ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಭೇಟಿ ಮಾಡಿ ವಚನ ಮಂಟಪ ಕುರಿತು ಸಚಿವ ಪ್ರಿಯಾಂಕ ಖರ್ಗೆ ಚರ್ಚೆ

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಭೇಟಿ ಮಾಡಿ ವಚನ ಮಂಟಪ ಕುರಿತು ಸಚಿವ ಪ್ರಿಯಾಂಕ ಖರ್ಗೆ ಚರ್ಚೆ

ಕಲಬುರಗಿ: ವಚನ ಮಂಟಪ ಯೋಜನೆಯ ರೂಪುರೇಷೆ ಕುರಿತು ಚರ್ಚಿಸಲು ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ ಅವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಇಂದು ಭೇಟಿ ಮಾಡಿ ವಿಶ್ವ ಗುರು ಬಸವಣ್ಣನವರ ತತ್ವ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಸವ ಸಮಿತಿಗೆ ಮುಂದಿನ ವರ್ಷಕ್ಕೆ 60 ವಸಂತಗಳು ತುಂಬಲಿದೆ.

ಬಸವಣ್ಣನವರ ವಚನಗಳನ್ನು ಚೈನೀಸ್, ಜಪಾನೀಸ್ ಮತ್ತು ಉಜ್ಬೆಕ್ ಸೇರಿದಂತೆ 83 ಭಾಷೆಗಳಿಗೆ ಅನುವಾದಿಸಲು ಜತ್ತಿ ಅವರು ಶ್ರಮಿಸಿದ್ದಾರೆ. ಅವರೊಂದಿಗಿನ ಚರ್ಚೆ ತಂಬಾ ಮಹತ್ವಪೂರ್ಣದ್ದಾಗಿತ್ತು ಎಂದು ಖರ್ಗೆ ಹೇಳಿದ್ದಾರೆ.