ಭಗೀರಥ ಬಡಾವಣೆಯ ನಿವಾಸಿಗಳ ಭವಣೆಗಳಿಗೆ ಮುಕ್ತಿ ಎಂದು

ಭಗೀರಥ ಬಡಾವಣೆಯ ನಿವಾಸಿಗಳ ಭವಣೆಗಳಿಗೆ ಮುಕ್ತಿ ಎಂದು
ಸ್ಮಾರ್ಟ್ ಸಿಟಿಯಲ್ಲೊಂದು ಮನೆಯ ಮಾಡಿ ಪಾಲಿಕೆ ಸೇವೆ ದೊರೆಯದಿದ್ದರೆಂತಯ್ಯ ಎನ್ನುವ ಹಿರಿಯರ ಮಾತು ನೆನಪಿಸಿಕೊಳ್ಳುತ್ತಾ
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರತಿಷ್ಠಿತ ಡಿ. ಸಿ. ಎಂ. ಟೌನಶಿಪ್ ಹಿಂಬಾಗದ ವಾರ್ಡ್ ನಂಬರ್ 32 (ಹೊಸ ವಾರ್ಡ್ 4) ಬಾವಜಿ ಬಡಾವಣೆಯ 8 ನೇ ಕ್ರಾಸ್ ಕೆಳಬಾಗ ಭಗೀರಥ ಲೇ ಔಟ್ 2 ಮತ್ತು 3 ನೇ ತಿರುವಿನ ಕೊನೆಯಲ್ಲಿ ಯು.ಜಿ.ಡಿ. ಓಪನ್ ಆಗಿ ಒಂದು ವರ್ಷವೇ ಕಳೆದಿದೆ ಸಂಬಂಧಪಟ್ಟವರಿಗೆ ಹಾಗೂ ಮಹಾನಗರ ಪಾಲಿಕೆಯ ಸಿಬ್ಬಂದಿಗಳಿಗೆ ತಿಳಿಸದರೂ ಯಾವುದೇ ಸ್ಪಂದನೆ ಬಂದಿರುವುದಿಲ್ಲ.
ಡ್ರೈನೇಜ್ ಓಪನ್ ಆಗಿರುವುದರಿಂದ ಇಡೀ ಬಡಾವಣೆಯ ನಿವಾಸಿಗಳು ದುರ್ನತವನ್ನು ಸೇವಿಸುತ್ತ ಬದುಕುವ ಭಾಗ್ಯ ದೊರೆತಿದೆ. ಈ ಜಾಗದ ಪಕ್ಕದಲ್ಲಿಯೇ ಒಂದು ಅಪಾರ್ಟ್ಮೆಂಟ್ ನಿರ್ಮಾಣಗೊಳ್ಳುತ್ತಿದ್ದೂ ಸಂಬಂಧಿಸಿದವರಿಗೂ ಯು. ಜಿ. ಡಿ ಯನ್ನು ಮುಂದುವರಿಸಲು ಕೇಳಿದಾಗ ಇನ್ನೊಂದಿಷ್ಟು ಸಮಯ ಏನೂ ಮಾಡಲು ಆಗುವುದಿಲ್ಲವೆಂದು ಹೇಳುತ್ತಾರೆ.
ಸದರಿ ಯು. ಜಿ. ಡಿ. ಯ ನೀರು ನಿಂತಿರುವುದರಿಂದ ಈ ಜಾಗ ಸೊಳ್ಳೆಗಳ ಉಗಮ ಸ್ಥಾನವಾಗಿದೆ. ಅಲ್ಲದೆ ಹರ್ ಘರ್ ಕಾ ಜಲ್ ಕಾರ್ಯ ಮುಗಿದಿದ್ದರೂ ಅಲ್ಲಲ್ಲಿ 5-6 ಅಡಿ ಆಳದ ಗುಂಡಿಗಳನ್ನು ತೆಗೆದು ಹಾಗೆ ಬಿಟ್ಟಿರುತ್ತಾರೆ ಇದರಿಂದ ಮಹಿಳೆಯರಿಗೆ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರುಗಳಿಗೆ ಓಡಾಡಲು ಕಷ್ಟವಾಗುತ್ತಿದೆ. ಇರೊಂದಿಗೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣವೇ ಇಲ್ಲ ಎನ್ನುವಂತಾಗಿದೆ, ಹಾಗೂ ಬೆಳಿಗ್ಗೆ ಮತ್ತು ರಾತ್ರಿ ಸೊಳ್ಳೆಗಳ ಕಡಿತದಿಂದ ಅನೇಕ ರೋಗಗಳು ಬಂದು ನರಳುವಂತಾಗಿದೆ. UGD ಯಿಂದ ಬರುವ ವಾಸನೆಯಿಂದ ನೆಮ್ಮದಿಯಾಗಿ ಊಟ ಮಾಡದ ಪರಿಸ್ಥಿತಿ ಎದುರಾಗಿದೆ. ಎಲ್ಲಾ ರೀತಿಯ ತೆರಿಗೆಗಳನ್ನು ಸಕಾಲದಲ್ಲಿ ಪಾವತಿ ಮಾಡಿದ್ದರೂ ಸೇವೆಯಿಂದ ವಂಚಿತವಾರಾಗಿರುವುದು ಈ ಬಡಾವಣೆಯ ನಿವಾಸಿಗಳ ಕರ್ಮವೇ ಸರಿ. ಸ್ಮಾರ್ಟ್ ಸಿಟಿಯಲ್ಲೊಂದು ಮನೆಯ ಮಾಡಿ ಪಾಲಿಕೆ ಸೇವೆ ದೊರೆಯದಿದ್ದರೆಂತಯ್ಯ ಎನ್ನುವ ಹಿರಿಯರ ಮಾತು ನೆನಪಾಗುತ್ತವೆ.
ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ / ಸಂಸ್ಥೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಭಗೀರಥ ಬಡಾವಣೆಯ ನಿವಾಸಿಗಳ ಭವಣೆ ನಿವಾರಿಸಿ ನೆಮ್ಮದಿಯ ಬದುಕಿಗೆ ಭರವಸೆ ನೀಡುವರೇ!!?
ಡಾ. ಉಮೇಶ್ ಬಾಬು ಮಠದ್ (ಉಬಾಮ) ಸಾಹಿತಿ ಹಾಗೂ ಸಾಮಾಜಿಕ ಚಿಂತಕರು,ಭಗೀರಥ ಬಡಾವಣೆಯ ನಿವಾಸಿ, ದಾವಣಗೆರೆ
9606363449