆಯ ಸಿದ್ದಾಂತಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಗ್ರಾಮ ಮಟ್ಟದಲ್ಲಿ ಹೊಸ ಘಟಕಗಳನ್ನು ಸ್ಥಾಪಿಸಿ ಸಂಘಟನೆಯನ್ನು ಬಲಪಡಿಸುವುದರೊಂದಿಗೆ ಗುರುಮಠಕಲ್ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು,” ಎಂದು ಹೇಳಿದರು.

ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಕರವೇ ಮುಖಂಡರುಗಳಾದ ಭೀಮಾಶಂಕರ ಪಡಿಗೆ, ಮೌನೇಶ್ ಮಾಧ್ವಾರ, ದೇವಸಿಂಗ್ ಮಾಧ್ವಾರ, ಶರಣು, ವೆಂಕಟೇಶ್ ಚಿಟಕನಪಲ್ಲಿ, ಭೀಮು ಬುದುರ್, ಭೂಪಾಲ್ ಯಾದ್ಲಾಪುರ, ನಿಂಗಪ್ಪ ಕರಣಿಗಿ, ಬಸಪ್ಪ ದಳಪತಿ ಗೋಪಾಲಪುರ, ರಮೇಶ್ ಬುಡ್ರಾಮಾ ಮಾಧ್ವಾರ, ಭೀಮಣ್ಣ ಮಡಿವಾಳ ಗುಂಜನೂರ್, ತಾಯಪ್ಪ ಕಾಳೆಬೆಳಗುಂದಿ, ಬನ್ನಯ್ಯ ಕಾಳೆಬೆಳಗುಂದಿ, ಪ್ರಭು ಮಾಧ್ವಾರ, ಅನಿಲ್ ವಂಕಸಂಬ್ರ, ಮಂಜು ಸಣ್ಣಸಂಭ್ರ, ವೆಂಕಟೇಶ್ ಮಡಿವಾಳ, ಹನಮಂತ ಬೋವಿ, ಅನಿಲ್ ಪತ್ತಾರ್ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.