ನರೇಗಲ್ಲ ಪಟ್ಟಣದಲ್ಲಿ ಹಿಂದೂ ಸಮ್ಮೇಳನ, ಅದ್ದೂರಿ ಶೋಭಾಯಾತ್ರಾ ಕಾರ್ಯಕ್ರಮ
ಕಲ್ಯಾಣ ಕಹಳೆ ನ್ಯೂಸ್ ಗೆ ಸ್ವಾಗತ ಸುಸ್ವಾಗತ
ನರೇಗಲ್ಲ ಪಟ್ಟಣದಲ್ಲಿ ಹಿಂದೂ ಸಮ್ಮೇಳನ, ಅದ್ದೂರಿ ಶೋಭಾಯಾತ್ರಾ ಕಾರ್ಯಕ್ರಮ
ಗದಗ ಜಿಲ್ಲೆಯ,ಗಜೇಂದ್ರಗಡ ತಾಲೂಕಿನ, ನರೇಗಲ್ಲ ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಶನಿವಾರ ಭಾರತ ಮಾತೆ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿತು. ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಯಾತ್ರೆಗೆ ಚಾಲನೆ ನೀಡಿದರು.
ಗದಗ ಮಾರ್ಗದ ಕೊಂತಿ ಮಲ್ಲಯ್ಯ ದೇವಸ್ಥಾನದಿಂದ ಆರಂಭವಾದ ಈ ಯಾತ್ರೆ ಗ್ರಾಮದೇವಿ ದೇವಸ್ಥಾನ, ಸಂತೆ ಬಜಾರದ ಗಣೇಶ ಗುಡಿ, ಪಾದಗಟ್ಟಿ, ಮಾರೆಮ್ಮ ಜೊತೆಗ ಹಲೇಬಸ್ ನಿಲ್ದಾಣ. ಜಕ್ಕಲಿಕ್ರಾಸ್, ಹೊಸ ಬಸ್ ನಿಲ್ದಾಣದ, ಪಟ್ಟಣ ಪಂಚಾಯಿತಿ ಮೂಲಕ ಸಂಚರಿಸಿ ಮೂಲ ಸ್ಥಳಕ್ಕೆ ತಲುಪಿತು.
ಯಾತ್ರೆಯಲ್ಲಿ ಕರಡಿ ಮಜಲು, ಭಜನಾ ಮೇಳ, ದುರಗಮರಗಿ ನೃತ್ಯ, 2508 ವಾದ್ಯ, ಡೊಳ್ಳು, ನಂದಿ ಕೋಲು ಸೇರಿದಂತೆ ವಿವಿಧ ಕಲಾ ತಂಡಗಳು ಆಕರ್ಷಿಸಿದವು. ಭಾರತಮಾತಾ ಕೀ ಜೈ, ಸನಾತನ ಧರ್ಮಕ್ಕೆ ಜಯವಾಗಲಿ, ಹಿಂದೂ ಧರ್ಮಕ್ಕೆ ಜಯವಾಗಲಿ, ಹರಹರ ಮಹಾದೇವ ಎಂದು ಘೋಷಣೆಗಳನ್ನು ಜನರು ಯಾತ್ರೆಯೂದ್ದಕ್ಕೂ ಕೂಗಿಸಂಭ್ರಮಿಸಿದರು.
ನಂತರ ವೇದಿಕೆ ಕಾರ್ಯಕ್ರಮವು ಹಿರೇಮಠದ ಸಮುದಾಯ ಭವನದಲ್ಲಿ ಆರಂಭಗೊಂಡಿತು ಹಿಂದೂ ಸಮ್ಮೇಳನ, ಅದ್ದೂರಿ ಶೋಭಾಯಾತ್ರೆಯ ಕುರಿತು ಹಲವಾರು ಗಣ್ಯ ಮಾನ್ಯರು ಮಾತನಾಡಿದರು, ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಷ.ಬ , ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ ವಚನನೀಡಿದರು
ಹಾಗೆಯೇ ಈ ಕಾರ್ಯಕ್ರಮದಅಧ್ಯಕ್ಷತೆಯನ್ನು ಬಸವರಾಜ ಒಂಕಲಕುಂಟಿ ಯವರು ವಹಿಸಿದ್ದರು ಮುಖ್ಯ ಅತಿಥಿಸ್ಥಾನವನ್ನು ದೀಲೀಪ ವರ್ಣಿಕರ, ರವಿ ದಂಡಿನ್, ಉಮೇಶ್ ಪಾಟೀಲ್, ಮುತ್ತಣ್ಣ ಕಡಗ, ರಾಜೇಂದ್ರ ಗಜ್ಜಿನಮಠ, ಉಮೇಶ್ ಸಂಗಾಳ್ ಮಠ ಮುತ್ತಣ್ಣ ಪಲ್ಲೆದ, ಜಗದೀಶ್ ಸಂಕನ ಗೌಡ್ರ, ರಾಜು ವಂಕಲಕುಂಟಿ ಮಹದೇವಪ್ಪ ಬೇವಿನಕಟ್ಟಿ,ಶಿವಪುತ್ರಪ್ಪ ಸಂಗನಾಳ, ವಿರೂಪಾಕ್ಷಪ್ಪ ಸಂಗನಾಳ, ಮುತ್ತು ಗೆದಿಗೇರಿ, ಸುರೇಶ್ ರಾಯಬಾಗಿ, ಮಹೇಶ್ ಶಿವಶಂಕರ್ ಮೌನೇಶ್ ಹೊಸಮನಿ,ಈರಣ್ಣ ಗುಜುಮಾಗಡಿ, ಆನಂದ್ ಕುಲಕರ್ಣಿ ಮಂಜುನಾಥ್ ಹೆಗಡೆ,ರಘುನಾಥ್ ಕೊಂಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು
ಈ ಕಾರ್ಯಕ್ರಮದ ನಿರೂಪಣೆಯನ್ನು ರಘುನಾಥ ಕೊಂಡಿ ನಿರೂಪಿಸಿದರು ಹಾಗೆಯೇ ಕಾರ್ಯಕ್ರಮದಲ್ಲಿ ವಂದನಾರ್ಪಣೆಯನ್ನು ಆರ್ ಕೆ ಗಚ್ಚಿಮಠ ರವರು ನೆರವೇರಿಸಿದರು
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
