ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ 77ನೇ ಗಣತಂತ್ರ ದಿನಾಚರಣೆ ಸಂಭ್ರಮದಿಂದ

ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ  77ನೇ ಗಣತಂತ್ರ ದಿನಾಚರಣೆ ಸಂಭ್ರಮದಿಂದ

ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ 

77ನೇ ಗಣತಂತ್ರ ದಿನಾಚರಣೆ ಸಂಭ್ರಮದಿಂದ

ಮಂಡ್ಯ ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ, ಕರ್ನಾಟಕ ಸರ್ವೋದಯ ಮಂಡಲ ಹಾಗೂ ಓಂ ಶ್ರೀ ನಿಕೇತನ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ 77ನೇ ಗಣತಂತ್ರ ದಿನಾಚರಣೆ ಸಂಭ್ರಮದಿಂದ ನಡೆಯಿತು.

ಈ ಸಂದರ್ಭದಲ್ಲಿ ಕಾರಾಗೃಹದ ಅಧೀಕ್ಷಕಿ ಶ್ರೀಮತಿ ಶಾಂತಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮನಪರಿವರ್ತನೆಯ ಅಗತ್ಯತೆ ಮತ್ತು ಸಾಧ್ಯತೆಗಳ ಕುರಿತು ಡಾ. ಹೆಚ್.ಎಸ್. ಸುರೇಶ್ ಹಾಗೂ ನ್ಯಾಯವಾದಿ ಎಂ. ಪುಟ್ಟೇಗೌಡ ಅವರು ಮಾತನಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಅಧೀಕ್ಷಕಿ ಶ್ರೀಮತಿ ಅನುಪಮಾ ಅವರು ವಹಿಸಿದ್ದರು. ಶಿಕ್ಷಕ ಶಿವಲಿಂಗಯ್ಯ ಅವರು ಸ್ವಾಗತಿಸಿದರು.

ಬೆಂಗಳೂರು ಅಕ್ಷಯನಗರ ಬಡಾವಣೆಯ ಸೌ. ಸುಜಾತ ಕೃಷ್ಣ ಭಟ್ ತಂಡದ ಕಲಾವಿದರು ಆಕರ್ಷಕ ಹಾಗೂ ವಿನೂತನ ಕಾಲ್ಗೊಂಬೆ ನೃತ್ಯ ಪ್ರದರ್ಶನ ನೀಡಿದರು. ಇದೇ ವೇಳೆ ವಿಚಾರಣಾಧೀನ ಬಂಧಿತರಲ್ಲಿ ಕೆಲವರು ಹಾಡುಗಳ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಪರಿವರ್ತಿತ ಖೈದಿ ಮುಂಬೈನ ಲಕ್ಷ್ಮಣ್ ತುಕಾರಾಂ ಗೋಲೆ ಅವರ ಜೀವನಾಧಾರಿತವಾಗಿ ಸುರೇಶ್ ಅವರು ರಚಿಸಿದ ‘ಪಾತಕಲೋಕದಿಂದ ಗಾಂಧೀಯಾನದಡೆಗೆ’ ಕಿರುಪುಸ್ತಕದ ಪ್ರತಿಗಳನ್ನು ಹಾಗೂ ಸಿಹಿ ವಿತರಣೆಯನ್ನು ಓಂ ಶ್ರೀ ನಿಕೇತನ ಟ್ರಸ್ಟ್ ವತಿಯಿಂದ ಬಂಧಿತರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರೊ. ಎನ್. ರಾಮು, ಪ್ರೊ. ಕೆ.ಬಿ. ಧನಂಜಯ, ಕೊಳಲು ಸಂಪಾದಕ ಡಿ.ಎನ್. ಶ್ರೀಪಾದು, ಪತ್ರಕರ್ತರಾದ ವೇಣು, ಬಸವರಾಜು, ಕೃಷ್ಣ ಭಟ್, ನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.